12th July 2024
Share

TUMAKURU:SHAKTHIPEETA FOUNDATION

  ದಿನಾಂಕ:03.06.2024 ರಂದು ನಡೆದ ಸಮಾರಂಭಕ್ಕೆ ಇಂದಿಗೆ 19 ದಿವಸಗಳಾಯಿತು. 18 ನೇ ಲೋಕಸಭೆಯ ಪಲಿತಾಂಶ ಬಂದು, 18 ದಿವಸಗಳಾಯಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿಯವರಿಗೆ, ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರಿಗೆ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ, ಶ್ರೀ ವಿ.ಸೋಮಣ್ಣನವರಿಗೆ, ಶ್ರೀ ಡಾ.ಜಿ.ಪರಮೇಶ್ವರ್ ರವರಿಗೆ ‘ಕುಂದರನಹಳ್ಳಿ ಘೋಷಣೆ’ ಕರಡು ಪ್ರತಿಯನ್ನು 108 ದಿವಸಗಳೊಳಗೆ ಕಳುಹಿಸಲು ಭರದ ಸಿದ್ಧತೆ ನಡೆದಿದೆ.

ಮೋದಿಯವರು ತನ್ನ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಅವರವರ ಇಲಾಖೆಯ 100 ದಿವಸಗಳ ಯೋಜನೆ ಸಿದ್ಧಪಡಿಸಲು ಸೂಚಿಸಿದ್ದಾರೆ. ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ ಸ್ವಾತಂತ್ರ್ಯ ಸೇನೆ @ 2027(ಬಿಎಸ್‍ಎಸ್) ಸಂಯುಕ್ತವಾಗಿ 2047 ರವರೆಗೆ ಕೈಗೊಳ್ಳುವ ಯೋಜನೆಗಳ ಪಟ್ಟಿಯೇ ಕುಂದರನಹಳ್ಳಿ ಘೋಷಣೆ

ಕಳೆದ 36 ವರ್ಷಗಳ ನನ್ನ ಸುಧೀರ್ಘ, ಅಭಿವೃದ್ಧಿ ಹೋರಾಟಗಳ ಮಜಲುಗಳಿಗೆ, ಒಂದು ಮುಕ್ತಿಯೇ ನನ್ನ ಪರಿಕಲ್ಪನೆಯ ಅಭಿವೃದ್ಧಿ ಮ್ಯೂಸಿಯಂ, ಶಕ್ತಿಭವನ, ಶಕ್ತಿಪೀಠ ಡಾಟಾ ಪಾರ್ಕ್ ಮತ್ತು ಶಕ್ತಿಪೀಠ ಕ್ಯಾಂಪಸ್ ಕನಸು.