8th September 2024
Share

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲೆಯನ್ನು ನಿರುದ್ಯೋಗ ರಹಿತ ಜಿಲ್ಲೆಯಾಗಿ ಘೋಷಣೆ ಮಾಡಲು, ಅಗತ್ಯವಿರುವ ಅವಕಾಶಗಳ ಬಗ್ಗೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ದಿನಾಂಕ:28.06.2024 ರಂದು ನಡೆಯಿತು.

ದಿನಾಂಕ:03.06.2024 ರಂದು ಕುಂದರನಹಳ್ಳಿಯಲ್ಲಿ ಕೈಗೊಂಡ ನಿರ್ಣಯದ ಪ್ರಕಾರ ಗುಬ್ಬಿ ಹೆಚ್.ಎ.ಎಲ್ ಬಳಿ ಬಿದರೆಹಳ್ಳಕಾವಲ್‍ನ ಸರ್ಕಾರಿ ಜಮೀನಿನನಲ್ಲಿ ಒಂದು ಸುಸಜ್ಜಿತವಾದ ಬಹುಪಯೋಗಿ ಕ್ಯಾಂಪಸ್ ನಿರ್ಮಾಣ ಮಾಡುವ ಬಗ್ಗೆ ಕಲ್ಪನಾ ವರದಿಯನ್ನು ಸಿದ್ಧಪಡಿಸಲು ನಿರ್ಣಯ ಕೈಗೊಳ್ಳಲಾಯಿತು.

ಡಾ.ಪರುಶುರಾಮ್ ಪ್ರಾದ್ಯಾಪಕರು, ಸಮಾಜಕಾರ್ಯ ವಿಭಾಗ, ಡಾ.ಸುರೇಶ್ ಬಿ. ಉಪಕುಲಸಚಿವರು, ಶೈಕ್ಷಣಿಕ ವಿಭಾಗ, ಡಾ.ಶರತ್ಚಂದ್ರ ಮೈಕ್ರೋಬಯಾಲಜಿ, ಬಯೋಟೆಕ್ನಾಲಜಿ, ಎಕ್ಸಿಕ್ಯೂಟೀವ್ ಇಂಜಿನಿಯರ್ ಸುರೇಶ್, ಜೂನಿಯರ್ ಇಂಜಿನಿಯರ್ ನಾಗರಾಜ್ ಇನ್ನೂ ಮುಂತಾದವರು ಇದ್ದರು.

ಸುಮಾರು 7  ವರ್ಷUಳ ಹಿಂದೆ ರಚಿಸಿದ್ದ ಸತ್ವ ಪರಿಕಲ್ಪನಾ ವರದಿ ಬಗ್ಗೆಯೂ ಚರ್ಚೆ ನಡೆಯಿತು. ನಾನು ಸಹ ಅಂದು ರಚಿಸಿದ್ದ ¸ಮಿತಿಯ ಸದಸ್ಯನಾಗಿದ್ದೆ. ಇಂದು ಪುನರ್‍ಜೀವ ಕೊಡುವ ಅವಕಾಶಗಳ ಬಗ್ಗೆ ಸಮಾಲೋಚನೆ ನಡೆಯಿತು.

ಶೀಘ್ರದಲ್ಲಿ ಆಸಕ್ತರ ಜೊತೆ ಒಂದು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.