TUMAKURU: SHAKTHIPEETA FOUNDATION
ಕಳೆದ 15 ದಿವಸಗಳಿಂದ ಒಂದು ಮಾದರಿಯ ‘ಹೌಸ್ ಅರೆಸ್ಟ್’ ಎಂದರೆ ತಪ್ಪಾಗಲಾರದು. ದಿನಾಂಕ:10.05.2024 ರಂದು ಬಸವ ಜಯಂತಿಯ ದಿವಸ ನಾಲೇಡ್ಜ್ ಬ್ಯಾಂಕ್ @ 2047 ಕ್ಕೆ ಚಾಲನೆ ನೀಡಿದ ನಂತರ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಕಡತಗಳ ವಿಂಗಡಣೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
2047 ರವರೆಗೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ, ಜೂನ್ ತಿಂಗಳ ಕೊನೆಯ ವಾರದೊಳಗೆ ಒಂದು ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಮುಂದಿನ 23 ವರ್ಷಗಳ ಅವಧಿವರೆಗೆ ವಾರ್ಷಿಕ, ಪಂಚವಾರ್ಷಿಕ ಮತ್ತು 23 ವರ್ಷಗಳ ಯೋಜನೆಗಳ ರೂಪುರೇಷೆ ಸಿದ್ಧವಾಗಲಿದೆ.