21st November 2024
Share

TUMAKURU:SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಆರಂಭಿಸಿರುವ ತುಮಕೂರು ರೀಸರ್ಚ್ ಫೌಂಡೇಷನ್ @ 2047 ನಲ್ಲಿ ಒಬ್ಬ ಹಳ್ಳಿಗಮಾರ ನಿಂದ ಆರಂಭಿಸಿ, ರಾಜ್ಯದ ಮುಖ್ಯ ಕಾರ್ಯದರ್ಶಿವರೆಗೂ ಅವರ ಆಸಕ್ತ ಯಾವುದೇ ವಿಷಯದಲ್ಲಿ ಸಂಶೋಧನೆ ಮಾಡಲು  ಸುವರ್ಣ ಅವಕಾಶ ಕಲ್ಪಿಸಲು ಯೋಚಿಸಲಾಗಿದೆ.

ಐಎಎಸ್ ಪದವಿಯಿಂದ ಹೆಬ್ಬೆಟ್ಟಿನ ವರಿಗೂ ಅವರ ಆಸಕ್ತ ಯಾವುದೇ ವಿಷಯದಲ್ಲಿ ಸಂಶೋಧನೆ ಮಾಡಲು  ಸುವರ್ಣ ಅವಕಾಶ ಕಲ್ಪಿಸಲು ಯೋಚಿಸಲಾಗಿದೆ.

ಗ್ರಾಮಪಂಚಾಯಿತಿ ಸದಸ್ಯರಿಂದ ಆರಂಭಿಸಿ ದೇಶದ ರಾಷ್ಟ್ರಪತಿವರೆಗೂ ಅವರ ಆಸಕ್ತ ಯಾವುದೇ ವಿಷಯದಲ್ಲಿ ಸಂಶೋಧನೆ ಮಾಡಲು  ಸುವರ್ಣ ಅವಕಾಶ ಕಲ್ಪಿಸಲು ಯೋಚಿಸಲಾಗಿದೆ.

ಯಾವುದೂ ಉಚಿತವಲ್ಲ, ಒಂದು ರೂಪಾಯಿ ಸಲಹಾ ಶುಲ್ಕ ಪಡೆದು ಅವರಿಗೆ ಒಂದು ದಿನದ ತರಭೇತಿ ನೀಡಲು ಅವಕಾಶ ನೀಡಲಾಗುವುದು. ಅರ್ಹ ಪರಿಣಿತರಿಗೆ ಸರ್ಕಾರದಿಂದ/ದಾನಿಗಳಿಂದ/ಸಿ.ಎಸ್.ಆರ್ ಫಂಡ್‍ನಿಂದ ಅಗತ್ಯವಿರುವ ಎಲ್ಲಾ ಅನುದಾನ/ಮೂಲಭೂತ ಸೌಕರ್ಯಗಳನ್ನು, ನಿಗದಿತ  ಸೇವಾಶುಲ್ಕ ಪಡೆದು ಒದಗಿಸಲಾಗುವುದು. ಎಲ್ಲವೂ ಅಕೌಂಟಬಿಲಿಟಿ ಯಾಗಿರಲಿದೆ.

ಸಂಶೋಧಕರಿಗೆ ಇದೊಂದು ವಿಶಿಷ್ಠ ವಿಶ್ವ ವಿದ್ಯಾನಿಲಯವಾಗಲಿದೆ. ಅನಿವಾಸಿ ಭಾರತೀಯರಿಗೂ/ಕನ್ನಡಿಗರಿಗೂ ವಿಶ್ವದ ಯಾವುದೇ ದೇಶದಲ್ಲಿ ಇದ್ದರೂ ಅವಕಾಶ ಕಲ್ಪಿಸಲಾಗುವುದು. ಅವರ ಜ್ಞಾನವನ್ನು ಅವರ ಹಳ್ಳಿ/ಬಡಾವಣೆಯಿಂದ ದೇಶದ ಅಭಿವೃದ್ಧಿವರೆಗೂ ಬಳಸಿಕೊಳ್ಳಲು ಸುವರ್ಣ ಅವಕಾಶ ಕಲ್ಪಿಸಲು ಯೋಚಿಸಲಾಗಿದೆ.

ಸರ್ಕಾರಕ್ಕೆ ಸಲ್ಲಿಸಿರುವ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಮಧ್ಯಂತರ ವರದಿ, ತುಮಕೂರು ರೀಸರ್ಚ್ ಫೌಂಡೇಷನ್ @ 2047 ಪರಿಕಲ್ಪನಾವರದಿ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಎಂ.ಓ.ಯು ಮತ್ತು ಇದೂವರೆಗೂ ನಾನು ಬರೆದಿರುವ ಅಭಿವೃದ್ಧಿ ಆಧಾರಿತ ಎಲ್ಲಾ ಪುಸ್ತಕಗಳಲ್ಲಿನ ಪ್ರತಿಯೊಂದು ಅಂಶಗಳು ಇದನ್ನೆ ಸಾರುತ್ತಿವೆ.

ಎಲ್ಲವಕ್ಕೂ ಮಾರ್ಗದರ್ಶಿ ಸೂತ್ರಗಳನ್ನು ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳಿಂದ ಮಾಡಿಸಿ, ರಾಜ್ಯದ ಮುಖ್ಯಮಂತ್ರಿಯವರ ಮೂಲಕ ದೇಶದ ಪ್ರಧಾನಿಯವರಿಗೆ ಸಲ್ಲಿಸಲಾಗುವುದು.

ಆಸಕ್ತರು ಕೈಜೋಡಿಸಬಹುದು.