TUMAKURU:SHAKTHIPEETA FOUNDATION
ಭಾರತ ದೇಶದಲ್ಲಿ ಡೀಮ್ಡ್, ಸೆಂಟ್ರಲ್, ಸ್ಟೇಟ್ ಮತ್ತು ಪ್ರೈವೇಟ್ ಎಂಬ ನಾಲ್ಕು ವಿಧದ ವಿಶ್ವ ವಿದ್ಯಾನಿಲಯಗಳು ಇವೆ. ಸುಮಾರು 1113 ವಿಶ್ವವಿದ್ಯಾನಿಲಯಗಳು ಇವೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರದ ಹೆಚ್.ಆರ್.ಡಿ ಅಡಿ ಬರುವ ಯೂನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ವ್ಯಾಪ್ತಿಗೆ ಬರುವ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿ ವಿಶ್ವದ 108 ಶಕ್ತಿಪೀಠಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಮಾಡಿರುವ ವರದಿಗಳ ಮಾಹಿತಿ ಸಂಗ್ರಹಿಸಲು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಲಾಗಿದೆ.
ಭಾರತ ದೇಶದಲ್ಲಿ ಇರುವ ಗ್ರಂಥಾಲಯಗಳಲ್ಲಿ ಶಕ್ತಿಪೀಠಗಳ ಬಗ್ಗೆ ಬರೆದಿರುವ ಪುಸ್ತಕಗಳು ಇದ್ದಲ್ಲಿ ಹುಡುಕುವ ಕೆಲಸವೂ ಆರಂಭವಾಗಿದೆ. ಪುಸ್ತಕ ಬರೆದಿರುವವರ ಪಟ್ಟಿ ಇದ್ದಲ್ಲಿ ಅವರ ಮಾಹಿತಿಗಳನ್ನು ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ.
- ಕೇಂದ್ರ ಸರ್ಕಾರದ ಕಲ್ಚರ್ ಸಚಿವಾಲಯದ ಅಡಿಯಲ್ಲಿ ಬರುವ ಗ್ರಂಥಾಲಯಗಳು.
- ಹೆಚ್.ಆರ್.ಡಿ ಅಡಿ ಬರುವ ಯೂನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ವ್ಯಾಪ್ತಿಗೆ ಬರುವ ಎಲ್ಲಾ ವಿಶ್ವ ವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ಇರುವ ಗ್ರಂಥಾಲಯಗಳು.
- ಕೇಂದ್ರ ಸರ್ಕಾರದ ಮಿನಿಸ್ಟ್ರಿ ಆಪ್ ಲೈಬ್ರರಿ ಅಡಿ ಬರುವ ಗ್ರಂಥಾಲಯಗಳು
- ಹೀಗೆ ಸಾದ್ಯವಿರುವ ಎಲ್ಲಾ ಗ್ರಂಥಾಲಯಗಳು
ಮಾಹಿತಿ ಇರುವವರು, ಜ್ಞಾನವಿರುವವರು ಹಂಚಿಕೊಳ್ಳಲು ಮನವಿ.