14th July 2024
Share

 TUMAKURU:SHAKTHIPEETA FOUNDATION

 ದಿನಾಂಕ:03.04.2024 ರಂದು ಬರೆದ ಪತ್ರದ ಸಾರಾಂಶ,

ಮಾನ್ಯರೇ

ವಿಷಯ: ಶಕ್ತಿಪೀಠ/ದುರ್ಗಾಮಾತೆ ಸಕ್ರ್ಯೂಟ್ ಬಗ್ಗೆ.

  ತಾವೂ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ಶ್ರೀ ರಾಮಮಂದಿರ ನಿರ್ಮಾಣ ಮಾಡಲು ಹೊರಟಿದ್ದಾರೆ. ನಾನು ಅದಕ್ಕಿತಂಲೂ ಹೆಚ್ಚಿನದ್ದಾದ ಶ್ರೀ ದುರ್ಗಾಮಾತೆಯ/ಶಕ್ತಿಪೀಠಗಳ ಭವ್ಯಮಂದಿg/ಕಾರಿಡಾರ್À ನಿರ್ಮಾಣ ಮಾಡುತ್ತೇನೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದೀರಿÀ, ತಮಗೆ ಧನ್ಯವಾದಗಳು.

  ನಾನೂ ಒಬ್ಬ ಶಕ್ತಿಪೀಠ ಆರಾಧಕನಾಗಿ ಓದಿ ಬಹಳ ಖುಷಿ ಪಟ್ಟಿದ್ದೆ, ನಂತರ ತಮ್ಮ ಸರ್ಕಾರದಿಂದ ಯಾವುದೇ ಹೇಳಿಕೆ ಮಾಧ್ಯಮಗಳಲ್ಲಿ ಬರಲಿಲ್ಲ. ಆದ್ದರಿಂದ ನಾನು ತಮ್ಮಲ್ಲಿ ಕೇಳುವುದೇನೆಂದರೆ, ತಮ್ಮ ಸರ್ಕಾರ  ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ, ಕಛೇರಿ ಟಿಪ್ಪಣೆಯೊಂದಿಗೆ ಮಾಹಿತಿ ನೀಡಲು ಮನವಿ.

  ನಮ್ಮ ಸಂಸ್ಥೆಯು ವಿಶ್ವದ 108 ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋಧನೆ ಮಾಡಲು ಆರಂಭಿಸಿದೆ, ಈ ಬಗ್ಗೆ ಅಡಕಗಳಲ್ಲಿ ಮಾಹಿತಿ ನೀಡಲಾಗಿದೆ.

   ತಮ್ಮ ಸರ್ಕಾರ ಇನ್ನೂ ಯಾವುದೇ ಚಟುವಟಿಕೆ ಆರಂಭಿಸಿದಿದ್ದರೆ, ನಮ್ಮ ಸಂಸ್ಥೆ,  ಪಶ್ಚಿಮಬಂಗಾಲ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅಧ್ಯಯನ ಮಾಡಿ, ವಿಶ್ವದ 108 ಶಕ್ತಿಪೀಠಗಳ ಸಕ್ರ್ಯೂಟ್ ರೂಪುರೇಷೆ ಮತ್ತು ಒಂದೇ ಕಡೆ ನಾವು ಮಾಡುತ್ತಿರುವ ಶಕ್ತಿಪೀಠ ಕ್ಯಾಂಪಸ್ ಮಾದರಿಯಲ್ಲಿ, ತಮ್ಮ ರಾಜ್ಯದಲ್ಲೂ ಅಥವಾ ಭಾರತ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಶಕ್ತಿಪೀಠ ಕ್ಯಾಂಪಸ್ ನಿರ್ಮಾಣ ಮಾಡಬಹುದಾಗಿದೆ.

   ಇದೊಂದು ಪವಿತ್ರವಾದ ಕಾರ್ಯವಾಗಲಿದೆ, ಆದ್ದರಿಂದ ಈ ಬಗ್ಗೆ ತಮ್ಮೊಂದಿಗೆ ಹಾಗೂ ತಮ್ಮ ಸರ್ಕಾರದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲು ಸಮಯ ನಿಗಧಿ ಮಾಡಲು ಈ ಮೂಲಕ ಕೋರಲಾಗಿದೆ.

ವಂದನೆಗಳೊಂದಿಗೆ                                                  ತಮ್ಮ ವಿಶ್ವಾಸಿ

                                              (ಕುಂದರನಹಳ್ಳಿ ರಮೇಶ್)

ನೋಡೋಣ ಅವರ ಪತ್ರಿಕಾ ಹೇಳಿಕೆ ಎಲ್ಲಿಗೆ ನಿಂತಿದೆ ?