TUMAKURU:SHAKTHIPEETA FOUNDATION
ನಾನು ದಿನಾಂಕ:06.06.2024 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿರುವ ಅರಣ್ಯ ಸಚಿವರ ಕಚೇರಿಗೆ ಭೇಟಿ ನೀಡಿ, ಅರಣ್ಯ ಸಚಿವರ ಆಪ್ತ ಕಾರ್ಯದರ್ಶಿವರೊಂದಿಗೆ ವಿಶ್ವದಲ್ಲಿಯೇ ಮಾದರಿಯಾಗುವ ಯೋಜನೆಗಳ ಬಗ್ಗೆ, ಸಮಾಲೋಚನೆ ಮಾಡಿದಾಗ, ಅವರು ಒಂದು ತಿಂಗಳೊಳಗೆ ಒಂದು ಪ್ರಸ್ತಾವನೆ ಸಲ್ಲಿಸಿ, ಸಚಿವರೊಂದಿಗೆ ಸಮಾಲೋಚನೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳೋಣ ಎಂದು ತಿಳಿಸಿದ ಹಿನ್ನಲೆಯಲ್ಲಿ, ನಾನು ಇಂದಿನಿಂದ ಪರಿಕಲ್ಪನಾ ವರದಿಯನ್ನು ಆರಂಭಿಸಿದ್ದೇನೆ. ನಮ್ಮ ಯೂ ಟ್ಯೂಬ್ ಚಾನಲ್, ಈ ಯೋಜನೆಯಿಂದ ಆರಂಭ ಆಗಲಿದೆ.
ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ/ ಪೀಪಲ್ಸ್ ಬಯೋ ಡೈವರ್ಸಿಟಿ ರಿಜಿಸ್ಟಾರ್ ಮಾನಿಟರಿಂಗ್ ಸೆಲ್ ಪರಿಕಲ್ಪನಾ ವರದಿಯ ಪ್ರಮುಖ ಅಂಶಗಳು.
- ರಾಜ್ಯದ ಎಲ್ಲಾ ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿರುವ ಬಿಎಂಸಿಗಳ ಪುನರ್ ರಚನೆ ಮತ್ತು ವಿಶ್ವಕ್ಕೆ ಮಾದರಿಯಾಗಿ ಪಿಬಿಆರ್ ಅಂಶಗಳ ಜಾರಿಗೆ ಶ್ರಮಿಸುವುದು.
- ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳ ಗ್ರಾಮಪಂಚಾಯಿತಿಗಳಲ್ಲಿರುವ ಬಿಎಂಸಿಗಳ ಪುನರ್ ರಚನೆ ಮತ್ತು ವಿಶ್ವಕ್ಕೆ ಮಾದರಿಯಾಗಿ ಪಿಬಿಆರ್ ಅಂಶಗಳ ಜಾರಿಗೆ ಶ್ರಮಿಸುವುದು.
- ಬಿಎಂಸಿಗಳನ್ನೇ ಆಯಾ ವ್ಯಾಪ್ತಿಯ ವೃಕ್ಷಪ್ರಾಧಿಕಾರವಾಗಿ ಘೋಶಿಸುವುದು. ವೃಕ್ಷ ಪ್ರಾಧಿಕಾರಿಗಳ ಅಂಶಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವುದು.
- ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಎಂಸಿಗಳ ಫೆಡರೇಷನ್ ರಚನೆ.
- ಪೀಪಲ್ಸ್ ಬಯೋ ಡೈವರ್ಸಿಟಿ ರಿಜಿಸ್ಟಾರ್ ಜೊತೆಗೆ ಊರಿಗೊಂದು/ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್ @ 2047 ಅನ್ನು, ತುಮಕೂರು ವಿಶ್ವ ವಿದ್ಯಾನಿಲಯ ಈಗಾಗಲೇ ಆರಂಭಿಸಿರುವ ಮಾದರಿಯಲ್ಲಿ, ವಿದ್ಯಾರ್ಥಿಗಳಿಗೆ ಇಂಟರ್ನ್‍ಶಿಪ್ ನೀಡುವ ಮೂಲಕ ಸಿದ್ಧಪಡಿಸುವುದು. ನಂತರ ಎಲ್ಲಾ ಇಲಾಖೆಗಳ ಡಾಟಾಗಳನ್ನು ಪರಿಶೀಲಿಸಿ ಅನುಮೋದಿಸುವುದು.
- ಊರಿಗೊಂದು/ಬಡಾವಣೆಗೊಂದು ನಾಲೇಡ್ಜ್ ಬ್ಯಾಂಕ್ @ 2047 ರಚಿಸುವುದು.
- ಊರಿಗೊಂದು/ಬಡಾವಣೆಗೊಂದು ಪವಿತ್ರವನ ನಿರ್ಮಾಣ ಮತ್ತು ನಿರ್ವಹಣೆಗಳನ್ನು ಜಿಐಎಸ್/ಜಿಪಿಎಸ್ ಮೂಲಕ ಕುಳಿತಲ್ಲೆ ಮಾನಿಟರಿಂಗ್ ಮಾಡುವುದು.
- ಪ್ರತಿಯೊಂದು ಅರಣ್ಯ ಪ್ರದೇಶಗಳನ್ನು ಕುಳಿತಲ್ಲೆ ಮಾನಿಟರಿಂಗ್ ಮಾಡುವುದು.
- ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಮುಂದಿನ 5 ವರ್ಷಗಳ ಅವಧಿಗೆ ಮೀಸಲಿಟ್ಟಿರುವ ರೂ ಒಂದು ಲಕ್ಷಕೋಟಿಯಲ್ಲಿ, ಕರ್ನಾಟಕ ರಾಜ್ಯದ 545 ಅಧ್ಯಯನ ಪೀಠಗಳನ್ನು ಸ್ಥಾಪಿಸಲು ತಲಾ 5 ಕೋಟಿಯಂತೆ ಒಟ್ಟು 2725 ಕೋಟಿಗಳ ಪ್ರಸ್ಥಾವನೆ ಸಲ್ಲಿಸುವುದು.
- 2047 ರವರೆಗೆ ಮುಂದಿನ 23 ವರ್ಷಗಳ ವರೆಗೆ ಅಧ್ಯಯನ ಪೀಠಗಳ ನಿರ್ವಹಣೆಗೆ ವಾರ್ಷಿಕ ತಲಾ ಒಂದು ಕೋಟಿಯಂತೆ, ರೂ 12535 ಕೋಟಿಗಳ ಪ್ರಸ್ತಾವನೆ ಸಲ್ಲಿಸುವುದು.
- ತುಮಕೂರಿನ ಶಕ್ತಿಪೀಠ ಫೌಂಡೇಷನ್, ತುಮಕೂರು ನಗರದಲ್ಲಿ ಆರಂಭಿಸಿರುವ ನಾಲೇಡ್ಜ್ ಬ್ಯಾಂಕ್ @ 2047, ಸೆಂಟರ್ ಆಫ್ ಎಕ್ಸ್‍ಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಫ್ ಇಂಡಿಯಾ ಘಟಕಗಳನ್ನು 545 ಅಧ್ಯಯನ ಪೀಠಗಳಲ್ಲಿ ಸ್ಥಾಪಿಸುವುದು.
- ತುಮಕೂರಿನ ಶಕ್ತಿಪೀಠ ಫೌಂಡೇಷನ್, ತುಮಕೂರು ಜಿಲ್ಲೆಯ ವಸಂತಾನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲು ಉದ್ದೇಶಿರುವ ಶಕ್ತಿಪೀಠ ಡಾಟಾ ಪಾರ್ಕ್‍ಗೆ ಹೊಂದಿಕೊಂಡಿರುವ ಮತ್ತು ಸುಮಾರು 12500 ಎಕರೆ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಕಾಡು ಮ್ಯೂಸಿಯಂ ನಿರ್ಮಾಣ ಮಾಡಿ, ವಿಶ್ವದ ಎಲ್ಲಾ ಜಾತಿಯ ಗಿಡಗಳ ಪ್ರಾತ್ಯಾಕ್ಷಿಕೆ ನಿರ್ಮಾಣ ಮಾಡುವುದು. ಅಗತ್ಯ ವಾತಾವಾರಣವನ್ನು ಸೃಷ್ಟಿಸುವುದು.
- ಶಕ್ತಿಪೀಠ ಡಾಟಾ ಪಾರ್ಕ್‍ನಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರದವರಿಗೂ ತರಭೇತಿ ನೀಡಲು, 545 ಅಧ್ಯಯನ ಪೀಠಗಳ ಮಾಹಿತಿಗಳನ್ನು ಹಂಚಿಕೊಳ್ಳಲು ಮತ್ತು ಔಷಧಿ ಗಿಡಮೂಲಿಕೆಗಳ ರಫ್ತು ಮಾಡಲು ಯೋಜನೆ ರೂಪಿಸುವುದು, ಮ್ಯೂಸಿಯಂ ಜೊತೆಗೆ ಹಾಸ್ಟೆಲ್ ನಿರ್ಮಾಣ ಮಾಡುವುದು.
- ಮೊಬೈಲ್ ವಾಹನದ ಮೂಲಕ ರಾಜ್ಯದ್ಯಾಂತ ಬಿಎಂಸಿ ಮತ್ತು ಪಿಬಿಆರ್ ನಿರ್ವಹಣೆಗೆ ರೂಪುರೇಷೆ ಸಿದ್ಧಪಡಿಸುವುದು.
- ಪ್ಯಾರೀಸ್ ಮತ್ತು ಇತರ ಒಪ್ಪಂದಗಳ ಜಾರಿಗೆ, ಅಗತ್ಯ ಅನುದಾನಗಳ ಮಂಜೂರಾತಿಗೆ ನಿರಂತರವಾಗಿ ಶ್ರಮಿಸುವುದು.
- ಅನುದಾನ ಮಂಜೂರಾತಿಗೆ ದೆಹಲಿಯಲ್ಲಿ ಒಂದು ಕಚೇರಿ ಸ್ಥಾಪಿಸುವುದು.
ತಮ್ಮ ಸಲಹೆಗಳಿಗೆ ಬಹಿರಂಗ ಆಹ್ವಾನ