16th September 2024
Share

TUMAKURU:SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು ರೀಸರ್ಚ್ ಫೌಂಡೇಷನ್ @ 2047 ಸ್ಥಾಪಿಸಿ, ಹಳ್ಳಿಯಿಂದ-ದಿಲ್ಲಿವರೆಗೆ ಏನೇನು ಮಾಡಬೇಕು, ಹೇಗೆ ಮಾಡಬೇಕು, ಯಾರ್ಯಾರು ಮಾಡಬೇಕು, ಒಂದೊಂದಕ್ಕೂ ಎಷ್ಟೆಷ್ಟ್ಟು ಹಣ ಖರ್ಚು ಬರಲಿದೆ. ಈ ಹಣದ ಮೂಲ ಯಾವುದು, ಎಂಬ ಬಗ್ಗೆ ಸಾಮಾನ್ಯ ಜನರಿಂದ ಹಿಡಿದು ಪ್ರಧಾನಿವರೆಗೆ ಅರ್ಥವಾಗುವ ರೀತಿಯಲ್ಲಿ ಒಂದು ಮಾರ್ಗಸೂಚಿ ಸಿದ್ದಪಡಿಸಲು ಆರಂಭಿಸಿದೆ.

ಇದು ಒಂದು ವಿನೂತನ’ ಪ್ರಯೋಗ, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಜೊತೆಗೆ, ವಿದ್ಯಾರ್ಥಿಗಳನ್ನು ದೇಶದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳುವುದು, ನಿರುದ್ಯೋಗವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವುದು, ಗ್ರಾಮೀಣ ರೈತರ ಉತ್ದನ್ನಗಳಿಗೆ ಮೌಲ್ಯವರ್ಧಿತ ಬೆಲೆ ದೊರುಕುವಂತೆ ಮಾಡುವುದು. ಸಮಾಜದ ಎಲ್ಲಾ ವರ್ಗದ ಅರ್ಹರಿಗೆ ಅಗತ್ಯಕ್ಕೆ ತಕ್ಕಂಥಹ ತರಬೇತಿ ನೀಡುವುದು ಪ್ರಮುಖ ಅಂಶವಾಗಿದೆ.

 ವಯಸ್ಸಿನ, ವಿದ್ಯಾರ್ಹತೆಯ ನಿರ್ಭಂದವಿಲ್ಲ, ಎಲ್ಲದಕ್ಕೂ ಹಣವೇ ಮುಖ್ಯ ಎಂದು ಸುಮ್ಮನೆ ಕುಳಿತುಕೊಳ್ಳುವ ಹಾಗಿಲ್ಲ. ಯಾವುದೇ ಕೆಲಸಕ್ಕೆ ಕೆಲಸಗಾರರಿಗೆ  ಬರವಿಲ್ಲದಂತೆ, ಎಲ್ಲಾ ವರ್ಗದ ಕೆಲಸಗಳನ್ನು ಸರ್ಕಾರಿ/ಅರೆ ಸರ್ಕಾರಿ ಕೆಲಸಗಳಾಗಿ ಪರಿವರ್ತಿಸವ ಮೂಲಕ, ಜನಜಾಗೃತಿ ಮೂಡಿಸುವಂತಹ ಕೆಲಸಗಳನ್ನು ಎಲ್ಲಾ ಧರ್ಮ, ಜಾತಿ, ಉಪಜಾತಿ ಸಂಘಟನೆಗಳ ಮೂಲಕ, ಧಾರ್ಮಿಕ ಪರಂಪರೆ-ಗುರು ಪರಂಪರೆಗಳ’ ಮೂಲಕ, ಸರ್ಕಾರ ರಚಿಸಿರುವ  ಆಯಾ ಜಾತಿವಾರು ನಿಗಮಗಳು ಕಾರ್ಯಪ್ರವೃತ್ತರಾಗ ಬೇಕಿದೆ. 

  ಕರ್ನಾಟಕ ರಾಜ್ಯ ‘ಧಾರ್ಮಿಕ ಪರಂಪರೆ-ಗುರು ಪರಂಪರೆಗಳ’ ಗೂಡಾಗಿದೆ, ಮೊದಲು ಅವರ ಕನಸುಗಳು ಏನು, ಸಮಾಜವನ್ನು ತಿದ್ದಲು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿಗೊಳಿಸಲು, ಅವರಿಗೆ ಏನು ಅವಶ್ಯಕತೆ ಇದೆ. ತುಮಕೂರು ಜಿಲ್ಲೆಯ ಸರ್ವಧರ್ಮಗಳ ಮ್ರಮುಖರ ಕನಸು, ಬೇಡಿಕೆ, ಇತಿಹಾಸ ಮತ್ತು ಡಾಟಾ ಬೇಸ್ ಮಾಡುವುದು ಅಗತ್ಯವಾಗಿದೆ.

ಇದರ ಸಂಶೋಧನೆಯೂ ಅಗತ್ಯವಾಗಿದೆ, ಈ ಬಗ್ಗೆ ಹೇಗೆ ಚಾಲನೆ ನೀಡಬೇಕು ಎಂಬ ಬಗ್ಗೆ , ದಿನಾಂಕ:03.09.2024 ರಂದು ಗುಬ್ಬಿ ತಾಲ್ಲೋಕು ಬೆಟ್ಟದಹಳ್ಳಿಯ ಗವಿಮಠದ ಶ್ರೀ, ಶ್ರೀ ಚಂದ್ರಶೇಖರ ಸ್ವಾಮೀಜಿಗಳೊಂದಿಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಲಾಯಿತು.

ನೂರಾರು ವರ್ಷಗಳಿಂದ ಗವಿಮಠದ ಭಕ್ತರಾಗಿರುವ, ಚಂದ್ರಹಳ್ಳಿ ವಂಶಸ್ಥರ ಸಹಭಾಗಿತ್ವÀ್ವದಲ್ಲಿ, ಶ್ರೀಗಳ 50 ನೇ ವರ್ಷದ ಸಮಾರಂಭದ ವೇಳೆಗೆ, ಶ್ರೀಗಳ ನೇತೃತ್ವದಲ್ಲಿ, ಅವರ ಮಾರ್ಗದರ್ಶನದಲ್ಲಿ  ಅಧ್ಯಯನ ಮತ್ತು ಸಂಶೋಧನಾ’ ವರದಿ ಸಿದ್ಧಪಡಿಸುವ ಅಭಿಲಾಷೆಯನ್ನು ಹೊರಹಾಕಿದ್ದಾರೆ,

ತುಮಕೂರು ಜಿಲ್ಲೆಯಲ್ಲಿ ಎಲ್ಲಾಧರ್ಮಗಳ ಸುಮಾರು 60 ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳಿವೆ, ಚಂದ್ರಹಳ್ಳಿ ವಂಶಸ್ಥರ ಕುಟುಂಬಗಳು 60 ಕ್ಕಿಂತ ಹೆಚ್ಚಿಗೆ ಇವೆ, ಒಂದೊಂದು ಕುಟುಂಬ, ಒಂದೊಂದು ಧಾರ್ಮಿಕ ಕ್ಷೇತ್ರಗಳ ಮಾಹಿತಿ ಸಂಗ್ರಹಿಸುವ ಮೂಲಕ ಚಾಲನೆ ನೀಡಲು ಚಿಂತನೆ ಆರಂಭವಾಗಿದೆ.

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ, ತುಮಕೂರು ರೀಸರ್ಚ್ ಫೌಂಡೇಷನ್ @ 2047’ ರ ಜೊತೆ ಎಂ.ಓ.ಯು ಮಾಡಿಕೊಂಡು, ವರದಿ ಸಿದ್ಧಪಡಿಸಿ, ‘ನಾಲೇಡ್ಜ್ ಬ್ಯಾಂಕ್ @ 2047’ ಗೆ, ನೀಡುವ ಆಲೋಚನೆ ಇದೆ.

ಹಾಲಿ ಈ ಬಗ್ಗೆ ಅಧ್ಯಯನ ಮಾಡಿರುವ ಜ್ಞಾನಿಗಳ ಮಾಹಿತಿ ಮತ್ತು ವರದಿ ಸಂಗ್ರಹಿಸುವುದು ಅಗತ್ಯವಾಗಿದೆ. ಜ್ಞಾನದಾನಿಗಳು ಸಹಕರಿಸಲು ಮನವಿ.