TUMAKURU:SHAKTHIPEETA FOUNDATION
ದಿನಾಂಕ:30.06.2024 ರಂದು ತುಮಕೂರು ಬಿಟ್ಟು ದಿನಾಂಕ:05.07.2024 ಕ್ಕೆ ತುಮಕೂರಿಗೆ ಬರಲಾಗಿದೆ. ದೆಹಲಿಯಲ್ಲಿ ಆನೇಕ ಕಚೇರಿಗಳಿಗೆ ಭೇಟಿ ನೀಡಿ ಹಲವಾರು ವಿಷಯಗಳ ಬಗ್ಗೆ ಸಮಾಲೋಚನೆ ಮಾಡಲಾಗಿದೆ.
ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ದೆಹಲಿ ಮನೆಯಲ್ಲಿನ ಕೊನೆಯ ವಾಸ್ತವ್ಯ ಇದಾಗಿತ್ತು. ವಿಮಾನ ವೆಚ್ಚವೂ ಸೇರಿದಂತೆ, ಈ ಪ್ರವಾಸದ ಎಲ್ಲಾ ಖರ್ಚುವೆಚ್ಚವೂ ನಮ್ಮದೇ ಆಗಿದೆ. ಇದೂವರೆಗೂ ದೆಹಲಿಯ ಭೇಟಿಯ ಎಲ್ಲಾ ಖರ್ಚುವೆಚ್ಚವನ್ನು ಬಸವರಾಜ್ ರವರು ಭರಿಸುತ್ತಿದ್ದರು. ನನ್ನ ಬೇಬಿನಿಂದ ಒಂದು ಪೈಸೆಯೂ ಖರ್ಚಾಗದಂತೆ ಹಲವಾರು ದೆಹಲಿ ಭೇಟಿ ಆಗಿದೆ. ಈಗ ‘ತಲೆಬಿಸಿ’ ಆರಂಭವಾಗಿದೆ.
ಈ ಭಾರಿ ವಾಸ್ತವ್ಯ ಮತ್ತು ಊಟ ತಿಂಡಿಯ ವೆಚ್ಚ ಮಾತ್ರ ಬಸವರಾಜ್ ರವರ ಆತಿಥ್ಯವಾಗಿತ್ತು. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ Àವಿ.ಸೋಮಣ್ಣವರು ಸೇರಿದಂತೆ ಯಾವುದೇ ಪಕ್ಷದ ಚುನಾಯಿತ ಜನಪ್ರತಿನಿಧಿಯವರನ್ನು ಮುಖತಃ ಭೇಟಿಯಾಗಲಿಲ್ಲ. ದೂರವಾಣಿಯಲ್ಲಿ ಮಾತ್ರ ಸಮಾಲೋಚನೆ ನಡೆಸಲಾಗಿದೆ.
ಅಧಿಕಾರಿಗಳು ಮತ್ತು ದೆಹಲಿಯಲ್ಲಿರುವ ಕರ್ನಾಟಕ ರಾಜ್ಯದ ಜನರ ಜೊತೆಯ ಒಡನಾಟವೇ ಪ್ರಧಾನವಾಗಿತ್ತು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಕೇಂದ್ರವನ್ನು ಪ್ರತಿನಿಧಿಸುವ ಸಚಿವರುಗಳ ಇಲಾಖೆಯ ವತಿಯಿಂದ ಏನೇನು ಯೋಜನೆಯನ್ನು ಎಲ್ಲೆಲ್ಲಿಗೆ ಮಂಜೂರು ಮಾಡಿಸಬಹುದು ಎಂಬ ಬಗ್ಗೆ ಚರ್ಚೆಗಳು ನಡೆದಿವೆ,
ಒಂದೊಂದಾಗಿ ವಿಷಯ ಹಂಚಿಕೊಳ್ಳಲಾಗುವುದು.