TUMAKURU:SHAKTHIPEETA FOUNDATION
500 ಕ್ಕೂ ಹೆಚ್ಚು ಟಿ.ಎಂ.ಸಿ ಅಡಿ ನೀರಿನ ಸಾಮಾಥ್ರ್ಯದ ಹೊಸ ಡ್ಯಾಂ ಪ್ರಸ್ತಾವನೆಗಳು ಇವೆಯಂತೆ ?
ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ನಿರ್ಮಾಣ ಮಾಡಬಹುದಾದ ಹಾಗೂ ಹಾಲಿ ಇರುವ ಡ್ಯಾಂಗಳನ್ನು ದೊಡ್ಡದಾಗಿ ಮಾಡುವುದರಿಂದ ಸುಮಾರು ಒಟ್ಟು 550 ಟಿಎಂಸಿ ಅಡಿ ನೀರಿನ ಸಾಮಾಥ್ರ್ಯದ 23 ಡ್ಯಾಂಗಳನ್ನು/ವಾಟರ್ ಬ್ಯಾಂಕ್ ನಿರ್ಮಾಣ ಮಾಡಬಹುದು ಎಂದು ರಾಜ್ಯದ ಹಲವಾರು ‘ಜಲಜ್ಞಾನಿ’ಗಳು ಸಲಹೆ ನೀಡುತ್ತಿದ್ದಾರೆ.
ಅಗತ್ಯವಿದ್ದಲ್ಲಿ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಹೊಸ ಡ್ಯಾಂಗಳ ಸ್ಥಳಗಳನ್ನು ಹುಡುಕಬಹುದಾಗಿದೆಯಂತೆ. ಇವುಗಳ ಸ್ಥಳ ಮತ್ತು ತಾಂತ್ರಿಕ ಸಾಧಕ-ಭಾದಕಗಳ ಬಗ್ಗೆ ಅಧ್ಯಯನದ ಅಗತ್ಯವಿದೆ ಎನ್ನುತ್ತಾರೆ ತಜ್ಞರು.
ಹೊಸದಾಗಿ ನಿರ್ಮಾಣ ಮಾಡಲು ಉದ್ದೇಶಿರುವ ಡ್ಯಾಂಗಳಿಗೆ, ಈ ಕೆಳಕಂಡ ಯೋಜನೆಗಳ ಮೂಲಕ ಸುಮಾರು 600 ಟಿಎಂಸಿ ಅಡಿ ನೀರಿನ ಯೋಜನೆ ರೂಪಿಸಬಹುದಾಗಿದೆಯಂತೆ.
ಈ ಮೂಲಗಳಿಂದ ದೊರೆಯುವ ನೀರನ್ನು ಡ್ಯಾಂಗಳಿಗೆ ತುಂಬಿಸಿ, ಕುಡಿಯುವ ಮತ್ತು ಕೈಗಾರಿಕೆಗಳಿಗೆ ಮಾತ್ರ ಬಳಸಬಹುದಾಗಿದೆ. ಇದಕ್ಕೆ ರಾಜಕೀಯ ಇಚ್ಚಾ ಶಕ್ತಿ ಅವಶ್ಯಕತೆ ಇದೆ.
ಈ ಯೋಜನೆಗೆ ‘ಜಲಜೀವನ್ ಮಿಷನ್ ಕಾರಿಡಾರ್’ ಎಂದು ಹೆಸರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆ ರೂಪಿಸಲು ಚಿಂತನೆ ಮೊಳಕೆ ಒಡೆದಿದೆ.
- ಕೇಂದ್ರ ಸರ್ಕಾರ ರೂಪಿಸುತ್ತಿರುವ ನದಿ ಜೋಡಣೆ ನೀರು.
- ರಾಜ್ಯ ಸರ್ಕಾರ ರೂಪಿಸುತ್ತಿರುವ ರಾಜ್ಯದ ನದಿ ಜೋಡಣೆ ನೀರು.
- ರಾಜ್ಯದ ಎಲ್ಲಾ ನದಿಪಾತ್ರಗಳ ಪ್ರವಾಹದ ನೀರು.
- ರಾಜ್ಯದಲ್ಲಿ ಪ್ಲಡ್ ಇರ್ರಿಗೇಷನ್ ಬ್ಯಾನ್ ಮಾಡಿ/ರದ್ದುಪಡಿಸಿ ಮೈಕ್ರೋ ಇರ್ರಿಗೇಷನ್ ರೂಪಿಸಿ, ಉಳಿಯುವ ನದಿ ನೀರು.
ಕರ್ನಾಟಕ ರಾಜ್ಯದಲ್ಲಿ ನಿರ್ಮಾಣ ಮಾಡಬಹುದಾದ ಹೊಸ ಡ್ಯಾಂಗಳ ಪ್ರಸ್ತಾವನೆಯನ್ನು ಯಾರು, ಯಾರು ಸಿದ್ಧಪಡಿಸಿದ್ದಾರೆ, ಯಾವ ಹಂತದಲ್ಲಿ ಪ್ರಸ್ತಾವನೆಗಳು ಇವೆ ಎಂಬ ಬಗ್ಗೆ ತಜ್ಞರುಗಳ, ಸರ್ಕಾರಗಳ ವರದಿಯೊಂದಿಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.