8th January 2025 2:11:00 PM
Share

TUMAKURU: SHAKTHIPEETA FOUNDATION

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ತುಮಕೂರು ವಿಶ್ವ ವಿದ್ಯಾನಿಲಯದ

ತುಮಕೂರು ರೀಸರ್ಚ್ ಫೌಂಡೇಷನ್ @ 2047 ಸಹಭಾಗಿತ್ವದಲ್ಲಿ,

ತುಮಕೂರು ರೀಸರ್ಚ್ ಫೌಂಡೇಷನ್ @ 2047 ಪ್ರಥಮ ವಾರ್ಷಿಕೋತ್ಸವ ಸಂದರ್ಭದಲ್ಲಿ ನಡೆಸುವ

ರಾಜ್ಯ ಮಟ್ಟದ ಸಮಾವೇಶ ಮತ್ತು ತುಮಕೂರು ಜಿಲ್ಲೆ ಫೈಲಟ್ ಯೋಜನೆ ಪ್ರಸ್ತಾವನೆ ಬಗ್ಗೆ.

ಎಲ್ಲಾ ಸಂಶೋಧನಾ ವರದಿಗಳು ಒಂದೇ ರೂಪ್ ಅಡಿಯಲ್ಲಿ’ ಘೋಷಣೆಯೊಂದಿಗೆ

2024 ರಿಂದ 2047 ರವರೆಗಿನ 23 ವರ್ಷಗಳ ಅವಧಿಯಲ್ಲಿ 23 ಅಂಶಗಳ ಅನುಷ್ಠಾನಕ್ಕಾಗಿ ರಾಜ್ಯದ ಪರಿಣಿತ ತಜ್ಞರೊಂದಿಗೆ ಸಮಾಲೋಚನೆ ನಡೆಸುವ ಅಂಶಗಳು.

1.            ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ, ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ನಿಗಧಿ ಪಡಿಸಿರುವ ರೂ ಒಂದು ಲಕ್ಷ ಕೋಟಿ’ ಅನುದಾನದಲ್ಲಿ ಸಿಂಹ ಪಾಲು ಪಡೆಯಲು ಶ್ರಮಿಸುವುದು.

2.            ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ, ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖಾವಾರು 0.1% ರಿಂದ 0.7% ರವರೆಗಿನ ಹಣವನ್ನು ಆರ್ ಅಂಡ್ ಡಿ ಸೆಲ್’ ಗೆ ನಿಗಧಿ ಪಡಿಸಲು ಮನವೊಲಿಸುವುದು.

3.            ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮಗಳು, ಕಾರ್ಪೋರೇಷನ್, ಪ್ರಾಧಿಕಾರಗಳು, ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿ, ಮೆಡಿಕಲ್,  ಇಂಜಿನಿಯರಿಂಗ್ ಮತ್ತು ಕಾಲೇಜುಗಳಲ್ಲಿ, ಸ್ಥಳೀಯ ಸಂಸ್ಥೆಗಳಲ್ಲಿ  ಆರ್ ಅಂಡ್ ಡಿ ಸೆಲ್’ ಸ್ಥಾಪಿಸಲು ನಿರಂತರವಾಗಿ ಶ್ರಮಿಸುವುದು.

4.            ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ, 1947 ರಿಂದ ಇಲ್ಲಿಯವರೆಗೂ ಕೈಗೊಂಡಿರುವ ಎಲ್ಲಾ ಇಲಾಖಾವಾರು, ಸಂಸ್ಥೆಗಳವಾರು,  ಆರ್ ಅಂಡ್ ಡಿ’ ಮಾಹಿತಿಗಳನ್ನು ಸಂಗ್ರಹಿಸಲು ಡಿಜಿಟಲ್ ಪ್ಲಾಟ್ ಪ್ಲಾಟ್ ಫಾರಂ, ಫಿಸಿಕಲ್ ಲೈಬ್ರರಿ ಮತ್ತು ನಾಲೇಡ್ಜ್ ಬ್ಯಾಂಕ್ @ 2047 ಸ್ಥಾಪಿಸಿ, ಪರಿಣಿತ ತಜ್ಞರ  ಮೂಲಕ    ಮೌಲ್ಯಮಾಪನ ‘ ಮಾಡುವುದು.

5.            ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ, ಸುಮಾರು 100 ಎಕರೆ ಜಮೀನಿನನಲ್ಲಿ ಸುಮಾರು 500 ರಿಂದ 1000 ಕೋಟಿ ವೆಚ್ಚದಲ್ಲಿ, ಅಂತರರಾಷ್ಟ್ರೀಯ ಮಟ್ಟದ ಸುಸಜ್ದಿತವಾದ ಹೈಟೆಕ್ ತುಮಕೂರು ರೀಸರ್ಚ್ ಫೌಂಡೇಷನ್ @ 2047 ಕ್ಯಾಂಪಸ್’ ಸ್ಥಾಪನೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ 63 ಇಲಾಖೆಗಳ ಅಡಿಯಲ್ಲಿ 1947 ರಿಂದ 2047 ರವರೆಗಿನ, ಎಲ್ಲಾ ಸಂಶೋಧನೆ ಮತ್ತು ಅಭಿವೃದ್ಧಿ ಮಾಹಿತಿಗಳ ಫಿಸಿಕಲ್, ಡಿಜಿಟಲ್ ಮತ್ತು ಯೂಟ್ಯೂಬ್ ಮಾದರಿಯಲ್ಲಿ ಸಂಗ್ರಹಿಸುವುದು, ಮಾನಿಟರಿಂಗ್, ತರಭೇತಿ, ಸರ್ಕಾರಗಳ ಹಂತದಲ್ಲಿ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ, ಸರ್ಕಾರಗಳಿಂದ ಟ್ರಂಕಿ ಬೇಸಿಸ್ ಅನುದಾನ ಮಂಜೂರಾತಿಗೆ ಶ್ರಮಿಸುವುದು.

6.            ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ, ತುಮಕೂರು ನಗರದ ಶಕ್ತಿಭವನದಲ್ಲಿ  ಅಂತರರಾಷ್ಟ್ರೀಯ ಮಟ್ಟದ ರೀಸರ್ಚ್ ಫೌಂಡೇಷನ್ ‘ಮಾನಿಟರಿಂಗ್ ಸೆಲ್ ಮತ್ತು ನಾಲೇಡ್ಜ್ ಬ್ಯಾಂಕ್ @ 2047’ ಸ್ಥಾಪಿಸುವುದು.

7.            2047 ರ ವೇಳೆಗೆ ಕರ್ನಾಟಕ ರಾಜ್ಯ ನಂಬರ್ ಆಗಲು, ಆಯಾ ಊರಿನ/ಬಡಾವಣೆಯ, ಆಯಾ ಚುನಾಯಿತ ಜನಪ್ರತಿನಿಧಿಗಳ, ಅಧಿಕಾರಿಗಳ ಕ್ಷೇತ್ರದ ವ್ಯಾಪ್ತಿಯ ಪರಿಕಲ್ಪನೆಗಾಗಿ ದೇಣಿಗೆ ನೀಡಲು, ಎನ್.ಆರ್.ಐ ಗಳಿಗೆ ಡಿಜಿಟಲ್ ಪ್ಲಾಟ್ ಫಾರಂ ಸಿದ್ಧಪಡಿಸಲು, ಎನ್.ಆರ್.ಫೋರಂ ಕರ್ನಾಟಕ’ ಜೊತೆ ಶ್ರಮಿಸುವುದು. ಗ್ರಾಮ/ಬಡಾವಣೆಯ ಮಟ್ಟದಲ್ಲಿ ಸಂಶೋಧನೆ ಮಾಡಿದ ಹಾಗೂ ಅಗತ್ಯವಿರುವ ಮೌಲ್ಯವರ್ಧಿತ ಉತ್ಪನ್ನಗಳನ್ನು ಎಂ.ಪಿ.ಸಿ.ಎಸ್ ಮಾದರಿಯಲ್ಲಿ ಸಂಗ್ರಹಿಸಿ, ಎಲ್ಲಾ ದೇಶ ವಿದೇಶಗಳಿಗೆ ಎಕ್ಸ್‍ಪೋರ್ಟ್’  ಮಾಡಲು ಎನ್.ಆರ್.ಐ ಫೋರಂ ಕರ್ನಾಟಕ ನೇತೃತ್ವದಲ್ಲಿ  ಎಲ್ಲಾ ದೇಶಗಳ ಅನಿವಾಸಿ ಭಾರಿತೀಯರ ಅಸೋಶಿಯೇಷನ್‍ಗಳೊಂದಿಗೆ’ ಸಮಾಲೋಚನೆ ನಡೆಸುವುದು.  

8.            ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ, ಭಾರತ ದೇಶದ ಎಲ್ಲಾ ಸಂಶೋಧನೆಗಳನ್ನು ಗಮನಿಸಿಕೊಂಡು, ಅರ್ಹರಿಗೆ ಅಗತ್ಯವಿರುವ ಸಂಶೋಧನೆ ಮಾಡಲು, ಕರ್ನಾಟಕ ರೀಸರ್ಚ್ ಫೌಂಡೇಷನ್  ಮತ್ತು ನ್ಯಾಷನಲ್ ರೀಸರ್ಚ್ ಫೌಂಡೇಷನ್ ವತಿಯಿಂದ ಅನುದಾನ’ ದೊರಕಿಸಲು ಶ್ರಮಿಸುವುದು.

9.            ಉದ್ದೇಶಿತ 555 ಅಧ್ಯಯನ ಪೀಠಗಳನ್ನು, ತಲಾ ರೂ 5 ಕೋಟಿ ವೆಚ್ಚದಲ್ಲಿ’ ಪ್ರಮುಖರ ಮತ್ತು ರಾಜ್ಯದ ಲೋಕಸಭಾ ಸದಸ್ಯರ/ರಾಜ್ಯಸಭಾ ಸದಸ್ಯರ/ ವಿಧಾನ ಸಭಾ ಸದಸ್ಯರ/ವಿಧಾನ ಪರಿಷತ್ ಸದಸ್ಯರ/ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ/ ಜಿಲ್ಲಾಧಿಕಾರಿಗಳ/ಜಿಲ್ಲಾ ಪಂಚಾಯತ್ ಸಿ.ಇ.ಓ ರವರ ನೇತೃತ್ವದಲ್ಲಿಯೂ ಅವರ ವ್ಯಾಪ್ತಿಯ ಯೋಜನೆಗಳ ನೇತೃತ್ವದಲ್ಲಿ ಅಧ್ಯಯನ ಪೀಠ ರಚಿಸಿಕೊಂಡು, ಒಂದು ಸುಸಜ್ಜಿತವಾದ ಹೈಟೆಕ್ ಕಟ್ಟಡ ನಿರ್ಮಾಣ’ ಮಾಡಿಕೊಂಡು, ಹುದ್ದೇ ಆಧಾರಿತ ಶಾಸಕರ ಅಧ್ಯಕ್ಷತೆಯಲ್ಲಿ, 1947 ರಿಂದ 2047 ರವರೆಗಿನ ಎಲ್ಲಾ ಮಾಹಿತಿಗಳ ಒಳಗೊಂಡ ಮ್ಯೂಸಿಯಂ ನಂತಿರ ಬೇಕು. ಪ್ರತಿಯೊಂದು ಗ್ರಾಮ/ಬಡಾವಣೆ ಪ್ರತಿನಿಧಿಗಳ ಸಮಿತಿ ಇದಾಗಿರಬೇಕು. ಎಲ್ಲ ಹಂತದ ಚುನಾಯಿತ ಜನಪ್ರತಿನಿಧಿಗಳು ಏನೇನು ಮಾಡಲು ಶ್ರಮಿಸಲಾಗಿದೆ ಎಂಬ ಬಗ್ಗೆ ಡಿಜಿಟಲ್ ಮಾಹಿತಿ ಅಪ್ ಡೇಟ್ ಮಾಡಬೇಕು.

10.         ದೆಹಲಿಯಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಮತ್ತು ದೆಹಲಿ ಪ್ರತಿನಿಧಿಗಳಿಗೆ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅನೂಕೂಲವಾಗುವಂತೆ, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ಅನುದಾನದಲ್ಲಿ  ಸುಮಾರು ರೂ 15 ಕೋಟಿ ವೆಚ್ಚದಲ್ಲಿ, ಅಭಿವೃದ್ಧಿ  ಮ್ಯಾಸಿಯಂ @ 2047 ’ ಸ್ಥಾಪಿಸುವುದು.

11.         ಬೆಂಗಳೂರಿನಲ್ಲಿ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅನೂಕೂಲವಾಗುವಂತೆ, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ಅನುದಾನದಲ್ಲಿ  ಸುಮಾರು ರೂ 15 ಕೋಟಿ ವೆಚ್ಚದಲ್ಲಿ, ಅಭಿವೃದ್ಧಿ  ಮ್ಯಾಸಿಯಂ @ 2047’ ಸ್ಥಾಪಿಸುವುದು.

ತುಮಕೂರು ಜಿಲ್ಲೆ ಫೈಲಟ್ ಯೋಜನೆ ಕೈಗೊಳ್ಳಲು ಉದ್ದೇಶಿರುವ ಅಂಶಗಳು. ನಂತರ ರಾಜ್ಯ ಮಟ್ಟಕ್ಕೆ ವಿಸ್ತರಣೆ ಮಾಡಲಾಗುವುದು. ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ವರದಿಯ ಎಲ್ಲಾ ಅಂಶಗಳ ಜಾರಿಗೆ ಶ್ರಮಿಸುವುದು.

12.         ತುಮಕೂರು ಜಿಲ್ಲೆಯ ಗ್ರಾಮವಾರು/ಬಡಾವಣೆವಾರು ನೋಡೆಲ್ ಆಫೀಸರ್ @ 2047’ ನೇಮಕ ಮಾಡುವುದು (ಶಿಕ್ಷಕರು/ಉಪನ್ಯಾಸಕರು ಅಥವಾ ವಿಶ್ವ ವಿದ್ಯಾನಿಲಯದ ನೌಕರ/ ಯಾವುದೇ ಅಧಿಕಾರಿ) ಇವರಿಗೆ ಸರ್ಕಾರದ ಹಂತದಲ್ಲಿ ಯುಜಿಸಿ’ ಸೇರಿದಂತೆ, ದೊರೆಯುವ ಎಲ್ಲಾ ವಿಧವಾದ ಸವಲತ್ತು ನೀಡಿ ಗೌರವಿಸಲಾಗುವುದು. ಇವರು 2047 ರವರೆಗೆ ನಿರಂತರವಾಗಿ ಅದೇ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ರೂಪುರೇಷೆ ಸಿದ್ಧಪಡಿಸುವುದು.

13.         ತುಮಕೂರು ಜಿಲ್ಲೆಯ ಗ್ರಾಮವಾರು/ಬಡಾವಣೆವಾರು ಇರುವ ವಿದ್ಯಾರ್ಥಿಗಳ ಪಟ್ಟಿ ಮಾಡುವುದು, ಅವರು ಎಲ್ಲಿ, ಏನೇ ಓದುತ್ತಿರಲಿ ಅವರು ಆಯಾ ಊರಿನ/ಬಡಾವಣೆಯ ರೀಸರ್ಚ್ ಫೌಂಡೇಷನ್ @ 2047 ಪ್ರತಿನಿದಿ’ ಗಳಾಗಿರುತ್ತಾರೆ.ಅವರ ಇಂಟರ್ನ್ ಶಿಪ್, ಪ್ರಾಜೆಕ್ಟ್ ವರ್ಕ್, ಆಕ್ಟಿವಿಟಿ ಪಾಯಿಂಟ್ಸ್ ಮತ್ತು ಪಿ.ಹೆಚ್.ಡಿ ವರ್ಕ್‍ಗೆ ಪರಿಗಣಿಸಲು ಶಿಕ್ಷಣ ಇಲಾಖೆ ಮಾರ್ಗದರ್ಶಿಸೂತ್ರ ಸಿದ್ಧಪಡಿಸಲು ಶ್ರಮಿಸುವುದು. ವಿದ್ಯಾರ್ಥಿಗಳ ಪಟ್ಟಿಯಲ್ಲಿ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ರಚಿಸಿರುವ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್, ಎನ್,ಎಸ್.ಎಸ್, ಸ್ಕೌಟ್ ಅಂಡ್ ಗೈಡ್, ಎನ್,ಎನ್,ಸಿ.ಸಿ, ಸೈನ್ಸ್ ಕ್ಲಬ್, ಯುವ ಕ್ಲಬ್, ರೆಡ್ ಕ್ರಾಸ್ ಕ್ಲಬ್’ ಹೀಗೆ (ಪ್ರವಾಸೋಧ್ಯಮ, ಶಿಕ್ಷಣ, ಕ್ರೀಡಾ) ಎಲ್ಲಾ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಸೇವೆ ಬಳಸಿಕೊಳ್ಳುವುದು. ಜನಜಾಗೃತಿ ಮೂಡಿಸಲು ಎಲ್ಲಾ ಧರ್ಮ, ಜಾತಿ/ಉಪಜಾತಿಗಳ ಗುರುಪರಂಪರೆ ಮತ್ತು ಧಾರ್ಮಿಕ ಪರಂಪರೆ’ ಪ್ರಮುಖರಿಗೆ ಹೊಣೆಗಾರಿಕೆ ನೀಡಲು ಮಾರ್ಗದರ್ಶಿ ಸೂತ್ರ ಸಿದ್ದಪಡಿಸಲು ಶ್ರಮಿಸುವುದು.

14.         ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ, ಆಯಾ ಗ್ರಾಮಪಂಚಾಯಿತಿಯ ಅಥವಾ ನಗರ ಸ್ಥಳೀಯ ಸಂಸ್ಥೆಗ¼ಲ್ಲಿ ರಚಿಸಿರುವ, ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ಯ (ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತ ಪೌರಾಡಳಿತ, ನಗರಾಭಿವೃದ್ಧಿ ಇಲಾಖೆ) ಸಹಭಾಗಿತ್ವದಲ್ಲಿ ಹಾಲಿ ಇರುವ ನಿಯಾಮುನುಸಾರ, ಆಯಾ ವ್ಯಾಪ್ತಿಯ ನಾಲೇಡ್ಜ್‍ಬಲ್ ಪರ್ಸನ್ ಪಟ್ಟಿ ಮಾಡುವುದು.ಅವರ ಗುಂಪುನ್ನು ನಾಲೇಡ್ಜ್ ಬ್ಯಾಂಕ್ @ 2047’ ಎಂದು ನಾಮಕರಣ ಮಾಡಿ, ಪದಾಧಿಕಾರಿಗಳ ಆಯ್ಕೆ ಮಾಡುವುದು. ಇದೇ ಸಮಿತಿ ಆಯಾ ಪ್ರದೇಶದ ‘—- ರೀಸರ್ಚ್ ಫೌಂಡೇಷನ್ @ 2047’. ಆಗಿಯೂ ಕಾರ್ಯನಿರ್ವಹಿಸಲಿದೆ.

15.         ಈಗಾಗಲೇ ಸರ್ಕಾರ ಸ್ಥಾಪಿಸಲು ಉದ್ದೇಶಿರುವ ಊರಿಗೊಂದು ಪವಿತ್ರವನ ಮಾದರಿ’ ಯಲ್ಲಿ ಗ್ರಾಮ/ಬಡಾವಣೆಗಳಲ್ಲಿ ಸ್ಥಳ ಗುರುತಿಸಿ, ಆಯಾ  ಗ್ರಾಮ/ಬಡಾವಣೆಗಳಲ್ಲಿನ ಥೀಮ್/ರೀಸರ್ಚ್ ಪಾರ್ಕ್ @ 2047’ ಎಂದು ನಾಮಫಲಕ ಹಾಕುವುದು. ನರೇಗ ಅನುದಾನದಲ್ಲಿ ಆವರಣ ಗೋಡೆ ಹಾಕುವುದು. ಗ್ರಾಮೀಣಾಭಿವೃದ್ಧಿ, ನಗರಾಡಳಿತ  ಮತ್ತು ಪೌರಾಡಳಿತ’ ಇಲಾಖೆಗಳ ಸಹಭಾಗಿತ್ವದಲ್ಲಿ  ಅನುದಾನ ಬಂದಾಗ ಪೂರ್ಣಗೊಳಿಸುವುದು.

16.         ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ಟೆಂಪ್ಲೇಟ್’ ಪ್ರಕಾರ ವಿದ್ಯಾರ್ಥಿಗಳು ಅಫ್‍ಡೇಟ್ ಮಾಡುತ್ತಿರುವುದು, ಆ ಡಾಟಾ ಸರ್ಕಾರ ಸೂಚಿಸುವ ವೆಬ್‍ಸೆಟ್ ನಲ್ಲಿ ಸಂಗ್ರಹ ಮಾಡುವುದು. ಎಲ್ಲಾ ಇಲಾಖೆಗಳಿಗೆ ಅಗತ್ಯವಿರುವ ಡಾಡಾ ಗಳನ್ನು ಟೆಂಪ್ಲೇಟ್‍ನಲ್ಲಿ ಸೇರ್ಪಡೆ ಮಾಡುವುದು. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್’ ನಲ್ಲಿ ಒಂದು ರಾಜ್ಯ – ಒಂದು ನಕ್ಷೆ- ಒಂದೇ ಡಾಟಾ’ ಸಂಗ್ರಹಿಸಲು ಮಾರ್ಗಸೂಚಿ ಸಿದ್ಧಪಡಿಸುವುದು. ಹಾಲಿ ಸರ್ಕಾರಗಳ ಬಳಿ ಇರುವ ಎಲ್ಲಾ ಇಲಾಖೆಗಳ ಡಾಟಾಗಳನ್ನು ಸಹ ಟೆಂಪ್ಲೇಟ್‍ನಲ್ಲಿ ಅಪ್ ಡೇಟ್’ ಮಾಡುವುದು. ಇದು 2047 ರವರೆಗೆ ನಿರಂತರವಾಗಿ ನಡೆಯಲಿದೆ.

17.         ಊರಿಗೊಬ್ಬ/ಬಡಾವಣೆಗೊಬ್ಬ ಡಾಟಾ ಮಿತ್ರ’ ನೇಮಕ ಮಾಡುವುದು, ಅವರು ಎಲ್ಲಾ ಮಾಹಿತಿಗಳನ್ನು ಸೇವಾ ಶುಲ್ಕ ಆಧಾರದಲ್ಲಿ, ಪ್ರತಿಯೊಂದು ಇಲಾಖಾ ಅಧಿಕಾರಿಗಳ ಅನುಮೋದನೆಯೊಂದಿಗೆ ಖಾತರಿ ಪಡಿಸಿಕೊಳ್ಳುವುದು, ಅರಣ್ಯ ಇಲಾಖೆಯಡಿಯಲ್ಲಿನ ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯ ಸದಸ್ಯ ಕಾರ್ಯದರ್ಶಿ/ಪಿಡಿಓ/ಚೀಪ್‍ಆಫೀಸರ್/ಕಮಿಷನರ್’ ಅನುಮೋದನೆ ಮಾಡಲು ಮತ್ತು ಡಾಟಾ ಮಿತ್ರರಿಗೆ ತರಬೇತಿ ನೀಡಲು ಸ್ಕಿಲ್ ಇಲಾಖೆಯೊಂದಿಗೆ’  ಮಾರ್ಗಸೂಚಿ ಸಿದ್ಧಪಡಿಸುವುದು.

18.         ಪ್ರತಿಯೊಬ್ಬ ವ್ಯಕ್ತಿಯ ಕನಸುಗ¼ ಮಾಹಿತಿ ಸಂಗ್ರಹಿಸಿ ‘— ವ್ಯಕ್ತಿ @ 2047’ ಮಾಹಿತಿ ಸಂಗ್ರಹಿಸುವುದು.

19.         ಪ್ರತಿಯೊಂದು ಕುಟುಂದ ಕನಸುಗಳ ಮಾಹಿತಿ ಸಂಗ್ರಹಿಸಿ ‘— ಕುಟುಂಬ @ 2047’ ಮಾಹಿತಿ ಸಂಗ್ರಹಿಸುವುದು.

20.         ಪ್ರತಿಯೊಂದು ಸರ್ವೆನಂಬರ್ ವಾರು ಮಾಲೀಕರ ಕನಸುಗಳ ಮಾಹಿತಿ ಸಂಗ್ರಹಿಸಿ ‘— ಸರ್ವೆನಂಬರ್ @ 2047’ ಮಾಹಿತಿ ಸಂಗ್ರಹಿಸುವುದು.

21.         ಪ್ರತಿಯೊಂದು ಇಲಾಖಾವಾರು ಜನಸಂಖ್ಯೆ ಆಧಾರಿತ’ ಯೋಜನೆಗಳ ಸ್ಥಳ ಗುರುತಿಸಿ, ನಾಮಫಲಕ’ ಹಾಕುವುದು.

22.         ಪ್ರತಿಯೊಂದು ಇಲಾಖಾವಾರು ವ್ಯಾಪ್ತಿ  ಆಧಾರಿತ’ ಯೋಜನೆಗಳ ಸ್ಥಳ ಗುರುತಿಸಿ, ನಾಮಫಲಕ’ ಹಾಕುವುದು.

23.         ಪ್ರತಿಯೊಂದು ಇಲಾಖಾವಾರು ಅಭಿವೃದ್ಧಿ ಯೋಜನೆಗಳ ಸೀನಿಯಾರಿಟಿ ಪಟ್ಟಿ ಮಾಡಿ, ಆಧ್ಯತೆ ಮತ್ತು ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ‘2047 ವೇಳೆಗೆ 0%’ ತರಲು, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ನಿರಂತರವಾಗಿ ಶ್ರಮಿಸಲು ಚುನಾಯಿತ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿ, ಟೆಂಪ್ಲೇಟ್ ಸಿದ್ಧಪಡಿಸಿ, RANKING  ನೀಡಲು ಯೋಜನೆ ಇಲಾಖೆಯ ಸಹಭಾಗಿತ್ವದಲ್ಲಿ  ರಾಜ್ಯ ಮಟ್ಟದ ದಿಶಾ ಮಾನಿಟರಿಂಗ್ ಸೆಲ್’ ಸ್ಥಾಪಿಸಿ ಶ್ರಮಿಸುವುದು. 

 ನಮ್ಮ ಅನುಭವದ ಪರಿಕಲ್ಪನೆ – ತಮ್ಮ ಅಮೂಲ್ಯವಾದ ಸಲಹೆಗಳಿಗಾಗಿ

                           –ಕೆ.ಆರ್.ಸೋಹನ್ ಮತ್ತು ಕುಂದರನಹಳ್ಳಿ ರಮೇಶ್