19th September 2024
Share

TUMAKURU:SHAKTHIPEETA FOUNDATION

 ತೆಂಗು ಬೆಳೆಗಾರರ ಸಂಕಷ್ಟಕ್ಕೆ, ಮಾಜಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾಗಿದ್ದಾಗ, ದಿಶಾ ಸಮಿತಿ ಸದಸ್ಯನಾಗಿ, ನಾನೇ ಜಿಲ್ಲೆಯಲ್ಲಿ ಒಣಗಿರುವ ತೆಂಗಿನ ಮರಗಳ ಸಮೀಕ್ಷೆ ಮಾಡಿ, ಎಷ್ಟು ರೈತರ, ಎಷ್ಟು ಮರಗಳು, ಏಕೆ ಒಣಗಿವೆ ಎಂಬ ಅಧ್ಯಯನ ವರದಿ ಸಿದ್ಧಪಡಿಸಿ, ರಾಜ್ಯ ಸರ್ಕಾರದ ಮೂಲಕ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ  ಸಲ್ಲಿಸಿ, ರೈತರಿಗೆ ಪರಿಹಾರ ಮತ್ತು ಮುಂದಿನ ಕ್ರಮದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಸ್ವತಃ ತೆಂಗು ಬೆಳೆಗಾರನಾಗಿರುವ ನಾನು, ದಿನಾಂಕ:16.09.2024 ರಿಂದ ಎರಡು ದಿವಸಗಳ ಕಾಲ ನನ್ನ ತೋಟ ನೋಡಿದೆ. ನಂತರ ನಮ್ಮ ಕುಂದರನಹಳ್ಳಿ ಗ್ರಾಮದ À ಹಲವಾರು ರೈತರ ತೋಟ ಗಮನಿಸಿದೆ. ನಾನು ಬೆಳೆಸಿದ ತೋಟ ಹೀಗೆ ಒಣಗುತ್ತಿದೆಯಲ್ಲ, ಏನು ಮಾಡುವುದು ಎಂಬ ಗೊಂದಲದ ಜೊತೆಗೆ, ನನಗೆ ಕಣ್ಣೀರು ಬಂತು.

ದಿನಾಂಕ:19.09.2024 ರಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೆಶಕರಾದ ಶ್ರೀಮತಿ ಶಾರದಮ್ಮರವರನ್ನು ಭೇಟಿಯಾಗಿ ವರದಿ ಬಗ್ಗೆ ಸಮಾಲೋಚನೆ ನಡೆಸಲು ಭೇಟಿಯಾದೆ. ಅದೃಷ್ಟ ವಶಾತ್ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕರಾದ ಶ್ರೀ ವಿಶ್ವನಾಥ್ ರವರು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸುತ್ತಿದ್ದರು.

ಆ ಸಭೆಯ ವೇಳೆ ನಾನು ಒಳಗೆ ಹೋಗಲೇ ಬೇಕಾಯಿತು,  ನಂತರ ಹೊರಬಂದ ಜಂಟಿ ನಿರ್ದೆಶಕರು ಮತ್ತು ಉಪ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿದಾಗ, 15 ದಿನದೊಳಗೆ ಅಧ್ಯಯನ ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ, ಸೂಕ್ತ ನಿರ್ದೇಶನ ನೀಡಿದರು.

ತುಮಕೂರು ರೀಸರ್ಚ್ ಫೌಂಡೇಷನ್ @ 2047 ಗಂಭೀರವಾಗಿ ಪರಿಗಣಿಸಲಿದೆ.  ತುಮಕೂರು ಜಿಲ್ಲೆಯ ಎಲ್ಲಾ ಸಚಿವರು, ಸಂಸದರು, ಶಾಸಕರು ವಿಶೇಷ ಗಮನ ಹರಿಸಿ ರೈತರ ಕಷ್ಟಕ್ಕೆ ಸ್ಪಂಧಿಸಲು ಮನವಿ ಮಾಡಲಾಗಿದೆ.