21st November 2024
Share

TUMAKURU:SHAKTHIPEETA FOUNDATION

ನಮ್ಮ ಊರಿನÀ/ಬಡಾವಣೆಗಳ ಅಭಿವೃದ್ಧಿಗಾಗಿ ಕೆಳಕಂಡ 5 ಅಂಶಗಳನ್ನು ಜಾರಿಗೆ ತರಲು ನಾವು ಸಹಕಾರ ಮಾಡುತ್ತೇವೆ. ನಮಗೆ ಅಗತ್ಯವಿರುವ,  ಕೆಳಕಂಡ 4 ಅಂಶಗಳ ಜಾರಿಗೆ ಸರ್ಕಾರ  ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಮೊದಲು ತನ್ನಿ.  

  ಅನಿವಾಸಿ ಭಾರತೀಯರಿಗೆ ಅಗತ್ಯವಿರುವ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ, ವಿವಿಧ ದೇಶಗಳ ಹಲವಾರು ಬೇಡಿಕೆಗಳ ಬಗ್ಗೆ ಹಾಗೂ ಕೆಳಕಂಡ ಅಂಶಗಳ ಬಗ್ಗೆ ಎಲ್ಲಾ ಅನಿವಾಸಿ ಸದಸ್ಯರ ಅಭಿಪ್ರಾಯ ಪಡೆದು, ಕಿರು ಚಿತ್ರ ಮತ್ತು ಅಧ್ಯಯನ ವರದಿ ಯನ್ನು ಹೊರತರಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳುವುದು ಸೂಕ್ತವಾಗಿದೆ, ತುಮಕೂರು ರೀಸರ್ಚ್ ಫೌಂಡೇಷನ್ @ 2047 ಶ್ರಮಿಸ ಬಹುದು.

ಈಗಾಗಲೇ ವಿವಿಧ ರಾಜ್ಯ ಸರ್ಕಾರಗಳು ಸ್ಥಾಪಿಸಿರುವ ಮಾದರಿಯಲ್ಲಿ, ಕರ್ನಾಟಕ ಸರ್ಕಾರ ಅನಿವಾಸಿ ಸಚಿವಾಲಯ ವನ್ನು ಸ್ಥಾಪಿಸುವ ಅಗತ್ಯವಿದೆ. ಬಹಳ ದಿನಗಳಿಂದ ನಿರಂತರವಾಗಿ  ಹಲವರು ಶ್ರಮಿಸುತ್ತಿದ್ದಾರೆ. ಈ ಬಗ್ಗೆ ಒಂದು ಅಂತಿಮ ನಿರ್ಧಾರಕ್ಕೆ ಬರಲು ಸರ್ಕಾರದ ಜೊತೆ ಸಮಾಲೋಚನೆ ನಡೆಸಬೇಕಿದೆ. ಎಂದು ಅನಿವಾಸಿಗಳು ಮತ್ತು ಅವರ ಪೋಷಕರು, ಸಲಹೆ ನೀಡಿದ್ದಾರೆ. ಎನ್.ಆರ್.ಐ ಫೋರಂ ಕರ್ನಾಟಕ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ, ಈ ಬಗ್ಗೆ ವಿಶೇಷ ಆಧ್ಯತೆ ನೀಡಲಾಗುವುದು.

ನಮಗೂ ನೆರವಿನ ಅಗತ್ಯವಿದೆ.

1.      ರಾಜ್ಯ ಮಟ್ಟದ ಬಹುಪಯೋಗಿ ಎನ್.ಆರ್. ಭವನ/ ಕ್ಯಾಂಪಸ್ ನಿರ್ಮಾಣ ಮಾಡುವುದು.

2.      ಕರ್ನಾಟಕದಲ್ಲಿರುವ ನಮ್ಮ ‘ಪೋಷಕರ ಆಸ್ತಿಗಳ ಸಂರಕ್ಷಣೆಗೆ ಡಿಜಿಟಲ್ ಪ್ಲಾಟ್ ಫಾರಂ ಮಾಡುವುದು.

3.      ಕರ್ನಾಟಕದಲ್ಲಿರುವ ನಮ್ಮ ಪೋಷಕರ ಆರೋಗ್ಯ ಸುಧಾರಣೆಗೆ ಡಿಜಿಟಲ್ ಪ್ಲಾಟ್ ಫಾರಂ ಮಾಡುವುದು.

4.      ನಮಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ನಮ್ಮೂರಿನಿಂದ ನಮಗೆ ನೇರವಾಗಿ ಸರಬರಾಜು ಮಾಡಲು ಹಾಗೂ ವಿದೇಶಗಳಲ್ಲಿ ಅಗತ್ಯವಿರುವ ಕಡೆ ಅನಿವಾಸಿಗಳ ಅಸೋಶಿಯೇಷನ್ ಮೂಲಕ ‘ಕರ್ನಾಟಕ ಉತ್ಪನ್ನಗಳ ಮಾಲ್ ಸ್ಥಾಪಿಸುವುದು.  

ನಾವೂ ಕೈಜೋಡಿಸುತ್ತೇವೆ.

1.      ನಮ್ಮ ಗ್ರಾಮದ/ಬಡಾವಣೆಯ ವಿದ್ಯಾರ್ಥಿಗಳಿಗೆ ನೀಡ್ ಬೇಸ್ಡ್ ದೇಣಿಗೆ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತೇವೆ.

2.      ನಮ್ಮ ಊರಿನ ಜಲಸಂಗ್ರಹಾಗಾರಗಳ ದತ್ತು ಪಡೆದು, ಅದರ ಸುತ್ತಲೂ ಮರಗಿಡಬೆಳೆಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತೇವೆ.

3.      ನಮ್ಮ ಊರಿನÀ/ಬಡಾವಣೆಗಳ ಎಲ್ಲಾ ವಿದ್ಯಾರ್ಥಿಗಳನ್ನು ಸೇರಿಸಿ, ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್  ರಚಿಸಿ, ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ಸಿದ್ಧಪಡಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತೇವೆ.

4.      ಪವಿತ್ರವನ ಮಾದರಿಯಲ್ಲಿ ಊರಿಗೊಂದು/ಬಡಾವಣೆಗೊಂದು ಥೀಮ್ ಪಾರ್ಕ್ ನಿರ್ಮಾಣ ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತೇವೆ.

5.      ನಮ್ಮ ಊರಿನÀ/ಬಡಾವಣೆಗಳ ಎಲ್ಲಾ ನಾಲೇಡ್ಜ್‍ಬಲ್ ಪರ್ಸನಲ್‍ಗಳನ್ನು ಸೇರಿಸಿ ನಾಲೇಡ್ಜ್ ಬ್ಯಾಂಕ್ @ 2047 ಸ್ಥಾಪಿಸಲು ಮತ್ತು 2047 ರ ವೇಳೆಗೆ ನಮ್ಮ ಕರ್ನಾಟಕ ರಾಜ್ಯ ನಂಬರ್ ಒನ್ ಆಗಲು ಶ್ರಮಿಸಲು, ಉದ್ದೇಶಿತ 555 ಅಧ್ಯಯನ ಪೀಠ ಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುತ್ತೇವೆ.