TUMAKURU:SHAKTHIPEETA FOUNDATION
ದಿನಾಂಕ:07.01.1997 ರಿಂದ ನಿರಂತರವಾಗಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಹಾಗೂ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಯಲ್ಲಿ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಬೇಕು. ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ನದಿ ನೀರಿನಲ್ಲಿ ಆಯಾ ಗ್ರಾಮದ ಕೆರೆ-ಕಟ್ಟೆಗಳಿಗೆ ನದಿ ನೀರಿನ ಅಲೋಕೇಷನ್ ಆಗಬೇಕು, ಎಂಬ ಪ್ರತಿಪಾದನೆ ಮಾಡುತ್ತಾ ಬರಲಾಗಿದೆ.
ಈಗ ರಾಜ್ಯ ಸರ್ಕಾರದ ಮುಂದೆ ‘ಊರಿಗೊಂದು ಕೆರೆ– ಆ ಕೆರೆಗೆ ನದಿ ನೀರು’ ಯೋಜನೆಗೆ ಡಿ.ಪಿ.ಆರ್ ಸಿದ್ಧಪಡಿಸಲು ಮಾನ್ಯ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ಮಾಡಿದ್ದರೂ ಕಾರಣವಿಲ್ಲದೆ ನನೆಗುದಿಗೆ ಬಿದ್ದಿದೆ.
ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಹಾಗೂ ಮುಂದೆ 2047 ರವರೆಗೆ ಕೈಗೊಳ್ಳಬಹುದಾದ ನೀರಾವರಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸಲೇ ಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಣ್ಣಾ-ಮುಚ್ಚಾಲೆ ಆಟಕ್ಕೆ, ಇಂಜಿನಿಯರಿಂಗ್ ಯೋಜನೆಗಳಿಗೆ ತಿಲಾಂಜಲಿ ಇಡುವದಲ್ಲದೆ, ಬರೀ ರಾಜಕೀಯ ಯೋಜನೆಗಳ ಆಟಕ್ಕೆ ಬ್ರೇಕ್ ಹಾಕಲೇ ಬೇಕಿದೆ.
ಈ ಹಿನ್ನಲೆಯಲ್ಲಿ ರಾಜ್ಯ ಹೈಕೋರ್ಟ್‍ನಲ್ಲಿ ಪಿಐಎಲ್ ಹಾಕಲು ಸಿದ್ಧತೆ ನಡೆಯುತ್ತಿದೆ. ಜಲಸಂಪನ್ಮೂಲ ಸಚಿವರಿಗೆ ಸುಮಾರು 20 ವಿಷಯಗಳ ಬಗ್ಗೆ ಸಭೆ ನಡೆಸಲು ಪತ್ರವನ್ನು ಇಂದು ನೀಡಲಾಗುತ್ತಿದೆ.
ಆಗಸ್ಟ್ ತಿಂಗಳಲ್ಲಿ ಪಿಐಎಲ್ ಸಲ್ಲಿಸಲು ದಾಖಲೆಗಳ ಸಂಗ್ರಹಕ್ಕಾಗಿ ದಿನಾಂಕ:11.07.2024 ರಂದು ಸುಮಾರು 20 ವಿಷಯಗಳ ಮಾಹಿತಿಗಾಗಿ ಮಾಹಿತಿ ಹಕ್ಕು ಅಧಿನಿಯಮದಡಿ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ, ಜಿ.ಎಸ್.ಬಸವರಾಜ್ ರವರುÀ ಮತ್ತು ಆಪ್ನಾಸ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಶಕ್ತಿಪೀಠ ಫೌಂಡೇಷನ್, ಇದೂವರೆಗೂ ನಡೆಸಿರುವ ಪತ್ರ ವ್ಯವಹಾರಗಳ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪುಟಗಳ ಎಲ್ಲಾ ದಾಖಲೆಗಳು ಡಿಜಿಟಲ್ ಆಗುತ್ತಿವೆ.
ಜೊತೆಗೆ ರಾಜ್ಯದ ನೀರಾವರಿ ತಜ್ಞರುಗಳು ಸರ್ಕಾರಕ್ಕೆ ನೀಡಿರುವ ವರದಿಗಳ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಇದೂವರೆಗೂ ಕೇಂದ್ರ ಸರ್ಕಾರಕ್ಕೆ ನಡೆಸಿರುವ ಪತ್ರ ವ್ಯವಹಾರಗಳ ಮಾಹಿತಿಯ ಸಂಗ್ರಹವೂ ಆಗುತ್ತಿದೆ.
ಡಿ.ಕೆ.ಶಿವಕುಮಾರ್ರವರು ಈ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆಂಬ ಭರವಸೆ ನನಗೆ ಇದೆ ಕಾದು ನೋಡೋಣ.