8th September 2024
Share

TUMAKURU:SHAKTHIPEETA FOUNDATION

  ಈ ಭಾರಿಯೂ ಕೇಂದ್ರ ಸರ್ಕಾರದ 2024-25 ನೇ ಸಾಲಿನ ಆಯವ್ಯಯದಲ್ಲಿ ಕೆಲವೇ ಕೆಲವು ರಾಜ್ಯಗಳಿಗೆ ವಿಶೇಷ ಯೋಜನೆ ಮಂಜೂರು ಮಾಡಿದೆ. ಕರ್ನಾಟಕ ರಾಜ್ಯದ ಬೆಂಗಳೂರು ಹೆಸರು ಹೈದರಾಬಾದ್- ಬೆಂಗಳೂರು ಕಾರಿಡಾರ್ ಯೋಜನೆಯಲ್ಲಿ ಮಾತ್ರ ಬಂದಿದೆ. ಉಳಿದಂತೆ ಕರ್ನಾಟಕದ ಯಾವುದೇ ಹೆಸರು ಬಂದ ಹಾಗೆ ಕಾಣಲಿಲ್ಲ.

ಆದರೂ ರಾಜ್ಯಕ್ಕೆ ಅನುದಾನ ಪಡೆಯಲು ಯಾವುದೇ ಅಡ್ಡಿ ಇಲ್ಲ. 28 ಜನ ಲೋಕಸಭಾ ಸದಸ್ಯರಲ್ಲಿ ಯಾರು, ಯಾವ ಯೋಜನೆಗೆ ಪ್ರಸ್ತಾವನೆ ಸಲ್ಲಿಸುತ್ತಾರೋ ಆ ಯೋಜನೆಗೆ ಲಾಭಿ ಮಾಡಿದರೇ ಮಾತ್ರ ವಿಶೇಷ ಹಣ ತರಬಹುದು. ಮುಂದುವರೆದ ಕಾಮಗಾರಿಗಳಿಗೆ ಹಣ ಬಂದೇ ಬರುತ್ತದೆ. ಪ್ರತಿಯೊಂದು ಇಲಾಖೆಯ ಅನೆಕ್ಷರ್ ನೋಡಿದಾಗ ಖಚಿತವಾದ ಮಾಹಿತಿ ದೊರೆಯಲಿದೆ.

ತುಮಕೂರು ಜಿಲ್ಲೆಗೆ ಈ ವರ್ಷ ರೂ 2500-3000 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಬಹುದಾದ ವಿಫುಲ ಅವಕಾಶವಿದೆ. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು, ಚಿತ್ರದುರ್ಗ ಲೋಕಸಭಾ ಸದಸ್ಯರಾದ ಶ್ರೀ ಗೋವಿಂದಕಾರಜೋಳರವರು ಮತ್ತು ಬೆಂಗಳೂರು ಗ್ರಾಮಾಂತರÀ ಲೋಕಸಭಾ ಸದಸ್ಯರಾದ ಶ್ರೀ ಡಾ.ಮಂಜುನಾಥ್ ರವರು ವಿಶೇಷ ಆಸಕ್ತಿ ವಹಿಸುವ ಭರವಸೆ ಇದೆ.

ಭಧ್ರಾ ಮೇಲ್ದಂಡೆ ಯೋಜನೆಯ ರೂ 5300 ಕೋಟಿ ಅನುದಾನ ಬಿಡುಗಡೆಗೆ ಕೇಂದ್ರ ಸಚಿವ ಸಂಪುಟದಲ್ಲಿ ವಿಷಯ ಮಂಡಿಸಬೇಕಾಗಿದೆ. ಕಾದು ನೋಡೋಣ ?