31st October 2024
Share

TUMAKURU:SHAKTHIPEETA FOUNDATION

ಕ್ರಮಾಂಕ:ಶಕ್ತಿ/1/2024 ದಿನಾಂಕ:22.03.2024

ಗೆ,

ಪ್ರಜಾಪತಿ ದಕ್ಷಬ್ರಹ್ಮ ಯಜ್ಞ ಮಾಡುವಾಗ ಶಿವನ ಪತ್ನಿ ಹಾಗೂ ತನ್ನ ಮಗಳಾದ ಸತಿಗೆ ಆಹ್ವಾನ ನೀಡಲಿಲ್ಲ, ಕರೆಯದೇ ಬಂದ ಸತಿಗೆ ತನ್ನ ಪುತ್ರಿ ಎಂದು ನೋಡದೇ ಅವಮಾನ ಮಾಡಿದ. ಇದರಿಂದ ನೊಂದ ಸತಿ ಯಜ್ಞ ಕುಂಡಕ್ಕೆ ಬಿದ್ದಳು. ಶಿವನ ಆದೇಶದಂತೆ ವೀರಭಧ್ರನು ದಕ್ಷಬ್ರಹ್ಮನ ತಲೆ ಕಡಿದ, ಸುಟ್ಟ ಸತಿಯ ದೇಹವನ್ನು ಹೊತ್ತು ಈಶ್ವರನು ಇಹ ಪರಗಳ ಪರಿವೆಯಿಲ್ಲದೆ ಸಂಚರಿಸುವಾಗ, ಭಯಭೀತರಾದ ದೇವತೆಗಳು ಮಹಾವಿಷ್ಣುವಿನ ಮೊರೆಹೋದರು.
ಆಗ ವಿಷ್ಣುವು ಸುಟ್ಟ ಸತಿಯ ದೇಹವಿರಬಾರದು ಎಂದು ಆಲೋಚಿಸಿ, ತನ್ನ ಸುದರ್ಶನ ಚಕ್ರದಿಂದ ಸತಿ ದೇಹವನ್ನು ಛಿದ್ರ-ಛಿದ್ರ ಮಾಡಿದ. ಇದರಿಂದ ದೇಹ, ರಕ್ತದ ಕಣಗಳು ಮತ್ತು ಆಭರಣಗಳು ಸೇರಿದಂತೆ ಸುಮಾರು 6400 ಭಾಗಗಳಾಗಿ, 108 ಕಡೆ ಬಿದ್ದಿದೆ, 72 ಕಡೆ ಬಿದ್ದಿದೆ, 51 ಕಡೆ ಬಿದ್ದಿದೆ 7-8 ದೇಶಗಳ ವಿಶ್ವದ್ಯಾಂತ ಬಿದ್ದಿದೆ ಎಂದು ಕೆಲವರು ಬರೆದು ಕೊಂಡಿದ್ದಾರೆ. ಅದರಲ್ಲಿ 108 ಕ್ಷೇತ್ರಗಳು ಪ್ರಾಮುಖ್ಯತೆ ಪಡೆದಿವೆ ಎಂಬ ಇತಿಹಾಸವಿದೆ,
ಈ ಸ್ಥಳಗಳೇ ಶಕ್ತಿಪೀಠಗಳಾಗಿವೆ ಎಂಬುದು ಐತಿಹ್ಯ, 108 ಶಕ್ತಿಪೀಠಗಳಲ್ಲಿ, 9 ನವದುರ್ಗೆಯರು, 4 ಆದಿ ಶಕ್ತಿಪೀಠ, 18 ಮಹಾಶಕ್ತಿಪೀಠ, 51 ಅಕ್ಷರ ಪೀಠಗಳು, ಮತ್ತು ಇತರೆ 57 ಉಪ ಪೀಠಗಳು ಎಂಬುದು ನಂಬಿಕೆ.
ಭಾರತ ದೇಶದಲ್ಲಿ-41 ಅಕ್ಷರ ಪೀಠಗಳು, ಬಾಂಗ್ಲಾದೇಶದಲ್ಲಿ-4, ನೇಪಾಳದಲ್ಲಿ-3, ಪಾಕಿಸ್ತಾನದಲ್ಲಿ-1, ಶ್ರೀಲಂಕಾದಲ್ಲಿ-1 ಮತ್ತು ಟಿಬಿಟ್‍ನಲ್ಲಿ -1 ಸೇರಿದಂತೆ ಒಟ್ಟು 51 ಅಕ್ಷರ ಪೀಠಗಳು ಮತ್ತು ಉಳಿದ 57 ಶಕ್ತಿ ಪೀಠಗಳು ಭಾರತದಲ್ಲಿ ವಿವಿಧ ದೇಶಗಳಲ್ಲಿನ ರಾಜ್ಯಗಳಲ್ಲಿವೆ. ಎಂಬ ನಂಬಿಕೆಯ ಮಾಹಿತಿ ಇದೆ. ಅವುಗಳ ನಿಖರವಾದ ಸ್ಥಳ ಮತ್ತು ಅಗತ್ಯ ಎಲ್ಲಾ ಮಾಹಿತಿಗಳ ಸಂಗ್ರಹ ಕಾರ್ಯ ಹಾಗೂ ಅಧ್ಯಯನ ಮತ್ತು ಸಂಶೋಧನೆ ಆರಂಭಿಸಲಾಗಿದೆ.
ಪ್ರಮುಖವಾಗಿ ಪ್ರತಿಯೊಂದು ಶಕ್ತಿಪೀಠದ ಪೂಜೆಗೆ ಬಳಸುವ ಹೂ, ಪತ್ರೆ ಒಂದೊಂದು ಗಿಡ-ಮರದ್ದು ಎಂಬ ನಂಬಿಕೆಗೆ ಅನುಗುಣವಾಗಿ ಆ ಎಲ್ಲಾ ಗಿಡಗಳನ್ನು ಒಂದೇ ಕಡೆ ಬೆಳೆಸುವುದೇ ಶಕ್ತಿಪೀಠ ವನ. ನಂತರ 108 ಫೋಟೊ ಅಥವಾ ವಿಗ್ರಹಗಳ ಪ್ರತಿಷ್ಠಾಪನಾ ಚಿಂತನೆಯು ಇದೆ.
108 ಶಕ್ತಿ ಪೀಠಗಳ ಜೊತೆಗೆ ಕೈಲಾಸ ಮತ್ತು ದಕ್ಷಬ್ರಹ್ಮನು ನಡೆಸಿದ ಯಜ್ಞದ ಜಾಗದ ಮಹತ್ವವೂ ಇರಬೇಕು ಎಂಬ ಕನಸು ನಮ್ಮದು. 108 ಶಕ್ತಿಪೀಠಗಳು, ಕೈಲಾಸದ ಚಿತ್ರಣ, ಯಜ್ಞನಡೆದ ಸ್ಥಳ, ಗಣಪತಿ ಪಾರ್ಕ್, ಜ್ಯೋರ್ತಿಲಿಂಗ, ರುದ್ರತಾಂಡವ ವಿಷ್ಣು ಚಕ್ರ ಮತ್ತು ಶಕ್ತಿಪೀಠ ಪಾರ್ಕ್ ಸೇರಿದಂತೆ ವಿವಿಧ ಪವಿತ್ರ ಸ್ಥಳಗಳ ಮಹಿಮೆ ಒಂದೇ ಕಡೆಯಲ್ಲಿರ ಬೇಕು ಎಂಬುದು ನಮ್ಮ ಆಲೋಚನೆ.
ಈ ವನವನ್ನು ಯಾವ ರೀತಿ ಬೆಳೆಸಬೇಕು ಎಂಬುದು ಒಂದು ಚಿಂತನೆ ಆರಂಭದಲ್ಲಿ ಇತ್ತು. ಭಾರತದ ನಕ್ಷೆ ಪ್ರಕಾರ ಶಕ್ತಿಪೀಠ ಇರುವ ಸ್ಥಳಗಳ ಪ್ರಕಾರ ಹಾಕುವುದು ಅಥವಾ ದೇಹದ ಭಾಗಗಳ ಆಧಾರದ ಮೇಲೆ ಕೂದಲಿನಿಂದ ಆರಂಭಿಸಿ ಪಾದದವರೆಗೆ ಅಂಗಾಂಗಳ ಪ್ರಕಾರ ಗಿಡಹಾಕಿ ನಾಮಫಲಕ ಹಾಕುವುದು ಎಂಬುದಾಗಿತ್ತು. ಪರಿಣಿತರ ಸಮಾಲೋಚನೆ ನಂತರ ಬಾರತ ಸೇರಿದಂತೆ ವಿವಿಧ ದೇಶಗಳ ನಕ್ಷೆಯನ್ನು, ಭೂಮಿಯ ಮೇಲೆ ಗುರುತು ಮಾಡಿ ನಕ್ಷೆ ಸಿದ್ಧಪಡಿಸಲಾಗಿದೆ.
ನಕೆಯಲ್ಲಿ ಇರುವ ಹಾಗೆ ನವಗ್ರಹಗಳ ಪ್ರಕಾರ ಆಯಾ ದಿಕ್ಕಿನಲ್ಲಿ ಆವರವರ ಗಿಡಗಳು ಲೈವ್ ಆಗಿ ಬೆಳೆಯುತ್ತಿವೆ. ಕೃತಕ ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ, ಹಿಂದೂಮಹಾಸಾಗರದಲ್ಲಿ ಒಂದು ಕೋಟಿ ಲೀಟರ್ ಮಳೆನೀರು ಸಂಗ್ರಹವಾಗುತ್ತಿದೆ. ಬೇಸಿಗೆಯಲ್ಲಿ ವಾಣಿವಿಲಾಸದ ಡ್ಯಾಂ ಕಾಲುವೆಯಿಂದ ನೀರು ಸಂಗ್ರಹ ಮಾಡುವ ಅವಕಾಶವೂ ಇದೆ.

ಯಜ್ಞ ನಡೆದ ಸ್ಥಳ ಮತ್ತು ಕೈಲಾಸ ಚಿತ್ರಣ ಕೊಡುವಂಥ ಗಿಡ ಹಾಕಲು ಚಿಂತನೆ ನಡೆಸಲಾಗಿದೆ, ಆದರೆ ನಿಖರವಾದ ಗಿಡ ಮತ್ತು ಪೀಠಗಳ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ಹಾಕುವುದು ಒಂದು ಗಂಭೀರ ವಿಷಯವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲು ಸ್ಥಾಪನೆಯಾಗಿರುವುದೇ ಶಕ್ತಿಪೀಠ ಫೌಂಡೇಷನ್.
ಆದಿಶಕ್ತಿಯನ್ನು ಈ ಪ್ರಪಂಚದಲ್ಲಿ ವಾಸಿಸುವ ಎಲ್ಲಾ ಜನಾಂಗದವರೂ ಆರಾಧಿಸುತ್ತಾರೆ ಬಡವರು ಶ್ರೀ ಕೆಂಪಮ್ಮ, ಶ್ರೀ ಮಾರಮ್ಮ ಎಂದು ಕರೆದರೆ, ಹಣವಂತರೂ ಶ್ರೀ ಕನಕಲಕ್ಮಿ, ಶ್ರೀ ಲಕ್ಷ್ಮಿ ಎಂತಲೂ, ಬುದ್ದಿವಂತರೂ ಶ್ರೀ ಪಾರ್ವತಿ/ಶ್ರೀ ಶಾರದಾಂಬೆ ಎಂತಲೂ, ಕೆಲವರು ಶ್ರೀ ಡೋಲಾಮಾತೆ ಎಂತಲೂ ಕರೆಯುತ್ತಾರೆ ಎಂಬ ಮಾತಿದೆ.
ಪ್ರಗತಿಪರರು ಸಹ ನೀರನ್ನು ಶ್ರೀ ಗಂಗಾಮಾತೆ ಎಂದು ಒಪ್ಪುತ್ತಾರೆ, ಅರ್ಥಾತ್ ಎಲ್ಲರೂ ಪೂಜಿಸುವ ಏಕೈಕ ದೇವತೆಯೇ ಶಕ್ತಿದೇವತೆ, ದೇವಿಗೆ ಹೆಸರು ನೂರಾರು, ಆದರೂ ಪಾರ್ವತಿ/ ಸತಿ ಒಬ್ಬಳೇ, ಭಕ್ತಿ ಮತ್ತು ಆರಾಧನೆ ವಿಭಿನ್ನವಾಗಿದ್ದರೂ ಒಂದೇ ಎಂಬ ನಂಬಿಕೆ ನಮ್ಮದಾಗಿದೆ.
ದಿನಾಂಕ:01.08.1998 ರಿಂದ ಒಂದು ದಿವಸವೂ ಬಿಡದೇ, ಒಂದು ಪುಟವನ್ನಾದರೂ ಶ್ರೀ ದೇವಿ ಪುಸ್ತಕ ಓದುವ ನಾನು, ಅಕಾಸ್ಮಾತ್ ಒಂದು ದಿವಸ ಓದುವುದನ್ನು ಮರೆತರೆ ಇಡೀ ಪುಸ್ತಕವನ್ನೆ ಆ ದಿವಸ ಓದುವ ಶಿಕ್ಷೆಯನ್ನು ಸ್ವಯಂ ಹಾಕಿಕೊಂಡಿದ್ದೇನೆ. ಈ ಪುರಾಣ ಓದುವ ಹವ್ಯಾಸವೇ, ಇಂದು ಶಕ್ತಿಪೀಠ ಕ್ಯಾಂಪಸ್ ಮಾಡುವ ಉದ್ದೇಶಕ್ಕೆ ಮೆಟ್ಟಿಲಾಗಿದೆ.
ಭಾರತ ದೇಶದ, ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲಾ ಕೇಂದ್ರದಲ್ಲಿ ನೂತನವಾಗಿ ಶಕ್ತಿಭವನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಶಕ್ತಿಪೀಠ ಮ್ಯೂಸಿಯಂ, ಅಧ್ಯಯನ ಮತ್ತು ಸಂಶೋಧನಾ ನಡೆಯಲಿದೆ.
ಈ ಕಟ್ಟಡದ ಆರಂಭದ ದಿವಸ ವಿಶ್ವದ 108 ಶಕ್ತಿಪೀಠಗಳ ಫೋಟೋ, ಪುರಾಣ ಗ್ರಂಥ, ನೀರು ಮತ್ತು ಮಣ್ಣು ಹೀಗೆ ಈ ಪತ್ರದ ಜೊತೆ ಲಗತ್ತಿಸಿರುವ ಪಟ್ಟಿಯಲ್ಲಿ ಇರುವ ಮಾಹಿತಿಗಳ ಸಂಗ್ರºವಾದ ದಿನವೇ ಆರಂಭ ಮಾಡಬೇಕು ಎಂಬ ಪರಿಕಲ್ಪನೆ ನಮ್ಮದಾಗಿದೆ.
ನಂತರ ಒಂದೊಂದು ಶಕ್ತಿಪೀಠಗಳ ನಿಖರವಾದ ಮಾಹಿತಿಯನ್ನು, ಭಾರತಸರ್ಕಾರ, ಶಕ್ತಿಪೀಠ ಇರುವ ವಿವಿದ ದೇಶಗಳ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತಗಳಿಂದ ಮಾಹತಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಭಾರತ ಸರ್ಕಾರ ಕಲ್ಚರ್ ಮತ್ತು ವಿವಿಧ ರಾಜ್ಯ ಸರ್ಕಾgಗಳÀ, ವಿವಿಧ ಇಲಾಖೆಯ ಸಹಬಾಗಿತ್ವದಲ್ಲಿ ವಿಶ್ವ 108 ಶಕ್ತಿಪೀಠಗಳ ಸಕ್ರ್ಯೂಟ್ ಅಭಿವೃದ್ಧಿ ಪಡಿಸುವ ಪ್ರಯತ್ನವೂ ಸಾಗಿದೆ.ಪ್ರತಿಯೊಂದು ಶಕ್ತಿಪೀಠದ ಸ್ಥಳಗಳಿಗೂ ಭೇಟಿ ನೀಡಲು ಉದ್ದೇಶಿಸಲಾಗಿದೆ.
ನೀರು ಮತ್ತು ಶಕ್ತಿಪೀಠಗಳಿಗೆ ಅವಿನಾಭಾವ ಸಂಭಂದವಿದೆ, ಗಂಗಾಮಾತೆಯೂ ಒಂದು ಶಕ್ತಿದೇವತೆ ಎಂಬ ನಂಬಿಕೆ ಇದೆ. ಆದ್ದರಿಂದ ವಿಶ್ವ ನೀರು ದಿನಾಚರಣೆಯ ದಿವಸವೇ ತಮಗೆಲ್ಲರಿಗೂ ಪತ್ರ ಬರೆಯಲಾಗಿದೆ ಎಂಬ ಆಂಶವನ್ನು ತಮ್ಮ ಆಧ್ಯಗಮನಕ್ಕೆ ತರಲಾಗಿದೆ.
ನಮ್ಮ ಆರಂಭಿಕ ಅಧ್ಯಯನ ಪ್ರಕಾರ ಸಂಗ್ರಹ ಮಾಡಿರುವ ವಿಶ್ವವಾರು, ದೇಶವಾರು, ರಾಜ್ಯವಾರು ಮತ್ತು ಜಿಲ್ಲಾವಾರು ಶಕ್ತಿಪೀಠಗಳ ಪಟ್ಟಿಯನ್ನು ಲಗತ್ತಿಸಲಾಗಿದೆ. ಆದ್ದರಿಂದ ತಾವೂ ಶಕ್ತಿಪೀಠಗಳ ಬಗ್ಗೆ ಇರುವ ಪೂರ್ಣವಾದ ಮಾಹಿತಿ ನೀಡಲು ಈ ಮೂಲಕ ಮನವಿ ಮಾಡಲಾಗಿದೆ.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ

(ಕುಂದರನಹಳ್ಳಿ ರಮೇಶ್) (ಕೆ.ಆರ್.ಸೋಹನ್)
ಛೇರ್‍ಮನ್/ ಮ್ಯಾನೇಜಿಂಗ್ ಟ್ರಸ್ಟಿ, ಸಿ.ಇ.ಓ