21st December 2024
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳಲ್ಲಿ ಆನೇಕ ಗುಂಪುಗಳಿವೆ. ಈ ಎಲ್ಲಾ ಗುಂಪುಗಳ ಒಡನಾಟ ನನಗೆ ಇದೆ. ದಿನಾಂಕ:12.07.2024 ರಂದು ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಯವರಿಗೆ ಪತ್ರ ನೀಡಿದ ನಂತರ ಬಹುತೇಕ ಎಲ್ಲಾ ಗುಂಪುಗಳಿಗೂ ಡಿಜಿಟಲ್ ದಾಖಲೆ ರವಾನಿಸಲಾಗಿದೆ.

ಪ್ರಮುಖರಾದವರ ಜೊತೆ ಸಮಾಲೋಚನೆಯನ್ನು ನಡೆಸಲಾಗಿದೆ. ಎಲ್ಲರ ಅಭಿಪ್ರಾಯ ಒಂದೇ ಆಗಿದೆ, ನೀವೂ ಮಾಡುತ್ತಿರುವುದು ಬಹಳ ಒಳ್ಳೆಯ ಕೆಲಸ, ಇದಕ್ಕೂ ಮುನ್ನ ರಾಜ್ಯದ

  1. ಕೇಂದ್ರ ಸಚಿವರು ಸೇರಿದಂತೆ ಎಲ್ಲಾ 28 ಜನ ಲೋಕಸಭಾ ಸದಸ್ಯರು
  2. ಕೇಂದ್ರ ಸಚಿವರು ಸೇರಿದಂತೆ ಎಲ್ಲಾ 14 ಜನ ರಾಜ್ಯಸಭಾ ಸದಸ್ಯರು
  3. ಮುಖ್ಯಮಂತ್ರಿಯವರು  ಸೇರಿದಂತೆ ಎಲ್ಲಾ 225 ಜನ ವಿಧಾನಸಭಾ ಸದಸ್ಯರು
  4. ರಾಜ್ಯ ಸಚಿವರು ಸೇರಿದಂತೆ ಎಲ್ಲಾ 75 ಜನ ವಿಧಾನ ಪರಿಷತ್ ಸದಸ್ಯರು
  5. ಇಬ್ಬರು ದೆಹಲಿ ವಿಶೇಷ ಪ್ರತಿನಿಧಿಗಳಿಗೂ 

ಮನವಿ ಸಲ್ಲಿಸಿ ಅವರಿಂದ ಮುಖ್ಯಮಂತ್ರಿಯವರಿಗೆ ಮತ್ತು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಸುವ ಆಂದೋಲನ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.

 20 ಅಂಶಗಳ ಜೊತೆಗೆ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತಾವೂ ಬರೆದಿರುವ ಇನ್ನೂ ಆನೇಕ ಪತ್ರಗಳಿವೆ, ಆ ವಿಷಯಗಳು ಹಾಗೂ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಬರೆದಿರುವ ಪತ್ರಗಳ ವಿಷಯಗಳನ್ನು ಸಂಗ್ರಹಿಸುವುದು ಸೂಕ್ತ ಎಂದು ಆಸಕ್ತ ವಕೀಲರ ತಂಡದವರು ಸಲಹೆ ನೀಡಿದ್ದಾರೆ.

ಅಪ್ನಾಸ್ ಸಂಸ್ಥೆಯಿಂದ ದಿನಾಂಕ:07.01.1997 ರಿಂದ ನಡೆಸಿರುವ ಎಲ್ಲಾ ದಾಖಲೆಗಳನ್ನು ಪಿಐಎಲ್ ಹಾಕುವಾಗ ಜೋಡಣೆ ಮಾಡಲು ಚಿಂತನೆ ನಡೆಸಲಾಗಿದೆ. ಕಾಗದ ಪತ್ರಗಳ ಜೋಡಣೆ ಆರಂಭವಾಗಿದೆ.