8th September 2024
Share

TUMAKURU:SHAKTHIPEETA FOUNDATION

  1996-1997 ರಿಂದ 2024-2025 ಸುಧೀರ್ಘವಾಗಿ 29 ವರ್ಷಗಳ ಕಾಲ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ, ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಹಾಗೂ ನಾನುÀ ಸರ್ಕಾರಗಳ ಹಂತದಲ್ಲಿ ನಡೆಸಿದ ಪತ್ರಗಳ ಮತ್ತು ಮಾಹಿತಿ ಹಕ್ಕು ಅಧಿನಿಯಮದ ದಾಖಲೆಗಳ ಸಂಗ್ರಹಗಳ ಡಿಜಿಟಲ್ ಕಾರ್ಯ ಆರಂಭವಾಗಿದೆ.

ಜಲಗ್ರಂಥ @ 2047 ಮತ್ತು ಜಲಶಕ್ತಿ ಯೋಜನೆಗಳ ಮೌಲ್ಯಮಾಪನ’ ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದೂ ಕೇವಲ ತುಮಕೂರು ಜಿಲ್ಲೆಗೆ ಸೀಮೀತವಾಗದೆ, ಕರ್ನಾಟಕ ರಾಜ್ಯ ಮಟ್ಟದ ವರದಿಯಾಗಲಿದೆ.

ರಾಜ್ಯದ ಎಲ್ಲಾ ನೀರಾವರಿ ತಜ್ಞರ, ಹೋರಾಟಗಾರರ, ಅಧ್ಯಯನ ಮತ್ತು ಸಂಶೋಧಕರ ಮಾಹಿತಿಗಳ ಸಂಗ್ರಹವೂ ಅಗತ್ಯವಾಗಿದೆ. ದಿನಾಂಕ:26.03.2022 ರಂದು ಅಂದರೆ ಸುಮಾರು  2 ವರ್ಷಗಳ ಹಿಂದೆಯೇ ದಾಖಲೆಗಳ ಸಂಗ್ರಹ ಆರಂಭ ಮಾಡಿದ್ದರೂ, ನನ್ನ ಕನಸಿನ ಶಕ್ತಿಭವನ ಕಟ್ಟಡದ ನಿರ್ಮಾಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಅಷ್ಟಾಗಿ ಗಮನ ಹರಿಸಲು ಸಾಧ್ಯವಾಗಲಿಲ್ಲ.

ದಿನಾಂಕ:10.05.2024 ರಂದು ವಿಶ್ವ ಗುರು ಬಸವಣ್ಣನವರÀ ಜಯಂತಿಯಂದು ಶಕ್ತಿಭವನ ದ ಪೂಜೆ ಮಾಡುವ ಮೂಲಕ ಆರಂಭದಲ್ಲಿ, ವಿಶ್ವದ 108 ಶಕ್ತಿಪೀಠಗಳ ಮಾಹಿತಿ ಸಂಗ್ರಹ ಮಾಡಲು ಶಕ್ತಿಪೀಠ ವತಿಯಿಂದ ಮೊದಲ ಆಧ್ಯತೆ ನೀಡಲಾಯಿತು ಅದು ಪ್ರಗತಿಯಲ್ಲಿದೆ.

ಎರಡನೇ ಆಧ್ಯತೆ ಜಲಪೀಠ ವತಿಯಿಂದ ಜಲಗ್ರಂಥ @2047 ಸಿದ್ಧತೆಗೆÉ ನೀಡಲಾಗಿದೆ. ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಮತ್ತು ಮುಖ್ಯಕಾರ್ಯದರ್ಶಿಯವರಿಗೆ, ಮಾನ್ಯ ಮುಖ್ಯಮಂತ್ರಿಯವರ ಅದೇಶವಿದ್ದರೂ, ಹಲವಾರು ಯೋಜನೆಗಳ ಅಧ್ಯಯನಕ್ಕೆ ವಿಳಂಭ ಮಾಡಿರುವುದರಿಂದ ನ್ಯಾಯಾಲಯದಲ್ಲಿ ಪಿ..ಎಲ್ ಹಾಕುವ ಸಂಭಂದ ದಿನಾಂಕ:12.07.2024 ರಂದು ಮನವಿ ಮಾಡಲಾಗಿದೆ.

ಕಳೆದ 29 ವರ್ಷಗಳ ಅನುಭವದ ಆಧಾರದಲ್ಲಿ ಸುಮಾರು 900 ಕ್ಕೂ ಹೆಚ್ಚು ವಿಷಯಗಳ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದ ಮೂಲಕ, ಮಾಹಿತಿ ಸಂಗ್ರಹ ಮಾಡಲು ಗುರಿಹೊಂದಲಾಗಿದೆ. ಜೊತೆಗೆ ಹಲವಾರು ಪ್ರಮುಖ ಅಧಿಕಾರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸಲಾಗುತ್ತಿದೆ.

ಮೂರನೇ ಆಧ್ಯತೆ ಅಭಿವೃದ್ಧಿ ಪೀಠ’ದ ವತಿಯಿಂದ ತುಮಕೂರು ಲೋಕಸಭಾ ಕೇತ್ರದ ಪೈಲಟ್ ಯೋಜನೆ ಅಧ್ಯಯನ ಮತ್ತು ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯುವ ಕಾರ್ಯತಂತ್ರಗಳ ಅವಲೋಕನಕ್ಕೆ ನೀಡಲಾಗಿದೆ. ಬಹುತೇಕ ಎಲ್ಲಾ ಇಲಾಖಾವಾರು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ,  ಯಾವ ವಿಧಾನಸಭಾ ಕ್ಷೇತ್ರಕ್ಕೆ ಯಾವ ಯೋಜನೆಗಳಿಗೆ, ವಿಶೇಷ ಗಮನ ಹರಿಸಬೇಕು ಎಂಬ ಬಗ್ಗೆ ಮಾಹಿತಿ ಸಂಗ್ರಹವೂ ಆರಂಭವಾಗಿದೆ.

ಕಾಯಕವೇ ಕೈಲಾಸ ನಿಜಕ್ಕೂ ಇದೊಂದು ದೇವರ ಕೆಲಸ, ದಿನದ 24 ಗಂಟೆ ಸಾಕಾಗುತ್ತಿಲ್ಲ ಎಂಬ ನೋವು ಇದೆ. ದಿನ ನಿತ್ಯದ ಚಟುವಟಿಕೆಗಳಿಗೆ  ಆರ್ಥಿಕ’ ವ್ಯವಸ್ಥೆಯ ಅಗತ್ಯದ ಬಗ್ಗೆಯೂ ಗಮನ ಹರಿಸಬೇಕಿದೆ.