24th April 2024
Share

TUMAKURU:SHAKTHIPEETA FOUNDATION

ದಿನಾಂಕ:01.08.1988 ರಂದು, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ನನ್ನ ಹುಟ್ಟೂರು ಕುಂದರನಹಳ್ಳಿ ಗಂಗಮಲ್ಲಮನ ದೇವಾಲಯದಲ್ಲಿ ಪೂಜೆ ಮಾಡುವ ಮೂಲಕ, ಈಗಿನ ಹೆಚ್.ಎ.ಎಲ್ ಘಟಕದ ಹೋರಾಟ ಮೌನವಾಗಿ ಆರಂಭವಾಯಿತು. 35 ವರ್ಷಗಳ ನಂತರ ಸಾಧನೆಯೂ’ ಆಯಿತು.ಹುಚ್ಚು ಮಾತ್ರ ಹಿಡಿಯಲಿಲ್ಲ.

ದಿನಾಂಕ:08.03.2024 ರಂದು ಮಹಾಶಿವರಾತ್ರಿ ದಿವಸ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೋಕು, ದಾಸಾನುಪುರ-2 ಹೋಬಳಿ, ಚಿಕ್ಕಬಿದರೆಕಲ್ಲು ಗ್ರಾಮದ, ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್ಮೆಂಟ್ ಆವರಣ ದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪ್ರತಿಷ್ಠಾಪನೆ ಮಾಡಿದ್ದ, ಶಿವನ ಸನ್ನಿಧಿ ಹಾಗೂ ಪಂಚವಟಿ ಗಿಡಗಳ ಸನ್ನಿಧಿಯಲ್ಲಿ, ರಾಜ್ಯಾಧ್ಯಾಂತ 545 ಅಧ್ಯಯನ ಪೀಠಗಳ ಸ್ಥಾಪನೆಗೆ ಧ್ಯಾನ’ ಮಾಡುವ ಮೂಲಕ ಹೋರಾಟ ಆರಂಭ ಮಾಡಲಾಗಿದೆ.

ಪಾರದರ್ಶಕತೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವ ಮೂಲಕ 2047 ರವರೆಗೂ ನಿರಂತರ ಹೋರಾಟ ನಮ್ಮ ಸಂಸ್ಥೆಯ ಗುರಿ.

‘ಹೆಚ್..ಎಲ್ ಮಾದರಿ ಹೋರಾಟ’ ಸುಲಭದ ಮಾತಲ್ಲ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನಿರಂತರ ಶ್ರಮ ಇತ್ತು. ಶ್ರೀ ಟಿ.ಆರ್.ರಘೋತ್ತಮರಾವ್ ರವರು ಎಂ.ಪಿ.ಯವರ ಅದೆಷ್ಟು ಪತ್ರಗಳನ್ನು ಬರೆದಿದ್ದಾರೋ ದೇವರೇ ಬಲ್ಲ.

ಈಗಲೂ ಶ್ರೀ ಟಿ.ಆರ್.ರಘೋತ್ತಮರಾವ್ ರವರು ನಾನು ಹೇಳಿದ ಎಲ್ಲಾ ಪತ್ರಗಳನ್ನು ಕ್ಷಣ ಮಾತ್ರದಲ್ಲಿ ಮಾಡುತ್ತಾರೆ. ಆದರೇ ಶ್ರೀ ಜಿ.ಎಸ್.ಬಸವರಾಜ್ ರವರು ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರ ಸಹಕಾರ ಕಷ್ಟದ ಮಾತು. ಅವರಿಗೆ ‘ಸರಿಸಮಾನದ ಸಾಟಿ ನನ್ನ ಪ್ರಕಾರ ಮತ್ಯಾರು ಬರಲಾರರು.

ಆದರೂ ಒಬ್ಬರು ಎಂ.ಪಿ ಅಥವಾ ಎಂ.ಎಲ್.ಎ ಜೊತೆಯಲ್ಲಿ ಇಲ್ಲದಿದ್ದರೆ, ಅಧಿಕಾರಿಗಳ ಭೇಟಿ ಬಹಳ ಕಷ್ಟ. ಅಧಿಕಾರಿಗಳ ಸಮಯ ನಿಗಧಿಗೂ ಕೆಲವರಿಗೆ ಲಂಚ ಕೊಡಬೇಕು. ಇಲ್ಲ ಕಾದು ಕಾದು ಸುಸ್ತಾಗಿ ಬರಬೇಕು. ಇದು ‘ನಮ್ಮ ದೇಶದ ದೌರ್ಭಾಗ್ಯ’.

ಶ್ರೀ ಜಿ.ಎಸ್.ಬಸವರಾಜ್ ರವರು ಅವರೇ ನಮ್ಮ ಮನೆಗೆ ಬಂದು ಕರೆದು ಕೊಂಡು ಹೋಗುತ್ತಿದ್ದರು. ನಾನು 10 ಕಚೇರಿಗಳಿಗೆ ಹೋಗಬೇಕೂ ಎಂದರೂ, ಎಂದು ಸಹ ಸಾಕಾಯಿತು ಎಂದು ಹೇಳಿದವರಲ್ಲ.

ದೆಹಲಿಗೂ ಸಹ ಅವರದೇ ವಿಮಾನ ಟಿಕೆಟ್‍ನಲ್ಲಿ ನನಗೂ ಪ್ರಯಾಣ, ಅವರ ಮನೆಯಲ್ಲಿಯೇ ವಾಸ್ಥಾವ್ಯ, ಇನ್ನೂ ಮುಂದೆ, ಈ ಖರ್ಚುಗಳೇ ನನಗೆ ದುಬಾರಿಯಾಗಲಿವೆ. ಜೊತೆಗೆ ನನ್ನ ಕಾರ್ಯವ್ಯಾಪ್ತಿ ರಾಜ್ಯಾಧ್ಯಾಂತ ವಿಸ್ತರಣೆಯಾಗಿದೆ.

ಆದ್ದರಿಂದ ‘545 ಆರ್ ಅಂಡ್ ಡಿ ವಿಷನ್ ಗ್ರೂಪ್’ ರಚಿಸಿ, ಪ್ರತಿ ನಿತ್ಯದ ವ್ಯವಹಾರಗಳ ಡಿಜಿಟಲೀಕರಣ ಮಾಡಲು ಉದ್ದೇಶಿಸಲಾಗಿದೆ. ಆಸಕ್ತರು ಗ್ರೂಪ್‍ಗೆ ಸೇರಬಹುದು. ನನ್ನ ಮೊದಲ ಆಧ್ಯತೆ ಪಾರದರ್ಶಕ.

ಇದೂವರೆಗೂ ನಾನು ರಚಿಸಿರುವ ಎಲ್ಲಾ ‘ಸೋಶಿಯಲ್ ಮೀಡಿಯಾ ಗ್ರೂಪ್ಗಳನ್ನು ಡೀಲೀಟ್ ಮಾಡುತ್ತೇನೆ. ಇನ್ನೂ ಮುಂದೆ ‘ಒಂದೇ ಗ್ರೂಪ್ಒಂದೇ ಕನಸು ನನ್ನ ಗುರಿಯಾಗಿದೆ, ಕ್ಷಮೆ ಇರಲಿ’. ಆಸಕ್ತರು ನನ್ನ ಸೋಶಿಯಲ್ ಮೀಡಿಯಾದಲ್ಲಿ ಸಂಪರ್ಕಿಸ ಬಹುದಾಗಿದೆ.