27th July 2024
Share

TUMAKURU:SHAKTHIPEETA FOUNDATION

 ಭಾರತ ದೇಶ ಚಂದ್ರಲೋಕದಲ್ಲಿ ಶಿವ-ಶಕ್ತಿ’ ಪಾಯಿಂಟ್ ಗುರುತಿಸಿ, ಅಧಿಕೃತವಾಗಿ ಘೋಶಿಸಿದೆ. ಎಲ್ಲಾ ಪ್ರಾಧಿಕಾರಗಳ ಮುದ್ರೆಯೂ ಬಿದ್ದಿದೆ ಎನ್ನಲಾಗುತ್ತಿದೆ, ಇದೊಂದು ಐತಿಹಾಸಿಕ.

ಆದರೇ ಸುಮಾರು 4000 ವರ್ಷಗಳ ಹಿಂದೆ ನಡೆದಿದೆ ಎನ್ನಲಾದ, ಇತಿಹಾಸದ ಶಕ್ತಿಪೀಠ’ ಗಳ ಬಗ್ಗೆ ಅಧಿಕೃತವಾಗಿ, ಭಾರತ ದೇಶದ ಯಾವುದೇ ಇಲಾಖೆಯ ಬಳಿ  ದಾಖಲೆಗಳು ಇಲ್ಲ ಎಂಬ ಅಂಶ ಬಹಳ ನೋವು ಉಂಟುಮಾಡಿದೆ. ನಮ್ಮ ದೇಶದ ಸಂಸ್ಕøತಿಗೆ ಒಂದು ಸವಾಲು ಎನಿಸಿದೆ. ಆದರೂ ನಮ್ಮ ಸಂಸ್ಥೆ ಈ ಕೆಲಸ ಮಾಡಲು ವಿಶ್ವದ 108 ಶಕ್ತಿಪೀಠಗಳು ಅವಕಾಶ ನೀಡಿರುವುದು ಹೆಮ್ಮೆ.

ಗೂಗಲ್‍ನಲ್ಲಿನ ದಾಖಲೆಗಳು ಮತ್ತು ಹಲವಾರು ಜನರು ಬರೆದಿರುವ ಶಕ್ತಿಪೀಠಗಳ ಪುಸ್ತಕದ ಆಧಾರದ  ಮೇಲೆ ಒಂದು ಪಟ್ಟಿ ಮಾಡಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಸುಮಾರು 43 ಶಕ್ತಿಪೀಠಗಳಿಗೆ ಅಧ್ಯಯನ ಮತ್ತು ಸಂಶೋಧನೆಗಾಗಿ ಶಕ್ತಿಪೀಠ ಫೌಂಡೇಷನ್ ತಂಡ ಭೇಟಿ ನೀಡಿದೆ.

ನಮ್ಮ ತಂಡದ ಅನುಭವದ ಆಧಾರದ ಮೇರೆಗೆ,

  1. ಭಾರತ ಸರ್ಕಾರದ ಕಲ್ಚರ್ ಸಚಿವಾಲಯ.
  2. ಭಾರತ ಸರ್ಕಾರದ ಕಲ್ಚರ್ ಸಚಿವಾಲಯದ, ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ.
  3. ಭಾರತ ಸರ್ಕಾರದ ಕಲ್ಚರ್ ಸಚಿವಾಲಯದ, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆಟ್ರ್ಸ್ ಅಡಿಯಲ್ಲಿನ, ನ್ಯಾಷನಲ್ ಮಿಷನ್ ಫಾರ್ ಮ್ಯಾನು ಸ್ಕ್ರಿಪ್ಟ್.
  4. ಭಾರತ ಸರ್ಕಾರದ ಪ್ರವಾಸೋಧ್ಯಮ ಸಚಿವಾಲಯ.
  5. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಯು.ಜಿ.ಸಿ, ಎಲ್ಲಾ ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿನ ಅಧ್ಯಯನ ಪೀಠಗಳಲ್ಲಿನ ಶಕ್ತಿಪೀಠ ಅಧ್ಯಯನ ವರದಿಗಳು.
  6. ಭಾರತ ಸರ್ಕಾರದ ಗ್ರಂಥಾಲಯ ಸಚಿವಾಲಯದ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ, ಇರುವ ಶಕ್ತಿಪೀಠಗಳ ಪುಸ್ತಕಗಳು ಹಾಗೂ ಅಧ್ಯಯನ ವರದಿಗಳು.
  7. ಭಾರತ ಸರ್ಕಾರದ ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಪ್ ಇಂಡಿಯಾದಲ್ಲಿ ಇರುವ ಶಕ್ತಿಪೀಠಗಳ ಪುಸ್ತಕಗಳು ಹಾಗೂ ಅಧ್ಯಯನ ವರದಿಗಳು.
  8. ಭಾರತ ದೇಶದ ಜೊತೆಗೆ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಲ್, ಟಿಬೆಟ್, ಚೀನಾ, ಪಾಕಿಸ್ಥಾನ, ಆಪ್ಘಾನಿಸ್ಥಾನ, ಭೂತಾನ್ ದೇಶಗಳಲ್ಲಿಯೂ ಶಕ್ತಿಪೀಠಗಳು ಇವೆ ಎಂಬ ನಂಬಿಕೆ ಇರುವುದರಿಂದ, ಆಯಾ ದೇಶಗಳ ರಾಯಭಾರಿ ಕಚೇರಿಗಳು.
  9. ಶಕ್ತಿಪೀಠ ಫೌಂಡೇಷನ್, ಶಕ್ತಿಭವನ/ಪಾರ್ವತಿ ನಿಲಯ, ಒಂದನೇ ಮುಖ್ಯ ರಸ್ತೆ, ಜಯನಗರ ಪೂರ್ವ, ತುಮಕೂರು, ತುಮಕೂರು ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ.

ಇವುಗಳ ಸಂಯುಕ್ತಾಶ್ರಯದಲ್ಲಿ ಒಂದು ಉನ್ನತ ಮಟ್ಟದ ಅದ್ಯಯನ ಪೀಠ ರಚಿಸಿ’ ಅಧೀಕೃತವಾಗಿ ಭಾರತ ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿರವರಿಗೆ, ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ, ಬೇರೆ ದೇಶಗಳ ಮುಖ್ಯಸ್ಥರಿಗೆ ಪತ್ರ ಬರೆದು, ಅಧಿಕೃತವಾಗಿ ಅಧ್ಯಯನ ತಂಡ ಬೇಟಿ ನೀಡಿ ಮಾಹಿತಿ ಸಂಗ್ರಹಿಸುವುದು ಸೂಕ್ತವಾಗಿದೆ.

ಈಗಾಗಲೇ ಬೇರೆ ದೇಶಗಳಿಗೆ ಬಿಟ್ಟು, ಭಾರತ ದೇಶದ ಮೇಲ್ಕಂಡ ಸಚಿವಾಲಯದ ಮತ್ತು ಶಕ್ತಿಪೀಠಗಳು ಇವೆ ಎನ್ನಲಾದ ಸುಮಾರು 90 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ, ಭಾರತ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿಯವರಿಗೂ, ಪ್ರಧಾನ ಮಂತ್ರಿಯವರ ಕಚೇರಿಗೂ, ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಕೋರಿ ಪತ್ರ ಬರೆಯಲಾಗಿದೆ. ಉತ್ತರಗಳು/ಮಾಹಿತಿಗಳು ಬರಲಾರಂಭಿಸಿವೆ.

ಆದ್ದರಿಂದ ತಮ್ಮ ಸಚಿವಾಲಯ ಅಧಿಕೃತವಾಗಿ ಒಂದು ಆದೇಶ ಮಾಡಿ, ನಮಗೆ ನೀಡಿದಲ್ಲಿ ನಮ್ಮ ಸಂಸ್ಥೆಯು, ಪಿ.ಪಿ.ಪಿ ಆಧಾರದಲ್ಲಿ ಪತ್ರದ ಜೊತೆ, ಲಗತ್ತಿಸಿರುವ ಮಾದರಿಯಲ್ಲಿ ಅಥವಾ ತಮ್ಮ ಸಚಿವಾಲಯ ಸೂಚಿಸುವ ಮಾದರಿಯಲ್ಲಿ, ಮಾಹಿತಿಗಳನ್ನು ಸಂಗ್ರಹ ಮಾಡಲು ಉತ್ಸುಕವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.

ಪತ್ರ ಬರೆಯಲು ಉದ್ದೇಶಿಸಿದೆ, ಸೂಕ್ತ ಸಲಹೆ ನೀಡಲು ಮನವಿ.