3rd February 2025
Share

TUMAKURU:SHAKTHIPEETA FOUNDATION

ಶಿವನ ಭಕ್ತರ ಭಾವನೆಗಳಂತೆ

  1. ಶಿವನ ಜಯಂತಿ ದಿವಸವಂತೆ.
  2. ಶಿವ ಭೂಮಿಗೆ ಬಂದು ತನ್ನ ಭಕ್ತರಿಗೆ ಆಶೀರ್ವಾದ ಮಾಡುವ ದಿವಸವಂತೆ.
  3. ಶಿವ ಪ್ರಜಾಪತಿ ದಕ್ಷಬ್ರಹ್ಮನ ಮಗಳಾದ ಸತಿಯನ್ನು ವಿವಾಹವಾದ ದಿವಸವಂತೆ.
  4. ಸಮುದ್ರ ಮಂಥನದಿಂದ ಬಂದ ಹಾಲಹಾಲ ಕಾರ್ಕೋಟಕ ವಿಷವನ್ನು  ಶಿವ ಕುಡಿದ ದಿವಸವಂತೆ.
  5. ಬ್ರಹ್ಮ ಮತ್ತು ವಿಷ್ಣು ನಾನು ದೊಡ್ಡವನು, ನಾನು ದೊಡ್ಡವನು ಎಂದು ದೊಡ್ಡತನ ತೋರ್ಪಡಿಸುವಾಗ, ಭೂಮಿಯ ಮೇಲೆ ಆದಿ-ಅಂತ್ಯವಿಲ್ಲದ ಶಿವಲಿಂಗ ಅವತರಿಸಿದಾಗ ವಿಷ್ಣುವು ಕೂರ್ಮನಾಗಿ ಭೂಮಿಯ ಆಳ ಮತ್ತು ಬ್ರಹ್ಮ ಪಕ್ಷಿಯಾಗಿ ಎತ್ತರ ನೋಡಲು ಹೋಗಿ ಇಬ್ಬರಿಗೂ ಆಳ, ಎತ್ತರ ಸಿಗದೆ ಇದ್ದಾಗ, ಶಿವ ಪ್ರತ್ಯಕ್ಷವಾದÀ ದಿವಸವಂತೆ.
  6. ಭಗಿರಥ ಗಂಗೆ ದೇವಲೋಕದಿಂದ ಭೂಮಿಗೆ ಬಂದಾಗ, ಆರಭಸವನ್ನು ಶಿವ ತನ್ನ ಜಡೆಯಲ್ಲಿ ತಡೆದು, ರಭಸ ಕಡಿಮೆ ಮಾಡಿ, ಭೂಮಿಗೆ ಬಿಟ್ಟ ದಿವಸವಂತೆ.
  7. ಮಾಘಮಾಸದ ಕ್ಷøಷ್ಣಪಕ್ಷ ಚೌತಿಯ ದಿವಸ ಅಜ್ಞಾನವನ್ನು ಓಡಿಸಿ, ಸುಜ್ಞಾನದ ಬೆಳಕನ್ನು ಶಿವ ನೀಡಿದ ದಿವಸವಂತೆ. 
  8. ಬೇಟೆಗೆ ಕಾಡಿಗೆ ಹೋಗಿದ್ದ ಬೇಡರೊಬ್ಬರು, ರಾತ್ರಿ ಆಯಿತು ಎಂದು, ಕಾಡಿನಲ್ಲಿ ಮರವೇರಿ ಕುಳಿತು, ಎಲೆಗಳನ್ನು ಕಿತ್ತುಹಾಕಿದ ದಿವಸವಂತೆ. ಕಾಕತಾಳೀಯವಾಗಿ ಮರ ಬಿಲ್ವ ಪತ್ರೆ ಮರವಂತೆ, ಕೆಳಗೆ ಪತ್ರೆ ಬಿದ್ದ ಜಾಗದಲ್ಲಿ  ಶಿವಲಿಂಗ ಇತ್ತಂತೆ.
  9. ಶಿವ ಬೇಡರಕಣ್ಣಪ್ಪನಿಗೆ ಕಣ್ಣು ಕೊಟ್ಟ ದಿವಸವಂತೆ.

ಶಿವನ ಬಗ್ಗೆ ಜ್ಞಾನ ಇರುವವರು, ನಿಖರವಾದ ದಾಖಲೆಗಳೊಂದಿಗೆ ಜ್ಞಾನದಾನ ಮಾಡಲು ಮನವಿ.

ಅಗೋಚರಶಕ್ತಿ.