22nd December 2024
Share

TUMAKURU:SHAKTHIPEETA FOUNDATION

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಸನ್ಮಾನ ಮಾಡಲು ಕುಂದರನಹಳ್ಳಿ ಗ್ರಾಮದ ಕೆ.ಜಿ.ನಟರಾಜ್, ಸಿದ್ಧರಾಮಯ್ಯ, ಕೆ.ಸಿ.ಸ್ವಾಮಿ, ಕೆ.ಸಿ. ಸತೀಶ್ ಮತ್ತು ಕೆ.ಆರ್.ಸೋಹನ್, ಅವರು ತುಮಕೂರಿನ ಶಕ್ತಿಭವನದಲ್ಲಿ ನಡೆದ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಸಮಾರಂಭದಲ್ಲಿ ಕುಂದರನಹಳ್ಳಿಗೆ ಆಹ್ವಾನಿಸಿದ್ದಾರೆ.

ಶಕ್ತಿಪೀಠ: ಶ್ರೀ ಜಿ.ಎಸ್.ಬಸವರಾಜ್ ಅವರು ಕುಂದರನಹಳ್ಳಿ ಗ್ರಾಮ ದೇವತೆ ಗಂಗಮಲ್ಲಮ್ಮನವರ ದೇವಾಲಯದ ಆವರಣದಲ್ಲಿ ಸುಮಾರು ರೂ 15,25000 ಗಳ ಅನುದಾನವನ್ನು ನೀಡಿದ್ದಾರೆ.

ಜಲಪೀಠ: ಶ್ರೀ ಜಿ.ಎಸ್.ಬಸವರಾಜ್ ಅವರು ಕುಂದರನಹಳ್ಳಿ ಗ್ರಾಮದ ಕೆರೆ-ಕಟ್ಟೆಗಳಿಗೆ ಹೇಮಾವತಿ ನೀರನ್ನು ಅಲೋಕೇಷನ್ ಮಾಡಿಸಿ, ಸುಮಾರು 2.5 ಕೋಟಿಗೂ ಹೆಚ್ಚು ವೆಚ್ಚದ ಕಾಮಗಾರಿ ಮಂಜೂರು ಮಾಡಿಸಿದ್ದಾರೆ.

ಅಭಿವೃದ್ಧಿ ಪೀಠ: ಶ್ರೀ ಜಿ.ಎಸ್.ಬಸವರಾಜ್ ಅವರು ಕುಂದರನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬಿದರೆಹಳ್ಳಕಾವಲ್ ನಲ್ಲಿ ಸುಮಾರು 6400 ಕೋಟಿಗೂ ಹೆಚ್ಚು ವೆಚ್ಚದ ಹೆಲಿಕ್ಯಾಪ್ಟರ್ ಘಟಕವನ್ನು ಮಂಜೂರು ಮಾಡಿಸಿದ್ದಾರೆ.

ಈ ಕೆಲಸಗಳು ಅಲ್ಲದೆ, ಡಾ.ಶಿವಕುಮಾರಸ್ವಾಮೀಜಿ ತಪೋವನ, ಗ್ರಾಮಸಡಕ್ ರಸ್ತೆ, ಜಲಜೀವನ್ ಮಿಷನ್, ಪಿಕ್‍ಅಪ್‍ಗಳು, ಮನೆಗಳು, ರಸ್ತೆ, ಗ್ರಂಥಾಲಯ, ಟಿ.ಸಿ, ದೂರವಾಣಿ ಹೀಗೆ ಹಲವಾರು ಕಾಮಗಾರಿಗಳಿಗೆ ಸಹಕರಿಸಿದ್ದಾರೆ.

 ಈ ಹಿನ್ನಲೆಯಲ್ಲಿ ಅವರಿಗೆ ಮತ್ತು ಸಹಕರಿಸಿದ ಎಲ್ಲಾ ನಾಯಕರು, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವ ಚಿಂತನೆ ಇದೆ. ಶಕ್ತಿಪೀಠ ಫೌಂಡೇಷನ್ ವತಿಯಿಂದ ಗಂಗಮಲ್ಲಮ್ಮ ದೇವತೆಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಅಥವಾ ಬೇರೆ ಸಮಾರಂಭ ನಡೆಸುವ ಆಲೋಚನೆ ಇದೆ.

ಈ ಸಮಾರಂಭಕ್ಕೆ ಕುಂದರನಹಳ್ಳಿಯ ಜನರು ಎಲ್ಲೆಲ್ಲಿ ವಾಸವಾಗಿದ್ದಾರೆ, ವಿವಾಹವಾಗಿ ಗಂಡನ ಮನೆಗೆ ಹೋಗಿದ್ದಾರೆ, ಅವರೆಲ್ಲರನ್ನು ಆಹ್ವಾನಿಸಲು ಒಂದು ಸೊಶೀಯಲ್ ಮೀಡಿಯಾ ಗ್ರೂಪ್ ರಚಿಸಲಾಗುವುದು.

ತುಮಕೂರು ವಿಶ್ವ ವಿದ್ಯಾನಿಯಲದ ಸಹಭಾಗಿತ್ವದಲ್ಲಿ, ಕುಂದರನಹಳ್ಳಿ ಗ್ರಾಮದ ಊರಿಗೊಂದು ಪುಸ್ತಕ- ವಿಷನ್ ಡಾಕ್ಯುಮೆಂಟ್ @ 2047 ಅನ್ನು ಸಿದ್ಧಪಡಿಸಲಾಗುವುದು. ರಾಜ್ಯಾಧ್ಯಾಂತ ಆರಂಭಿಸಲು ಉದ್ದೇಶಿರುವ 545 ಅಧ್ಯಯನ ಪೀಠಗಳಲ್ಲಿ, ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಡಾ.ಶಿವಕುಮಾರಸ್ವಾಮೀಜಿ ತಪೋವನದಲ್ಲಿ, ಮಾನವೀಯತೆ ಅಧ್ಯಯನ ಪೀಠ’ ರಚಿಸಲು, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಇದೂವರೆಗೂ ನಡೆದಿರುವ ಕಹಿಘಟನೆಗಳನ್ನು ಮತ್ತು ಎಲ್ಲಾ ವೈಷಮ್ಯಗಳನ್ನು ಮರೆತು ಗ್ರಾಮದ ಪ್ರತಿಯೊಂದು ಕುಟುಂಬಗಳು ಸಹಕರಿಸಲು ಮನವಿ ಮಾಡಲಾಗಿದೆ.