12th October 2024
Share

TUMAKURU:SHAKTHIPEETA FOUNDATION

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ರವರ ಮಾಧ್ಯಮದ ಹೇಳಿಕೆ ಗಮನಿಸಿದ ನಂತರ, ತುಮಕೂರಿನಲ್ಲಿ ‘SILICON VALLEY OF INDIA’ ನಿರ್ಮಾಣ ಮಾಡಲು, ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಸಚಿವರಾದ ಶ್ರೀ ವಿ.ಸೋಮಣ್ಣನವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು, ದೆಹಲಿ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ.ಜಯಚಂದ್ರರವರು ಸೇರಿದಂತೆ, ತುಮಕೂರು ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿಧಿಗಳ ಮತ್ತು ಆಸಕ್ತರ ಸಭೆಯನ್ನು, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ ತುಮಕೂರು ರೀಸರ್ಚ್ ಫೌಂಡೇಷನ್ @ 2047 ವತಿಯಿಂದ ಆಯೋಜಿಸಲು ಚಿಂತನೆ ನಡೆಸಲಾಗಿದೆ.

ಈ ಯೋಜನೆಯ ನೇತೃತ್ವವನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಸಚಿವರು ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರಾದ  ಶ್ರೀ ವಿ.ಸೋಮಣ್ಣನವರು ವಹಿಸಿಕೊಂಡು ಶೀಘ್ರವಾಗಿ ಮಾಸ್ಟರ್ ಪ್ಲಾನ್ ರೂಪಿಸ ಬೇಕಿದೆ. ಅವರಿಗೆ ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರು ಬೆಂಬಲಿಸಲು ಜನಜಾಗೃತಿ ಮೂಡಿಸಲಾಗುವುದು.

ಇದೊಂದು ಐತಿಹಾಸಿಕ ಯೋಜನೆಯಾಗಿ ರೂಪಿಸಲು ಚಿಂತನೆ ನಡೆಸಲಾಗಿದೆ.

ಪೂರ್ವಭಾವಿ ಸಭೆ

ದಿನಾಂಕ:25.09.2024 ರಂದು ಸಂಜೆ 4 ಗಂಟೆಗೆ ತುಮಕೂರು ರೀಸರ್ಚ್ ಫೌಂಡೇಷನ್ @ 2047 ವತಿಯಿಂದ,  ತುಮಕೂರು ವಿಶ್ವ ವಿದ್ಯಾನಿಲಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ನಂತರ ರೂಪುರೇಷೆ ನಿರ್ಧರಿಸಲಾಗುವುದು.

ಆಸಕ್ತರು ಕೈಜೋಡಿಸಬಹುದು

ಕುಂದರನಹಳ್ಳಿ ರಮೇಶ್

ಅಧ್ಯಕ್ಷರು, ಅಭಿವೃದ್ಧಿ ರೆವೂಲ್ಯೂಷನ್ ಫೋರಂ.