27th July 2024
Share

TUMAKURU: SHAKTHIPEETA FOUNDATION

ತುಮಕೂರು ನಗರದ ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯ ಪಾರ್ವತಿ ನಿಲಯ, ವಿಶ್ವದ 7 ದೇಶಗಳ, 108 ಶಕ್ತಿಪೀಠಗಳ ಸಂಗಮವಾಗಲಿದೆ. ಬಹುಷಃ ಕುಂದರನಹಳ್ಳಿ ರಮೇಶ್ ರವರು 108 ಶಕ್ತಿಪೀಠಗಳ ಮಾಹಿತಿಯನ್ನು, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ ಕುಂದರನಹಳ್ಳಿಯ ಗಂಗಮಲ್ಲಮ್ಮನ ದೇವಾಲಯದಲ್ಲಿ ಸಂಗ್ರಹಿಸಲು ಆಲೋಚನೆ ಮಾಡಿದ್ದರು.

 ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಬಗ್ಗನಡುಕಾವಲ್‍ನಲ್ಲಿ ಶಕ್ತಿಪೀಠ ಕ್ಯಾಂಪಸ್ ಆರಂಭಿಸಿದ್ದಾರೆ. ಆದರೇ ಶಕ್ತಿಪೀಠಗಳ/ದೇವತೆಗಳ ಆದೇಶ ಇವೆರಡು ಬಿಟ್ಟು ಮೊದಲು, ತುಮಕೂರಿನಲ್ಲಿ ಶಕ್ತಿಭವನ ನಿರ್ಮಾಣ ಮಾಡಿ, ಅಧ್ಯಯನ ಮತ್ತು ಸಂಶೋಧನೆ ಮಾಡುವುದಾಗಿತ್ತು.

ಈಗಾಗಲೇ ಈ ಕಟ್ಟಡದ ನಿರ್ಮಾಣ, ಇತರೆ ಸಲಹೆ, ದೇವಾಲಯಗಳ ತೀರ್ಥ ಮತ್ತು ಇತರೆ ಉಪಕರಣಗಳು ಸೇರಿದಂತೆ,  ಕರ್ನಾಟಕ ರಾಜ್ಯದ 18 ಜಿಲ್ಲೆಯ ಮತ್ತು ಭಾರತ ದೇಶದ 16 ರಾಜ್ಯದ ಜನರು ಒಂದಲ್ಲ ಒಂದು ಸೇವೆ, ಕಾಯಕ, ನೆರವು ಮಾಡಿರುವುದು ಒಂದು ವಿಶೇಷ.

ಅವರ ಗುರಿ ಈ ಶಕ್ತಿಭವನ ಕಟ್ಟಡ ಮತ್ತು ಶಕ್ತಿಪೀಠ ಕ್ಯಾಂಪಸ್ ಗೆ ವಿಶ್ವದ ಆನೇಕ ದೇಶಗಳು, ಭಾರತ ದೇಶದ ಎಲ್ಲಾ ರಾಜ್ಯಗಳ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಜನರು ಮತ್ತು ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮಗಳ ಮತ್ತು ಬಡಾವಣೆಗಳ ಜನರು ಭೇಟಿ ನೀಡುವಂತಾಗಬೇಕು ಅಥವಾ ವಿವಿಧ ಸೇವೆ ಮಾಡುವ ಮೂಲಕ ಶಕ್ತಿಪೀಠ ಫೌಂಡೇಷನ್ ಉದ್ದೇಶಗಳೊಂದಿಗೆ ಕೈಜೋಡಿಸ ಬೇಕು ಎಂಬುದಾಗಿದೆ.

ಬಹುಷಃ ಮುಂದಿನ 3 ವರ್ಷಗಳಲ್ಲಿ ವಿಶ್ವದ 7 ದೇಶಗಳ 108 ಶಕ್ತಿಪೀಠಗಳಿಗೂ ಭೇಟಿ ನೀಡುವುದು ಮತ್ತು ಅಲ್ಲಿನ ಜನರನ್ನು ಇಲ್ಲಿಗೆ ಕರೆತಂದು ಸಮಾಲೋಚನೆ ಮಾಡುವ ಹಾಗೂ ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯಲ್ಲಿ ನಿಖರವಾದ ಮಾಹಿತಿ ಸಂಗ್ರಹಿಸಲು ಸಹಕಾರ ನೀಡುವ  ಗುರಿಹೊಂದಿದ್ದಾರೆ.

ಆದ್ದರಿಂದ ಆಸಕ್ತರು ಸಹಕರಿಸಲು ಬಹಿರಂಗ ಮನವಿ ಮಾಡಿದ್ದಾರೆ.

ಶಕ್ತಿಭವನ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಗಳು.

  1. ತುಮಕೂರು ಜಿಲ್ಲೆ
  2. ಚಿತ್ರದುರ್ಗ ಜಿಲ್ಲೆ
  3. ಹಾಸನ ಜಿಲ್ಲೆ
  4. ಚಿಕ್ಕಮಗಳೂರು ಜಿಲ್ಲೆ
  5. ಗದಗ ಜಿಲ್ಲೆ
  6. ಬಿಜಾಪುರ ಜಿಲ್ಲೆ
  7. ಬಾಗಲಕೋಟೆ ಜಿಲ್ಲೆ
  8. ಚಿಕ್ಕಬಳ್ಳಾಪುರ ಜಿಲ್ಲೆ.
  9. ಶಿವಮೊಗ್ಗ ಜಿಲ್ಲೆ.
  10. ಮಂಡ್ಯ ಜಿಲ್ಲೆ.
  11. ಬೆಂಗಳೂರು ಜಿಲ್ಲೆ.
  12. ಬೆಂಗಳೂರು ಗ್ರಾಮಾಂತರ ಜಿಲ್ಲೆ
  13. ದಕ್ಷಿಣ ಕನ್ನಡ ಜಿಲ್ಲೆ.
  14. ಉತ್ತರ ಕನ್ನಡ ಜಿಲ್ಲೆ
  15. ಗುಲ್ಬರ್ಗ ಜಿಲ್ಲೆ
  16. ಬೆಳಗಾವಿ ಜಿಲ್ಲೆ
  17. ಯಾದಗಿರಿ ಜಿಲ್ಲೆ
  18. ರಾಮನಗರ ಜಿಲ್ಲೆ

ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಹಾಗೂ ಗಂಗಾ ಜಲ/ತೀರ್ಥಗಳನ್ನು ನೀಡಿರುವ ಶಕ್ತಿದೇವತೆಗಳ ರಾಜ್ಯಗಳು.

  1. ಕರ್ನಾಟಕ
  2. ಉತ್ತರಪ್ರದೇಶ
  3. ಬಿಹಾರ
  4. ರಾಜಸ್ಥಾನ
  5. ಗುಜರಾತ್
  6. ದೆಹಲಿ
  7. ತಮಿಳುನಾಡು
  8. ಆಂಧ್ರ
  9. ಅಸ್ಸಾಂ
  10. ತೆಲಂಗಾಣ
  11. ಜಮ್ಮು
  12. ಹರಿಯಾಣ
  13. ಚಂಡಿಗಡ
  14. ಹಿಮಾಚಲ
  15. ಉತ್ತರಖಾಂಡ
  16. ಮಧ್ಯಪ್ರದೇಶ

-ಅಗೋಚರಶಕ್ತಿ