TUMAKURU:SHAKTHIPEETA FOUNDATION
ಶ್ರೀ ಶಾಂತಮೂರ್ತಿಯವರು- 9481859935 ಈ ಕೆಳಕಂಡ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಆಸಕ್ತರು ಇವರೊಂದಿಗೆ ಸಮಾಲೋಚನೆ ಮಾಡುವುದು ಸೂಕ್ತ.
- ಎಡಕಲ್ಲು ಗುಡ್ಡದ ಪಾರ್ಕ್ ನಿರ್ವಹಣೆಗಾಗಿ ರಚಿಸುವ ಸಮಿತಿಗೆ, ಇಲ್ಲಿ ವಾಕ್ ಮಾಡುವವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವುದು.
- ಜಾಗವಿರುವ ಕಡೆ ಹೂವಿನ ಗಿಡ ಹಾಕುವುದು.
- ಲೋಳೆಸರ- ಅಲೋವೇರಾ ಹಾಕುವುದು.
- ವಿವಿಧ ಔಷಧಿ ಗಿಡ ಹಾಕುವುದು.
- ತುಂತುರು ಅಥವಾ ಹನಿ ನೀರಿನ ಸೌಲಭ್ಯ ಮಾಡುವುದು.
- ಶ್ರಮದಾನ ಮಾಡಿ ವಾರಕ್ಕೊಮ್ಮೆ ಗುಡಿಸಿ ಕ್ಲೀನ್ ಮಾಡುವುದು.
- ವಾಕ್ ಮಾಡುವವರೇ ಜಾಗ ಹಂಚಿಕೊಂಡು ಅವರವರ ಜಾಗವನ್ನು ಪ್ರತಿ ದಿನ ಗುಡಿಸುವುದು.
- ಒಬ್ಬರು ನೌಕರರನ್ನು ನೇಮಿಸಿಕೊಳ್ಳುವುದು, ಅವರಿಗೆ ಹೂ ಮಾರಿಕೊಂಡು, ಅಲೋವೇರಾ ಮಾರಿಕೊಂಡು ಕೂಲಿ ಸಂಪಾದನೆ ಹಾಗೂ ನಿರ್ಧಿಷ್ಠ ಕೂಲಿ ನಿಗದಿ ಮಾಡುವುದು.
- ಆಸಕ್ತರು ದಾನ ನೀಡುವ ಮೂಲಕ ಕೂಲಿ ನೀಡುವುದು.
ಪಂಚವಟಿ ಗಿಡದ ಸುತ್ತ ನಾನೇ ಗುಡಿಸಿಕೊಂಡು ವಾಕ್ ಮಾಡುತ್ತಿದ್ದೇನೆ. ತಾವೂ ಆರಂಭಿಸಬಹುದು.