16th September 2024
Share

TUMAKURU:SHAKTHIPEETA FOUNDATION

  ಪಶ್ಚಿಮಾಭಿಮುಖವಾಗಿ ಹರಿಯುವ ನೀರಿನ ‘ಎತ್ತಿನಹೊಳೆ ಯೋಜನೆ ಸಕ್ಸಸ್ ಆಗುತ್ತಾ ? ಎಂಬ ಮಾತು ಕೇಳಿ ಬರುತ್ತದೆ. ಹೌದು ಇದು ಕೇವಲ ಟೀಕಾಕಾರರ ಪ್ರಶ್ನೆಯಲ್ಲ. ಯೋಜನೆಗೆ ಪ್ರಾಮಾಣಿಕವಾಗಿ ಶ್ರಮಿಸಿರುವ ಪ್ರತಿಯೊಬ್ಬ ಇಂಜಿನಿಯರ್‍ಗೂ, ಚುನಾಯಿತ ಜನಪ್ರತಿನಿಧಿಗಳ ಯಕ್ಷ ಪ್ರಶ್ನೆ.

  2000 ನೇ ಇಸವಿಯಲ್ಲಿ ಆರಂಭಿಸಿದ ಸಮೀಕ್ಷೆಯ ವೆಚ್ಚವೂ ಸೇರಿದಂತೆ, ಇಲ್ಲಿಯವರೆಗೂ ಎತ್ತಿನಹೊಳೆ ಯೋಜನೆಗೆ ಪ್ರತಿಯೊಬ್ಬ ಮುಖ್ಯಮಂತ್ರಿ/ಜಲಸಂಪನ್ಮೂಲ ಸಚಿವರ ಅವಧಿವಾರು ಮಾಡಿರುವ ಖರ್ಚುವೆಚ್ಚ ? ಹಾಗೂ ಶ್ರಮದ ವಿವರ’ ಗಳನ್ನು ಸಾರ್ವಜನಿಕರಿಗೆ ತಿಳಿಸುವುದು ಅಗತ್ಯವಾಗಿದೆ.

ಯೋಜನೆಯ ಪ್ರತಿಯೊಂದು ಹಂತದಲ್ಲೂ, ನೂರಾರು ಅಡಚಣೆಗಳು ಬಂದಿವೆ, ರೈತರ, ಪರಿಸರದ, ಭೂ ಸ್ವಾಧೀನ, ಕಾನೂನು ತೊಡಕುಗಳ ಜೊತೆಗೆ ಆನೇಕ ಲಾಭಿಗಳ ಒತ್ತಡವೂ ಯೋಜನೆಯ ಹಿಂದೆ ಇದೆ.

   ಎಲ್ಲದರ ಮಧ್ಯೆ ಇದೊಂದು ಅತ್ತುತ್ತಮವಾದ ಯೋಜನೆಯಾಗಿ ರೂಪಿಸ ಬೇಕಾದರೆ, ಯೋಜನೆಯ ವಿಶ್ಲೇಷಣೆ, ಮುಂದಿನ ಕನಸುಗಳ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ’.

  ವರ್ಷದ 365 ದಿವಸವೂ ಭಧ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಕಾಲುವೆಯಲ್ಲಿ ನೀರು ಹರಿದರೆ ಮಾತ್ರ, ಯೋಜನೆ ಸಕ್ಸಸ್ ಆಗಲಿದೆ. ಇದರಲ್ಲಿ ಎರಡು ಮಾತಿಲ್ಲ, ಬಹುತೇಕ ಎಲ್ಲಾ ತಜ್ಞರ ಅಭಿಪ್ರಾಯವೂ ಇದಾಗಿದೆ. ಈಗಾಗಲೇ ಆರಂಭಿಕ ಹೆಜ್ಜೆಯನ್ನು, ರಾಜ್ಯ ಸರ್ಕಾರ ಇಟ್ಟಿದೆ.

ಜಲಜೀವನ್ ಮಿಷನ್ ಕಾರಿಡಾರ್  ಇದೊಂದು ವಿನೂತನ ಪರಿಕಲ್ಪನೆ, ಬೆಂಗಳೂರು ಸೇರಿದಂತೆ, ಸುಮಾರು 7 ಜಿಲ್ಲೆಗಳ ರಾಜ್ಯದ ಅರ್ಧ ಜನಸಂಖ್ಯೆಗೆ ನಗರಗಳಲ್ಲಿ,  24/7 ಯೋಜನೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ, ಮನೆಗೆ ನಿರಂತರವಾಗಿ ಗಂಗೆ ಹರಿಸಬೇಕಾದರೆ, ಕೈಗಾರಿಕಾ ಪ್ರದೇಶಗಳಿಗೆ, ಅಂತರ್ಜಲ ಅಭಿವೃದ್ಧಿಗಾಗಿ ಊರಿಗೊಂದು ಕೆರೆ ಕೆರೆಗೆ ನದಿ ನೀರು ಘೋಷಣೆ ಮೂಲಕ ಈ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸಲೇ ಬೇಕು.

  ಎತ್ತಿನಹೊಳೆ ಮತ್ತು ಭಧ್ರಾ ಮೇಲ್ದಂಡೆ ಕಾಲುವೆಗೆ, ಲಿಂಗನಮಕ್ಕಿ ಸೇರಿದಂತೆ, ಇತರೆ ನದಿ ಮೂಲಗಳ ನೀರನ್ನು ಸಂಪರ್ಕಿಸಲು ಹೊಸದಾಗಿ ಲಿಂಕ್ ಮಾಡುವ ಕಾಲುವೆಯೂ ಸೇರಿದಂತೆ ಜಲಜೀವನ್ ಮಿಷನ್ ಕಾರಿಡಾರ್  ಆಗಿ ಕೇಂದ್ರ ಸರ್ಕಾರ ಘೋಶಿಸಬೇಕು.

 ಕಾಲುವೆಯ ಅಕ್ಕ-ಪಕ್ಕ, ಮೂರು ಕಡೆ ಸುಮಾರು 150 ಟಿಎಂಸಿ ಅಡಿ ನೀರು ಸಂಗ್ರಹ ಮಾಡುವ ಸಾಮಾಥ್ರ್ಯದ ವಾಟರ್ ಬ್ಯಾಂಕ್ ನಿರ್ಮಾಣ ಮಾಡಬೇಕು. ಈ ಸ್ಥಳದ ಆಯ್ಕೆಯನ್ನು ಈಗಾಗಲೇ ರಾಜ್ಯ ಸರ್ಕಾರ ಗುರುತಿಸಿದೆ. ಒಳಗೊಳಗೆ ಬಹಳ ಕೆಲಸ ಆಗುತ್ತಿದೆ.  ಬಹಿರಂಗವಾಗಿ ಸಾಧಕ-ಬಾಧಕಗಳ ಬಗ್ಗೆ  ಚರ್ಚೆಯಾಗಲೇ ಬೇಕಿದೆ.

  ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರ ಕನಸಿನ ಯೋಜನೆ ಇದಾಗಬೇಕು. ಕೇಂದ್ರ ಸರ್ಕಾರ ಶೇ 60 ರಷ್ಟು ಹಣ ನೀಡಲೇ ಬೇಕು, ರಾಜ್ಯ ಸರ್ಕಾರ ಕೂಡಲೇ ಈ ಹೊಸ ಪ್ರಸ್ತಾವನೆ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಶಾಶ್ವತ ನದಿ ನೀರಿನ ಮೂಲವಿಲ್ಲದೆ, ಬೆಳದಿಂಗಳಿಗೆ ಬತ್ತುವ ಬೋರ್‍ವೆಲ್ ನಂಬಿ, ಹಾಕಿರುವ ಜಲಜೀವನ್ ಮಿಷನ್ ಕಾರಿಡಾರ್ ಪೈಪ್‍ಗಳು ತುಕ್ಕು ಹಿಡಿಯುವ ಮುನ್ನ, ಇರುವೆಗಳು ಗೂಡು ಕಟ್ಟುವ ಮುನ್ನ,  ಭವಿಷ್ಯದ ಕನಸು ಕಾಣಲೇ ಬೇಕು.

ಇಲ್ಲದೇ ಹೋದಲ್ಲಿ ಟೀಕಾಕಾರರ ಮಾತೇ ಸತ್ಯವಾದರೂ ಆಗಬಹುದು, ಇದು ವಾಸ್ತವಿಕ