22nd December 2024
Share

TUMAKURU:SHAKTHIPEETA FOUNDATION

 ದಿನಾಂಕ:10.05.2024 ನೇ ಶುಕ್ರವಾರ, ಕರ್ನಾಟಕ ರಾಜ್ಯದ ಸಾಂಸ್ಕøತಿಕ ನಾಯಕ, ವಿಶ್ವ ಗುರು ಬಸವ ಜಯಂತಿ ದಿವಸ. ಬೆಳಿಗ್ಗೆ ಬ್ರಾಹ್ಮಿ ಲಗ್ನದಿಂದ ಆರಂಭಿಸಿ, ಸಂಜೆಯ ತನಕ ಅತ್ಯಂತ ಸರಳವಾಗಿ ಪೂಜೆ ಮತ್ತು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ತಾವೂ ಬಂದು ಆಶೀರ್ವದಿಸಿ. ದಯವಿಟ್ಟು ಇದೇ ಆಮಂತ್ರಣ ಎಂದು ಕೊಳ್ಳಿ.

ಇದೊಂದು ಪುಟ್ಟ ಕಟ್ಟಡ’, ಆದರೇ ವಿಶ್ವ ವಿಖ್ಯಾತಿ ಪಡೆಯುವ ಚಟುವಟಿಕೆಗಳು ಇಲ್ಲಿ ನಡೆಯಲಿವೆ. ಇದು ಮನೆಯಲ್ಲ ವಿಶ್ವದ ‘108 ಶಕ್ತಿಪೀಠಗಳ ನೇತೃತ್ವದ ಪವಿತ್ರ ಸ್ಥಳ’ ಎಂಬ ಅನಿಸಿಕೆ ನನ್ನದು. ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಸಂಗಮ. ನನ್ನ ಪರಿಕಲ್ಪನೆಯ ಕನಸಿನ ಸೌಧ!’

ಇಲ್ಲಿ ಶನಿ’ ಕರ್ಮಫಲದಾತ, ಜಾತಿ ಇಲ್ಲ, ಪಕ್ಷ ಇಲ್ಲ ಅಭಿವೃದ್ಧಿ ಮಂತ್ರದ ಅಂಕಿ ಅಂಶಗಳೇ ಇಲ್ಲಿನ ಮಾನದಂಡ. ಅಭಿವೃದ್ಧಿ ಬುರಡೆ ಹೊಡೆಯುವವರಿಗೆ ಪುಲ್ ಸ್ಟಾಪ್ ? ಕುಂದರನಹಳ್ಳಿಯಿಂದ ವಿಶ್ವ ಸಂಸ್ಥೆವರೆಗೂ ನಮ್ಮ ಕಾರ್ಯ ವ್ಯಾಪ್ತಿ.

ಕಟ್ಟಡದ ಹಿನ್ನಲೆ.

  ನಂಬುವರು ನಂಬ ಬಹುದು, ಬಿಡಬಹುದು, ನಾನು 1984 ರಿಂದ ಒಂದು ಅಭಿವೃದ್ಧಿ ಅಧ್ಯಯನ ಪೀಠ/ಗ್ರಂಥಾಲಯವನ್ನು ಸ್ಥಾಪಿಸ ಬೇಕು ಎಂಬ ಪರಿಕಲ್ಪನೆ ಉಳ್ಳವನಾಗಿದ್ದೆ.   ಕೆಳಕಂಡ 22 ಕಡೆ ನಿರಂತರವಾಗಿ ಪ್ರಯತ್ನ ಮಾಡಿದೆ, ಕೆಲವು ಕಡೆ ಬಾಡಿಗೆ, ಕೆಲವು ಕಡೆ ಉಚಿತ, ಕೆಲವು ಕಡೆ ಕಟ್ಟಡ ನಿರ್ಮಾಣವಾದರೂ, ಇನ್ನೂ ಕೆಲವು ಕಡೆ ಜಮೀನಿಗೆ ಪ್ರಯತ್ನ ಪಟ್ಟರೂ ಯಾವುದೇ ಫಲಕೊಡಲಿಲ್ಲ.

ಒಂದಲ್ಲ ಒಂದು ಅನಗತ್ಯ ವಿವಾದದಿಂದ, 40 ವರ್ಷಗಳ ನಂತರ, ನಿರಂತರ ತಪಸ್ಸಿನಿಂದ ಎಲ್ಲವನ್ನೂ ಬಿಟ್ಟು 23 ನೆಯ ಪ್ರಯತ್ನವಾಗಿ ತುಮಕೂರಿನ ಜಯನಗರ ಪೂರ್ವದ. ಮೊದಲನೇ ಮುಖ್ಯ ರಸ್ತೆಯಲ್ಲಿ ಶಕ್ತಿಭವನ’ ಕಟ್ಟಡ ತಲೆ ಎತ್ತಿದೆ. ಇನ್ನೂ ಅಪೂರ್ಣವಾದ ಕಟ್ಟಡದಲ್ಲಿಯೇ ಚಟುವಟಿಕೆಗಳನ್ನು ಆರಂಭಿಸಲಾಗುವುದು.

ಬಹುಷಃ ಶಕ್ತಿ ದೇವತೆಗಳ ಆಶೀರ್ವಾದ, ಎಲ್ಲೂ ಬೇಡ ಇಲ್ಲಿಯೇ ಮಾಡಲಿ ಎಂಬುದಾಗಿತ್ತು   ಅನಿಸುತ್ತಿದೆ. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪಿಸಿ 23 ವರ್ಷಗಳಾಗಿವೆ, 2047 ರ ಗುರಿಗೂ 23 ವರ್ಷಗಳು ಭಾಕಿ ಇವೆ. ನಾನು ಪ್ರಯತ್ನ ಮಾಡಿದ ಕಟ್ಟಡಗಳಲ್ಲಿ 23 ನೇಯ ಪ್ರಯತ್ನ ಫಲ ಕೊಟ್ಟಿದೆ. 23 ಕ್ಕೂ ನನಗೂ ಏನೋ ಸಂಭಂಧವಿರಬಹುದು. ಆಗಿದ್ದೆಲ್ಲಾ ಒಳ್ಳೆಯದೇ ಆಗಿದೆ. ಇದು ಸಮಾಜಕ್ಕೂ ಮತ್ತು ನನ್ನ ಕುಟುಂಬಕ್ಕೂ ಅನೂಕೂಲವಾಗಲಿದೆ.

‘ಆದರೇ ನನಗಾದ ಅವಮಾನ, ಟೀಕೆ, ಟಿಪ್ಪಣೆಗಳು, ಅಪವಾದ, ಅನುಮಾನ ಇವೆಲ್ಲಾ ಒಂದೊಂದು ಮೆಟ್ಟಿಲುಗಳಾಗಿವೆ. ನಿಜಕ್ಕೂ ನನ್ನ ಶತೃಗಳಿಗೂ ಬೇಡ ಕಾಟ ಎನಿಸಿದೆ.’

ಯಾವ ಕಾರಣಕ್ಕೆ ಈ ಕೆಳಕಂಡ ಸ್ಥಳಗಳಲ್ಲಿ ಪರಿಪೂರ್ಣವಾದ ಕೆಲಸ ಆರಂಭವಾಗಲಿಲ್ಲ ಎಂಬುದು ಒಂದು ಯಕ್ಷ ಪ್ರಶ್ನೆಯಾಗಿದೆ. ಇವೆಲ್ಲಾ ಮಾಹಿತಿಗಳನ್ನು, ಅಲ್ಲಿಯ ಜನರ ಅಭಿಪ್ರಾಯಗಳೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲು ಉದ್ದೇಶಿಸಲಾಗಿದೆ.

  1. ಗುಬ್ಬಿ ತಾಲ್ಲೋಕು ನಿಟ್ಟೂರು.
  2. ತುಮಕೂರು ತಾಲ್ಲೋಕು ಹೆಗ್ಗೆರೆ.
  3. ಕುಂದರನಹಳ್ಳಿ ಬೇವಿನ ಮರದ ಕೆಳಗಿನ ಕಟ್ಟಡ.
  4. ಕುಂದರನಹಳ್ಳಿ ಗೇಟ್ ಆಫಿಕ್ಸ್ ಆವರಣ.
  5. ಕುಂದರನಹಳ್ಳಿ ಗಂಗಮಲ್ಲಮ್ಮ ದೇವಾಲಯದ ಪಕ್ಕದ ಕಟ್ಟಡ
  6. ಕುಂದರನಹಳ್ಳಿ ಶ್ರೀ ತೀರ್ಥರಾಮೇಶ್ವರ ಪತ್ತಿನ ಸಹಕಾರ ಸಂಘದ ಕಟ್ಟಡ.
  7. ಕುಂದರನಹಳ್ಳಿ ಶ್ರೀ ಶಿವಕುಮಾರ ಸ್ವಾಮಿಜಿ ತಪೋವನದಲ್ಲಿ ಕಟ್ಟಡ
  8. ತುಮಕೂರು ಕೇಂದ್ರಿಯ ವಿದ್ಯಾಲಯ ಗುತ್ತಿಗೆ ಆಧಾರಿತ ಕಟ್ಟಡ.
  9. ತುಮಕೂರು ಕೇಂದ್ರಿಯ ವಿದ್ಯಾಲಯ ಅಸೋಶಿಯೇಷನ್ ಅಜ್ಜಪ್ಪನಹಳ್ಳಿ ಜಮೀನಿನನಲ್ಲಿ ಸ್ವಂತ ಕಟ್ಟಡ.
  10. ತುಮಕೂರು ಯೋಗ ಭವನದ ಪಕ್ಕದಲ್ಲಿ ಅಪ್ನಾಸ್ ಗೆ ಸರ್ಕಾರಿ ಜಮೀನು.
  11. ತುಮಕೂರು ಯೋಗಭವನದ ಮೇಲೆ ಕಟ್ಟಡ.
  12. ತುಮಕೂರು ಗಾಂಧಿನಗರದಲ್ಲಿ ಅಭಿವೃದ್ಧಿ ಭವನ.
  13. ತುಮಕೂರು ನಗರದ ಟಿ.ಎಂ. ಕರುಣ್ ಕಟ್ಟಡ.
  14. ತುಮಕೂರು ಸಾಯಿಬಾಬಾ ದೇವಾಲಯದ ಬಳಿ ಕಟ್ಟಡ.
  15. ತುಮಕೂರು ಗಂಗಸಂದ್ರದಲ್ಲಿ ಕಟ್ಟಡ.
  16. ತುಮಕೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಕಟ್ಟಡ.
  17. ಬೆಂಗಳೂರಿನ ಶ್ರೀ ವೇದಾನಂದಾ ಮೂರ್ತಿ ಮನೆ.
  18. ವಿಜ್ಞಾನ ಗುಡ್ಡದ ಬಳಿ ಅಜ್ಜಪ್ಪನಹಳ್ಳಿ ಜಮೀನಿನನಲ್ಲಿ ಕಟ್ಟಡ,
  19. ಚಿಕ್ಕನಾಯಕನಹಳ್ಳಿ ತಾಲ್ಲೋಕು ವಜ್ರದ ತೀರ್ಥರಾಮೇಶ್ವರ ದೇವಾಲಯ ಬಳಿ ಕಟ್ಟಡ.
  20. ಹಾಸನ ಜಿಲ್ಲೆ. ಸಕಲೇಶಪುರ ತಾಲ್ಲೋಕು ಜೆಡಿಗದ್ದೆಯಲ್ಲಿ ಜಮೀನು.
  21. ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು ಬಗ್ಗನಡು ಕಾವಲ್ ನಲ್ಲಿ ಕಟ್ಟಡ.
  22. ತುಮಕೂರು ವಸಂತನರಸಾಪುರದಲ್ಲಿ ಕಟ್ಟಡ.

ಕುಂದರನಹಳ್ಳಿ ರಮೇಶ್