23rd June 2024
Share

TUMAKURU:SHAKTHIPEETA FOUNDATION

 ತುಮಕೂರಿನಲ್ಲಿ ನಿರ್ಮಾಣವಾಗುತ್ತಿರುವ ಶಕ್ತಿಭವನ ವನ್ನು 2025 ಕ್ಕೆ ಲೋಕಾರ್ಪಣೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ. ದಿನಾಂಕ:10.05.2024 ರ ಪೂಜಾಕಾರ್ಯಕ್ರಮ ಗೃಹ ಪ್ರವೇಶನೂ ಅಲ್ಲ, ಹೊಸಮೆನೆಯೂ ಅಲ್ಲ. ಮೊದಲಿಗೆ ಇದು ಮನೆಯೇ ಅಲ್ಲ. ಇದೊಂದು ಸಂಶೋಧನಾ ಆಶ್ರಮ. ಶಕ್ತಿಭವನ ಕಟ್ಟಡದ ಲೋಕಾರ್ಪಣೆಯೂ ಅಲ್ಲ.

ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಬಗ್ಗೆ ವಿವಿಧ ವಿಚಾರಗಳನ್ನು, ಪರಿಣಿತರಿಂದ/ ಜ್ಞಾನಿಗಳಿಂದ ಮಾಹಿತಿ ಸಂಗ್ರಹ ಮಾಡಿ ಫಿಸಿಕಲ್, ಡಿಜಿಟಲ್ ಮತ್ತು ಹ್ಯೂಮನ್ ಲೈಬ್ರರಿಯಲ್ಲಿ ಇಡುವ ಕೆಲಸದ ಆರಂಭೊತ್ಸವ.

ವಿಶ್ವದ 108 ಶಕ್ತಿಪೀಠಗಳ ಮಾಹಿತಿ ಸಂಗ್ರಹಕ್ಕೆ ಮುನ್ನ, ನಮ್ಮ ಮನೆದೇವರು/ಕುಲದೇವರ ಪೂಜೆಗೆ ಒತ್ತು ಕೊಡಲಾಗಿದೆ. ನಂತರ ಗ್ರಾಮದೇವತೆ ಪೂಜೆ ಹಮ್ಮಿಕೊಳ್ಳಲಾಗುವುದು. ಇಲ್ಲಿ ಗ್ರಾಮದೇವತೆ ನಮ್ಮ ಹುಟ್ಟೂರು ಕುಂದರನಹಳ್ಳಿ ಗ್ರಾಮದೇವತೆಯೋ?, ಶಕ್ತಿಪೀಠ ಕ್ಯಾಂಪಸ್ ನಿರ್ಮಾಣ ಮಾಡುವ ಬಗ್ಗನಡು ಕಾವಲ್‍ನ ಗ್ರಾಮದೇವತೆಯೋ? ಅಥವಾ ತುಮಕೂರಿನ ಗ್ರಾಮದೇವತೆಯೋ? ಎಂಬ ಚರ್ಚೆ ಆರಂಭವಾಗಿದೆ.

ನಮ್ಮ ಕುಲದೇವರು/ಮನೆ ದೇವರು, ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೋಕು, ವಜ್ರದ ತೀರ್ಥರಾಮೇಶ್ವರ, ಈ ಕುಲದೇವರು ದಿನಾಂಕ:10.05.2024 gಂದು ಶಕ್ತಿಭವನಕ್ಕೆ ಆಗಮಿಸಲಿದೆ.  ಈ ಹಿನ್ನಲೆಯಲ್ಲಿ ದೇವರು ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಆಗಮಿಸುವ ಮೊದಲು ಕೆಲವು ಪೂಜೆಗಳು ಅಗತ್ಯವಾಗಿವೆ. ಈ ಹಿನ್ನೆಲೆಯಲ್ಲಿ ಶಕ್ತಿಭವನದಲ್ಲಿ ಅತ್ಯಂತ ಸರಳ ಪೂಜಾಕಾರ್ಯಕ್ರಮ ನಡೆಯಲಿದೆ.

ಹಾಲಿ ನಮ್ಮ ಬಳಿ ಇರುವ ಶಕ್ತಿಪೀಠ ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಮಾಹಿತಿಗಳನ್ನು, ಶಕ್ತಿಪೀಠ ಲಾಕರ್ಸ್ ಗಳಲ್ಲಿ  ಸಂಗ್ರಹ ಮಾಡುವ ಕೆಲಸ ಬಸವ ಜಯಂತಿ ದಿನದಿಂದ ಆರಂಭವಾಗಲಿದೆ.

ಶಕ್ತಿಪೀಠದ ಮಾಹಿತಿಗಳನ್ನು ನನಗೆ ಶಕ್ತಿಪೀಠ ಜ್ಞಾನ ಬರಲು, ಕಾರಣೀಭೂತರಾದ ಅದಲಗೆರೆ ಶಾಲೆಯ ಹಿಂದಿ ಮಾಸ್ಟರ್ ಕ್ಯಾತ್ಸಂದ್ರದÀ ಶ್ರೀ ಹುಮಂತರಾಯಪ್ಪನವರು, ಅಭಿವೃದ್ಧಿ ಜ್ಞಾನ ಬರಲು ಕಾರಣೀಭೂತರಾದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಜಲಪೀಠ’ ಜ್ಞಾನ ಬರಲು  ಕಾರಣೀಭೂತರಾದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ದಿವಂಗತವಾಗಿರುವುದರಿಂದ, ಅವರ ಪರವಾಗಿ ಬೇರೊಬ್ಬರು ಆಗಮಿಸಿ ದಾಖಲೆಗಳಿಗೆ ಪೂಜೆ ಸಲ್ಲಿಸುವರು.

  ಯಾವುದೇ ಆಹ್ವಾನ ಪತ್ರಿಕೆ ಇಲ್ಲ, ಮನೆಗೆ ಹೋಗಿ ಆಮಂತ್ರಿಸುವ ಕಾರ್ಯಕ್ರಮವೂ ಇಲ್ಲ, ಈ ಪೂಜೆಗೆ ಆಸಕ್ತಿ ಇರುವವರು ಭಾಗವಹಿಸಲು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗ ಮನವಿ ಮಾಡಲಾಗಿದೆ.

ಒಬ್ಬ ಪೌರಕಾರ್ಮಿಕರಿಂದ ಆರಂಭಿಸಿ, ವಿಶ್ವಸಂಸ್ಥೆಯ ಮುಖ್ಯಸ್ಥರಿಂದಲೂ ಮಾಹಿತಿಗಳನ್ನು ಸಂಗ್ರಹ ಮಾಡಲು ಚಿಂತನೆ ನಡೆಸಲಾಗಿದೆ.

ತುಮಕೂರು ಲೋಕಸಭಾ ವ್ಯಾಪ್ತಿಯ ಅಧ್ಯಯನ ಪೀಠಕ್ಕೆ, ಪ್ರಸ್ತುತ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಂದ, ಅವರ 5 ಲೋಕಸಭಾ ಅವಧಿಯ ಯೋಜನೆಗಳ ಕಡತಗಳ ಸಂಗ್ರಹ ಮಾಡುವ ಮೂಲಕ  ಚಾಲನೆ ನೀಡಲಾಗುವುದು.

 ನಂತರ 1947 ರಿಂದ ಈ ವರೆಗೂ ಆಗಿರುವ ಲೋಕಸಭಾ ಸದಸ್ಯರ ಕುಟುಂಬದವರು, ಅವರ ಸ್ನೇಹಿತರಿಂದ ಮಾಹತಿ ಸಂಗ್ರಹ ನಿರಂತರವಾಗಿ ನಡೆಯಲಿದೆ.

ಅವರು ನೀಡುವ ಯೋಜನೆಗಳ ಮಾಹಿತಿ ಆಧರಿಸಿ ಇಲಾಖೆಗಳಿಂದ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ದಾಖಲೆಗಳನ್ನು ಸಂಗ್ರಹ ಮಾಡುವ ಗುರಿ ಇದೆ. ಭವಿಷ್ಯದ ಲೋಕಸಭಾ ಸದಸ್ಯರು, ಈ ಎಲ್ಲಾ ಯೋಜನೆಗಳಿಗೆ ಮರುಜೀವ ಕೊಡಲು ಮಾಹಿತಿ ಸಲ್ಲಿಸಲಾಗುವುದು.