TUMAKURU:SHAKTHIPEETA FOUNDATION
ಶಿವನ ಭಕ್ತರ ಭಾವನೆಗಳಂತೆ
- ಶಿವನ ಜಯಂತಿ ದಿವಸವಂತೆ.
- ಶಿವ ಭೂಮಿಗೆ ಬಂದು ತನ್ನ ಭಕ್ತರಿಗೆ ಆಶೀರ್ವಾದ ಮಾಡುವ ದಿವಸವಂತೆ.
- ಶಿವ ಪ್ರಜಾಪತಿ ದಕ್ಷಬ್ರಹ್ಮನ ಮಗಳಾದ ಸತಿಯನ್ನು ವಿವಾಹವಾದ ದಿವಸವಂತೆ.
- ಸಮುದ್ರ ಮಂಥನದಿಂದ ಬಂದ ಹಾಲಹಾಲ ಕಾರ್ಕೋಟಕ ವಿಷವನ್ನು ಶಿವ ಕುಡಿದ ದಿವಸವಂತೆ.
- ಬ್ರಹ್ಮ ಮತ್ತು ವಿಷ್ಣು ನಾನು ದೊಡ್ಡವನು, ನಾನು ದೊಡ್ಡವನು ಎಂದು ದೊಡ್ಡತನ ತೋರ್ಪಡಿಸುವಾಗ, ಭೂಮಿಯ ಮೇಲೆ ಆದಿ-ಅಂತ್ಯವಿಲ್ಲದ ಶಿವಲಿಂಗ ಅವತರಿಸಿದಾಗ ವಿಷ್ಣುವು ಕೂರ್ಮನಾಗಿ ಭೂಮಿಯ ಆಳ ಮತ್ತು ಬ್ರಹ್ಮ ಪಕ್ಷಿಯಾಗಿ ಎತ್ತರ ನೋಡಲು ಹೋಗಿ ಇಬ್ಬರಿಗೂ ಆಳ, ಎತ್ತರ ಸಿಗದೆ ಇದ್ದಾಗ, ಶಿವ ಪ್ರತ್ಯಕ್ಷವಾದÀ ದಿವಸವಂತೆ.
- ಭಗಿರಥ ಗಂಗೆ ದೇವಲೋಕದಿಂದ ಭೂಮಿಗೆ ಬಂದಾಗ, ಆರಭಸವನ್ನು ಶಿವ ತನ್ನ ಜಡೆಯಲ್ಲಿ ತಡೆದು, ರಭಸ ಕಡಿಮೆ ಮಾಡಿ, ಭೂಮಿಗೆ ಬಿಟ್ಟ ದಿವಸವಂತೆ.
- ಮಾಘಮಾಸದ ಕ್ಷøಷ್ಣಪಕ್ಷ ಚೌತಿಯ ದಿವಸ ಅಜ್ಞಾನವನ್ನು ಓಡಿಸಿ, ಸುಜ್ಞಾನದ ಬೆಳಕನ್ನು ಶಿವ ನೀಡಿದ ದಿವಸವಂತೆ.
- ಬೇಟೆಗೆ ಕಾಡಿಗೆ ಹೋಗಿದ್ದ ಬೇಡರೊಬ್ಬರು, ರಾತ್ರಿ ಆಯಿತು ಎಂದು, ಕಾಡಿನಲ್ಲಿ ಮರವೇರಿ ಕುಳಿತು, ಎಲೆಗಳನ್ನು ಕಿತ್ತುಹಾಕಿದ ದಿವಸವಂತೆ. ಕಾಕತಾಳೀಯವಾಗಿ ಮರ ಬಿಲ್ವ ಪತ್ರೆ ಮರವಂತೆ, ಕೆಳಗೆ ಪತ್ರೆ ಬಿದ್ದ ಜಾಗದಲ್ಲಿ ಶಿವಲಿಂಗ ಇತ್ತಂತೆ.
- ಶಿವ ಬೇಡರಕಣ್ಣಪ್ಪನಿಗೆ ಕಣ್ಣು ಕೊಟ್ಟ ದಿವಸವಂತೆ.
ಶಿವನ ಬಗ್ಗೆ ಜ್ಞಾನ ಇರುವವರು, ನಿಖರವಾದ ದಾಖಲೆಗಳೊಂದಿಗೆ ಜ್ಞಾನದಾನ ಮಾಡಲು ಮನವಿ.
–ಅಗೋಚರಶಕ್ತಿ.