19th March 2025
Share

TUMAKURU:SHAKTHIPEETA FOUNDATION

  ಲೋಕಸಭಾ ಚುನಾವಣಾ ಪಲಿತಾಂಶ ಬಂದ 50 ನೇ ದಿವಸ ಅಂದರೆ ದಿನಾಂಕ:23.07.2024 ನೇ ಮಂಗಳವಾರ ತುಮಕೂರು @ 2047 ಪರಿಕಲ್ಪನಾ ವರದಿ ಕರಡು ಪ್ರತಿ ಯನ್ನು ಮಾನ್ಯ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ  ಹಾಗೂ ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಪ್ರಸ್ತಾವನೆ ಸಲ್ಲಿಸುವ ಜೊತೆಗೆ, ಸಾರ್ವಜನಿಕರಿಗೆ ಸಲಹೆಗಳಿಗಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಶಕ್ತಿಪೀಠ ಫೌಂಡೇಷನ್ ಸಿದ್ಧಪಡಿಸಿ ಸಲ್ಲಿಸಿರುವÀ ಅಂಶಗಳ ಬಗ್ಗೆ, ತುಮಕೂರು ರೀಸರ್ಚ್ ಫೌಂಡೇಷನ್ @ 2047 ಪರಿಕಲ್ಪನಾ ವರದಿ ಅಂತಿಮ ಗೊಳಿಸಲಿದೆ.

ಈ ಸಂಭಂದ ದಿನಾಂಕ:08.07.2024 ರಂದು ಬೆಂಗಳೂರಿನಲ್ಲಿ ವಿವಿಧ ವರ್ಗದವರ ಜೊತೆ ಸರಣೆ ಸಭೆಗಳು ನಡೆಯಲಿವೆ. ಇಂದು ಬೆಳಿಗ್ಗೆಯಿಂದ ಇದೂವರೆಗೂ ಸಮಾಲೋಚನೆ ನಡೆಸಿದ್ದ ಎಲ್ಲಾ ಅಂಶಗಳ ಕ್ರೋಢಿಕೃತ ಪಟ್ಟಿಯನ್ನು ತುಮಕೂರು ರೀಸರ್ಚ್ ಫೌಂಡೇಷನ್ @ 2047 ಪದಾಧಿಕಾರಿಗಳಿಗೆ ರವಾನಿಸಲಾಗಿದೆ.

ಕಾಕತಾಳೀಯವೆಂದರೆ ತುಮಕೂರು ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಸಚಿವರಾದ ಶ್ರೀ ವಿÀ.ಸೋಮಣ್ಣನವರ ಆಪ್ತಶಾಖೆಯ ಪ್ರಮುಖ ಅಧಿಕಾರಿಗಳು ಸಹ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಿರುವ  ತುಮಕೂರು ರೀಸರ್ಚ್ ಫೌಂಡೇಷನ್ @ 2047 ನ ಸದಸ್ಯರಾಗಿದ್ದಾರೆ.

ಪ್ರತಿಯೊಬ್ಬ ಸದಸ್ಯರು ವಿಷಯವಾರು ತಮ್ಮ ಅಭಿಪ್ರಾಯ ಸಲ್ಲಿಸಲು ಮನವಿ ಮಾಡಲಾಗಿದೆ.