6th December 2024
Share

TUMAKURU: SHAKTHIPEETA FOUNDATION

ನಾನು ಈಗಾಗಲೇ ಯುಟ್ಯೂಬ್ ಚಾನಲ್ ನ 7 ಎಪಿಸೋಡ್ ಗಳನ್ನು ಬಿಡುಗಡೆ ಮಾಡಿದ್ದೇನೆ. ಕಳೆದ ಕೆಲ ದಿನಗಳ ಹಿಂದೆ ಆರಂಭಿಸಿದ್ದ ಒಂದು ಎಪಿಸೋಡ್ ಮತ್ತು ಯಾರೋ ಅಪ್ ಲೋಡ್ ಮಾಡಿರುವ ಇನ್ನೊಂದೆರಡು  ಎಪಿಸೋಡ್ ನನ್ನ ಹೆಸರಿನಲ್ಲಿ ಇದೆ. ಅದು ನೆಗೆಟೀವ್ ಆಗಿದ್ದರೂ ನಾನು ತಲೆ ಕೆಡಿಸಿಕೊಂಡಿಲ್ಲ.

ನಾನು ಯಾವ ರೀತಿ ಯೂಟ್ಯೂಬ್ ಮಾಡಬೇಕು ಎಂಬ ಬಗ್ಗೆ ಹಲವಾರು ಸಲಹೆಗಳು ಬರುತ್ತಿವೆ, ಸಲಹೆಗಳನ್ನು ನನಗೆ ಕರೆ ಮಾಡಿ ತಿಳಿಸುತ್ತಿದ್ದಾರೆ. ನನ್ನ ಹಳೇ ಧಾಟಿಯಲ್ಲಿ ಮುಂದುವರೆಸಬೇಕೋ ಅಥವಾ ಬದಲಾಗಬೇಕೋ ಎಂಬ ಬಗ್ಗೆ ನನಗೂ ಗೊಂದಲವಿದೆ,

ನನ್ನ ಎಲ್ಲಾ ಸೋಶಿಯಲ್ ಮೀಡಿಯಾಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಚಿಂತನೆ ನಡೆಸಿದ್ದೇನೆ. ಈ ಹಿನ್ನಲೆಯಲ್ಲಿ ಆಸಕ್ತರು ಸೂಕ್ತ ಸಲಹೆ ನೀಡಲು ಮನವಿ.

ನಾನು ನನ್ನ ಎಪಿಸೋಡ್ ಗಳನ್ನು ಹೆಚ್ಚಿಗೆ ಜನ ನೋಡಬೇಕು ಎಂದಾದರೆ ಒಂದು ರೀತಿ ಮುಂದುವರೆಯ ಬೇಕು. ಎಷ್ಟು ಜನರಾದರೂ ನೋಡಲಿ, ಒಂದು ಪರಿPಲ್ಪನೆಗೆ ಸೀಮೀತವಾಗಿ, ಆಸಕ್ತರಿಗೆ ಮಾತ್ರ ತಿಳಿಸೋಣ ಎಂದಾದರೆ ಇನ್ನೊಂದು ರೀತಿ ಮುಂದುವರೆಯಬೇಕಾಗುತ್ತದೆ.