22nd December 2024
Share

TUMAKURU:SHAKTHIPEETA FOUNDATION

   ಸುಮಾರು 60 ವರ್ಷಗಳ ಕಾಲ ಸಕ್ರೀಯ ರಾಜಕಾರಣ ಮತ್ತು 40 ವರ್ಷಗಳ ಅವಧಿಯಲ್ಲಿ 5 ಭಾರಿ ಲೋಕಸಭಾ ಸದಸ್ಯರಾಗಿರುವ, ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರಿಗೆ, ದಿನಾಂಕ:03.06.2024 ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಕುಂದರನಹಳ್ಳಿಯಲ್ಲಿ ನಾಗರೀಕ ಸನ್ಮಾನ ಮಾಡುವುದಾಗಿ, ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ನವರು ತಿಳಿಸಿದ್ದಾರೆ.

ದಿನಾಂಕ:04.06.2024 ರಂದು ಹೊಸದಾಗಿ ನಿಯೋಜಿತÀ ಲೋಕಸಭಾ ಸದಸ್ಯರು ಆಯ್ಕೆಯಾಗಲಿದ್ದಾರೆ. ಈ ದಿನದ ಹಿಂದಿನ ದಿವಸ ಮತ್ತು ಜಿ.ಎಸ್.ಬಸವರಾಜ್ ರವರ ಕೊನೆಯ ಅವಧಿಯ, ಬಹುತೇಕ ಕೊನೆಯ ದಿವಸದಲ್ಲಿ ಸನ್ಮಾನ ಮಾಡುತ್ತಿರುವುದು ಕುಂದರನಹಳ್ಳಿ ಜನರಿಗೆ ಹೊಸ ಹುರುಪು vಂದಿದೆ.

ಈ ಸಮಾರಂಭ ನಾಗರೀಕ ಸನ್ಮಾನವಾಗದೇ, ಜಿ.ಎಸ್.ಬಸವರಾಜ್ ರವರ ಮುಂದಿನ ಅಭಿವೃದ್ಧಿ ಪರ ಹೋರಾಟದ ಆಂದೋಲನಕ್ಕೆ ಚಾಲನೆ ನೀಡುವ ಪ್ರಥಮ ಕಾರ್ಯಕ್ರಮವಾಗಲಿದೆ. ಕೇಂದ್ರ ಸರ್ಕಾÀರದಿಂದ ವಿಶ್ವದ 108 ಶಕ್ತಿಪೀಠಗಳ ಘೋಷಣೆ, ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು, ಊರಿಗೊಂದು/ಬಡಾವಣೆಗೊಂದು ಪುಸ್ತಕ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಕಾರ್ಯತಂತ್ರದ ಬಗ್ಗೆ ಮತ್ತು ತುಮಕೂರು ಜಿಲ್ಲೆಯಲ್ಲಿ ದೇಶದಲ್ಲಿಯೇ ವಿನೂತನವಾದ ಸ್ಟೂಡೆಂಟ್ ಸ್ಪೆಷಲ್ ಎಕನಾಮಿಕ್ ಝೋನ್ ಸ್ಥಾಪಿಸುವ ಸಂಬಂಧ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ.

ಈ ಸಭೆಯಲ್ಲಿ ಕೈಗೊಳ್ಳುವ ನಿರ್ಣಯವನ್ನು ಕುಂದರನಹಳ್ಳಿ ಘೋಷಣೆ ಯಾಗಿ ಪುಸ್ತಕದ ರೂಪದಲ್ಲಿ ಹೊರತಂದು, ಮುಂದಿನ ರಾಜ್ಯದ 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯಸಭಾ ಸದಸ್ಯರು, ಇಬ್ಬರು ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರು ಮತ್ತು ಇಬ್ಬರು ದೆಹಲಿ ವಿಶೇಷ ಪ್ರತಿನಿಧಿಗಳ ನೇತೃತ್ವದಲ್ಲಿ ರಾಜ್ಯದ್ಯಾಂತ ಜಾರಿಗೊಳಿಸಲು ಶಕ್ತಿಪೀಠ ಫೌಂಡೇಷನ್ ಶ್ರಮಿಸಲು ಕುಂದರನಹಳ್ಳಿಯ ಆಸಕ್ತ ಜನರು ಶಕ್ತಿ ತುಂಬಲಿದ್ದಾರೆ.

ಕುಂದರನಹಳ್ಳಿ ಒಂದು ತಪೋಭೂಮಿ, ಈ ಊರಿನ ಮೊಮ್ಮಗ ದಿ.ಸಾಗರನಹಳ್ಳಿ ರೇವಣ್ಣನವರು ಕರ್ನಾಟಕ ರಾಜ್ಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ, ಹಲವಾರು ಜನ ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಹತ್ತಾರು ವಿವಿಧ ಹೊಸಪ್ರತಿಭೆಗಳ ಉದಯದ ತಾಣವಾಗಿದೆ. ಇವರೆಲ್ಲರ ಸೇವೆ ಗುರುತಿಸುವ ಊರಿಗೊಂದು ಪುಸ್ತಕ ಹೊರತರಲಾಗುವುದುದು.

ದಿನಾಂಕ:01.08.1988 ರಂದು ಗ್ರಾಮದೇವತೆ ಗಂಗಮಲ್ಲಮ್ಮನವರಿಗೆ ಪೂಜೆ ಸಲ್ಲಿಸಿ, ಮೌನವಾಗಿ ಆರಂಭಿಸಿದ ಹೊರಾಟ, ಬಿದರೆ ಹಳ್ಳಕಾವಲ್‍ಗೆ ಹೆಚ್.ಎ.ಎಲ್ ವತಿಯಿಂದ ಯುದ್ದ ಹೆಲಿಕ್ಯಾಪ್ಟರ್ ಘಟಕ ಬರಲು ಕುಂದರನಹಳ್ಳಿ ಮತ್ತು ಸುತ್ತಮುತ್ತಲಿನ ಜನರ ಮಹತ್ತರವಾದ ಕೊಡುಗೆ ಮತ್ತು ತ್ಯಾಗ ಇದೆ. ಗ್ರಾಮದೇವತೆ ಗಂಗಮಲ್ಲಮ್ಮನವರ ಆರ್ಶಿರ್ವಾದ ಇದೆ.

ಈ ಯೋಜನೆಗೆ ಸಹಕರಿಸಿದ ಎಲ್ಲಾ ಮಹನೀಯರ ದಾಖಲೆ ಆಗಬೇಕಿದೆ. ಕುಂದರನಹಳ್ಳಿಯ ಗಂಗಮಲ್ಲಮನ ದೇವಾಲಯದ ಲೋಕಾರ್ಪಣೆ ವೇಳೆಗೆ ಹೆಚ್..ಎಲ್. ನಮ್ಮೂರಿಗೆ ಬಂದ ಕಥೆ ಪುಸ್ತಕವನ್ನು ಹೊರತರಲಾಗುವುದು.

ಜೊತೆಗೆ 1947 ರಿಂದ 2024 ರವರೆಗಿನ, ತುಮಕೂರು ಲೋಕಸಭಾ ಸದಸ್ಯರ ಎಲ್ಲರ ಅವಧಿಯ, ಅಭಿವೃದ್ಧಿ ಡೈರಿ ಮತ್ತು 2047 ರವರೆಗಿನ ಕನಸಿನ ಯೋಜನೆಗಳ ಗ್ರಂಥವನ್ನು ಹೊರತರಲಾಗುವುದು. ಈ ಕನಸಿನ ಎಲ್ಲಾ ಯೋಜನೆಗಳಿಗೆ ಈ ಸಭೆ ಪ್ರೇರಣೆಯಾಗಲಿದೆ. ಕುಂದರನಹಳ್ಳಿ ಜನರ ಸೇವೆ ಮಹತ್ತರವಾಗಲಿದೆ.

ಜಿ.ಎಸ್.ಬಸವರಾಜ್ ರವರನ್ನು ಕುಂದರನಹಳ್ಳಿ ಗ್ರಾಮಕ್ಕೆ ಆಹ್ವಾನಿಸಿದ ಕುಂದರನಹಳ್ಳಿ ಗ್ರಾಮಸ್ಥರಾದ ಸಿದ್ದರಾಮಯ್ಯ, ಮಹೇಶ್ ಕೆ.ಆರ್. ಚನ್ನಬಸವಯ್ಯ, ಮಹೇಶ್ ಮತ್ತು ಇನ್ನೂ ಮುಂತಾದವರಿದ್ದಾರೆ.