3rd December 2024
Share

TUMAKURU:SHAKTHIPEETA FOUNDATION

   ಕಳೆದ ಲೋಕಸಭಾ ಚುನಾವಣೆಯಲ್ಲಿ ಚೊಂಬು, ಚಿಪ್ಪು ಮತ್ತು ಅಕ್ಷಯ ಪಾತ್ರೆಗಳು ಬಹಳ ಸದ್ದು ಮಾಡಿದವು. ಅದು ರಾಜಕೀಯವಿರಬಹುದು, ಆದರೇ 18 ನೇ ಲೋಕಸಭೆ ಕರ್ನಾಟಕ ರಾಜ್ಯಕ್ಕೆ ಅಕ್ಷಯ ಪಾತ್ರೆಯಾಗಲಿ ? ಎಂಬ ದೃಢ ನಿರ್ಧಾರದಿಂದ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಶಕ್ತಿಪೀಠ ಫೌಂಡೇಷನ್ ಕಾರ್ಯನಿರ್ವಹಿಸಲು ಆರಂಭಿಸಿದೆ.

ಕಳೆದ 33 ವರ್ಷಗಳಿಂದ ಜಿ.ಎಸ್.ಬಸವರಾಜ್ ರವರ ಜೊತೆ ಪಕ್ಕಾ ಗುರುತಿಸಿಕೊಂಡಿದ್ದ ನಾನು, ಇನ್ನೂ ಮುಂದೆ ರಾಜ್ಯದ 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯ ಸಭಾ ಸದಸ್ಯರು, ಇಬ್ಬರು ನಾಮನಿರ್ಧೇಶಿತ ರಾಜ್ಯಸಭಾ ಸದಸ್ಯರು, ಇಬ್ಬರು ದೆಹಲಿ ವಿಶೇಷ ಪ್ರತಿ ನಿಧಿಗಳು, ಮಾನ್ಯ ಮುಖ್ಯ ಮಂತ್ರಿಯವರು, ಉಪಮುಖ್ಯ ಮಂತ್ರಿಯವರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರೊಂದಿಗೆ ಅಭಿವೃದ್ಧಿ ಒಡನಾಟ ಇಟ್ಟುಕೊಂಡು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ ಮಂಜೂರಾಗಲೇ ಬೇಕು ಎಂಬ ದೂದೃಷ್ಟಿಯಿಂದ ಶ್ರಮಿಸಲಾಗುವುದು.

ಈಗಾಗಲೇ ಕಳೆದ 4-5 ವರ್ಷಗಳಿಂದ ಈ ಬಗ್ಗೆ ಅಧ್ಯಯನ ನಡೆಸಿದ್ದು, ನಂಬರ್  ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ವರದಿಯಲ್ಲಿನ ಒಂದೋಂದೇ ಯೋಜನೆಯ ಬಗ್ಗೆ ಇವರೆಲ್ಲರಿಗೂ ಮನವರಿಕೆ ಮಾಡುವ ಮೂಲಕ ಚಾಲನೇ ನೀಡಲಾಗುವುದು.

ಕಳೆದ 25 ವರ್ಷಗಳಿಂದ ನಾನು ಬರೆದಿರುವ ಸುಮಾರು 12 ಕ್ಕೂ ಹೆಚ್ಚು ಪುಸ್ತಕಗಳ ಮಾದರಿಯಲ್ಲಿ ಪ್ರತಿಯೊಂದು ಯೋಜನೆಗೂ ಒಂದೊಂದು ಕಿರುಕೈಪಿಡಿಯನ್ನು ಹೊರತರಲಾಗುವುದು. ಇದು ರಾಜ್ಯಮಟ್ಟದ ಅಧ್ಯಯನ ಆಗಿರುವುದರಿಂದ ರಾಜ್ಯದ 225 ಜನ ಶಾಸಕಲು ಮತ್ತು 75 ಜನ ವಿಧಾನಸಭಾ ಸದಸ್ಯರಿಗೂ ರವಾನಿಸಲಾಗುವುದು.

ವಿಶ್ವದ 108 ಶಕ್ತಿಪೀಠಗಳಿಗೆ ಪೂಜಿಸಿ, ಉದ್ದೇಶಿತ 545 ಅಧ್ಯಯನ ಪೀಠಗಳ ಸ್ಥಾಪನೆಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು, ಇದು ಪ್ರಧಾನಿಯವರ ವಿಕಸಿತ ಭಾರತ @ 2047, ಮುಖ್ಯಮಂತ್ರಿಯವರ ಕರ್ನಾಟಕ ಅಭಿವೃದ್ಧಿ ಮಾದರಿ, ಉಪಮುಖ್ಯಮಂತ್ರಿಯವರ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಅಡಿಪಾಯವಾಗಲಿದೆ.

ಆಸಕ್ತರು ಕೈಜೋಡಿಸಬಹುದು.