TUMAKURU:SHAKTHIPEETA FOUNDATION
ದಿನಾಂಕ:16.08.2024 ರ ವೇಳೆಗೆ ಶಕ್ತಿಪೀಠ ಫೌಂಡೇಷನ್ ನೋಂದಣಿಯಾಗಿ 5 ವರ್ಷ ತುಂಬಲಿದೆ. 60 ತಿಂಗಳ ಅನುಭವ ನಿಜಕ್ಕೂ ಅದ್ಭುತವಾಗಿದೆ. ದಿನಾಂಕ:01.08.1988 ರಿಂದಲೂ ಅನುಭವಿಸಿದ 36 ವರ್ಷದ ಸಾರ್ವಜನಿಕ ಜೀವನಕ್ಕೂ, ದಿನಾಂಕ:04.05.2021 ರಂದು ಆರಂಭಿಸಿದ ಅಭಿವೃದ್ಧಿ ರೆವೂಲ್ಯೂಷನ್ ಫೋರಂನ 23 ವರ್ಷಗಳ ಅನುಭವಕ್ಕೂ, ಈ 5 ವರ್ಷಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.ನನಗಂತೂ ತೃಪ್ತಿ ತಂದಿದೆ.
ದಿನಾಂಕ:16.08.2024 ರ ವೇಳೆಗೆ ಕೆಳಕಂಡ ಸ್ಥಳಗಳಲ್ಲಿ ಕಾರ್ಯಾರಂಭ ?
- ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಕುಂದರನಹಳ್ಳಿಯಲ್ಲಿ (ಮಾಸಿಕ ಇಪ್ಪತೈದು ಸಾವಿರ)
- ತುಮಕೂರು ಜಿಲ್ಲೆ, ತುಮಕೂರು ನಗರದ ಶಕ್ತಿಭವನದಲ್ಲಿ.(ಮಾಸಿಕ ಒಂದು ಲಕ್ಷ)
- ತುಮಕೂರು ಜಿಲ್ಲೆ, ವಸಂತನರಸಾಪುರದ ಶಕ್ತಿಪೀಠ ಡಾಟಾ ಪಾರ್ಕ್‍ನಲ್ಲಿ, (ಮಾಸಿಕ ಒಂದು ಲಕ್ಷ)
- ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಬಗ್ಗನಡು ಕಾವಲ್‍ನ ಶಕ್ತಿಪೀಠ ಕ್ಯಾಂಪಸ್ ನಲ್ಲಿ, (ಮಾಸಿಕ ಒಂದು ಲಕ್ಷ)
- ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ,(ಮಾಸಿಕ ಎಪ್ಪತೈದು ಸಾವಿರ)
- ಭಾರತದ ರಾಜಧಾನಿ ದೆಹಲಿಯಲ್ಲಿ,(ಮಾಸಿಕ ಎಪ್ಪತೈದು ಸಾವಿರ)
- ಕರ್ನಾಟಕ ರಾಜ್ಯಾದ್ಯಂತ ಮೊಬೈಲ್ ವಾಹನದಲ್ಲಿ (ಮಾಸಿಕ ಎಪ್ಪತೈದು ಸಾವಿರ)
ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಉದ್ದೇಶಗಳ ಅನುಷ್ಠಾನಕ್ಕೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮಾಸಿಕ ಸುಮಾರು 5.50 ಲಕ್ಷ ಹಾಗೂ ವಾರ್ಷಿಕ 66 ಲಕ್ಷ ಬಾಡಿಗೆ ಮತ್ತು ನಿರ್ವಹಣೆಗಾಗಿ ಹಾಗೂ ಹೊರಗುತ್ತಿಗೆ ಆಧಾರದ ದಿನ ಗೂಲಿಗಾಗಿ ವಾರ್ಷಿಕ 34 ಲಕ್ಷಗಳ ವೆಚ್ಚವೂ ಸೇರಿದಂತೆ, ವಾರ್ಷಿಕ ಒಂದು ಕೋಟಿ ವೆಚ್ಚದ ಬಗ್ಗೆ ಉನ್ನತ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗಿದೆ.
ನಿರಂತರವಾಗಿ ಆರ್ಥಿಕ ವ್ಯವಸ್ಥೆಗೆ ಯಾವ ರೀತಿ ಯೋಜನೆ ರೂಪಿಸ ಬೇಕು ಎಂಬ ಚಿಂತನೆ ಆರಂಭವಾಗಿದೆ. ನಾನು ಮೊನ್ನೆ ಶಕ್ತಿಭವನಕ್ಕೆ ಭೇಟಿ ನೀಡಿದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಬಳಿ ಸಮಾಲೋಚನೆ ನಡೆಸಿದಾಗ ಮಾಸಿಕ ರೂ ಮೂರು ಲಕ್ಷ ಖರ್ಚಾಗಲಿದೆ ಎಂದು ಚರ್ಚಿಸಿದ್ದೆ.
ಅವರು ಆರಂಭದಲ್ಲಿ ರಾಜ್ಯ ಮಟ್ಟದ ಅಧ್ಯಯನ ಬೇಡ, ತುಮಕೂರು ಜಿಲ್ಲೆಗೆ ಸೀಮಿತ ಮಾಡಿಕೊಂಡರೇ ಸಾಕಲ್ಲವಾ ಎಂದು ತಿಳಿಸಿದರು. ಆದರೇ ಬೆಂಗಳೂರಿನ ಸಭೆಯಲ್ಲಿ ರಾಜ್ಯದ್ಯಾಂತ ಅಧ್ಯಯನಕ್ಕೆ ಒತ್ತು ನೀಡಲು ದೃಢ ನಿರ್ಧಾರ ಕೈಗೊಳ್ಳಲಾಗಿದೆ.
ಮೊದಲು ಆರ್ಥಿಕ ವ್ಯವಸ್ಥೆಗೆ ಪೂರಕವಾಗಿ ಶ್ರಮಿಸಲು ನಿರ್ಧರಿಸಲಾಗಿದೆ. ಗುತ್ತಿಗೆ ಆಧಾರದ ಕಟ್ಟಡ ಮತ್ತು ಜಮೀನುಗಳ ಕರಾರು ಪತ್ರಗಳನ್ನು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಒಂದು ಸಂಸ್ಥೆಯ ಮುಖ್ಯಸ್ಥರು ವಾರ್ಷಿಕ ಒಂದು ಕೋಟಿ ವೆಚ್ಚ ಭರಿಸಲು ಮುಂದಾಗಿದ್ದಾರೆ. ಅವರ ಇಚ್ಚೆ ಅವರ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸ ಬೇಕಾಗಿದೆ.
ಈ ಬಗ್ಗೆ ದಿನಾಂಕ:16.08.2024 ರ ವೇಳೆಗೆ ಒಂದು ನಿರ್ಧಾರ ಕೈಗೊಳ್ಳಲಾಗುವುದು.