TUMAKURU:SHAKTHIPEETA FOUNDATION
ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 14 ಜನ ರಾಜ್ಯಸಭಾ ಸದಸ್ಯರುಗಳು, ಅವರ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಯಾವ, ಯಾವ ಯೋಜನೆಗಳನ್ನು ಮಂಜೂರು ಮಾಡಿಸಲು ಪ್ರಯತ್ನ ಮಾಡುತ್ತಿದ್ದಾರೆ, ಎಂಬ ಮಾಹಿತಿ ಸಂಗ್ರಹಿಸುವ ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಿರುವ, ತುಮಕೂರು ರೀಸರ್ಚ್ ಫೌಂಡೇಷನ್ @ 2047, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮಹತ್ವದ ಯೋಜನೆಗೆ, ದಿನಾಂಕ:24.09.2024 ರಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾದ ಶ್ರೀ ಡಾ.ಸಿ.ಎನ್. ಮಂಜುನಾಥ್ ರವನ್ನು ಬೆಂಗಳೂರಿನ ಅವರ ಮನೆಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಲಾಯಿತು.
‘ಮೆಡಿಕಲ್ ಹಬ್’ ಅಂದರೆ ವiನುಷ್ಯನ ಎಲ್ಲಾ ರೋಗಗಳನ್ನು ಗುರುತಿಸಬಲ್ಲ ಮತ್ತು ಬಡವರಿಗೂ ಅನೂಕೂವಾಗುವ ಅಗತ್ಯವಿರುವ ಎಲ್ಲಾ ಆಸ್ಪತ್ರೆಗಳನ್ನು ಒಂದೇ ಕಡೆ ಸ್ಥಾಪಿಸುವ ಆಲೋಚನೆಯೇ ಮೆಡಿಕಲ್ ಹಬ್, ಕೇಂದ್ರ ಸಚಿವರಾದ ಫಿಯುಷ್ ಗೋಯಲ್ , ತುಮಕೂರಿನಲ್ಲಿ ‘ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ’ ಸ್ಥಾಪಿಸಲು ಸಲಹೆ ನೀಡಿರುವಂತೆ, ಬೆಂಗಳೂರು ಹೊರಭಾಗದಲ್ಲಿ ಒಂದು ‘ಮೆಡಿಕಲ್ ಹಬ್’ ಸ್ಥಾಪನೆ ಅಗತ್ಯವಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಥವಾ ಚಿತ್ರದುರ್ಗ-ಚನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ಅಥವಾ ಬೆಂಗಳೂರು-ಮುಂಬೈ ಕಾರಿಡಾರ್‍ನಲ್ಲಿ ಆರಂಭಿಸುವುದು ಸೂಕ್ತವಾಗಿದೆ. ಯುಪಿಎ ಸರ್ಕಾರ ನಿಮ್ಜ್ ಘೋಷಣೆ ಮಾಡಿದಾಗ ಈ ಅಂಶವೂ ಒಂದಾಗಿತ್ತು.
ಅವರ ಮನೆಯಲ್ಲಿ ನಡೆಸುವ ಜನಸ್ಪಂಧನ ಕಾರ್ಯಕ್ರಮದ ಮಧ್ಯೆಯೇ ಸಮಾಲೋಚನೆ ನಡೆಸಲಾಯಿತು. ಸ್ವತಃ ಖ್ಯಾತ ವೈಧ್ಯರಾಗಿರುವ ಅವರು, ಈ ಬಗ್ಗೆ ಗಂಭಿರವಾಗಿ ಆಲೋಚನೆ ಮಾಡುವುದಾಗಿ ತಿಳಿಸಿದ್ದಾರೆ.
ಒಬ್ಬೊಬ್ಬ ಸಂಸದರೂ, ಅವರ ಕ್ಷೇತ್ರಕ್ಕೆ ಅನುಗುಣವಾಗಿ ಅಥವಾ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಯೋಜನೆಗೆ ಕೈಹಾಕುವ ಮೂಲಕ, ಒಂದೊಂದು ಬೃಹತ್ ಯೋಜನೆ ಕನಸು ಕಾಣುವುದು ಒಳ್ಳೆಯ ಬೆಳವಣಿಗೆ.ಇಂತಹ ಯೋಜನೆಗಳಿಂದ ಕೇಂದ್ರ ಸರ್ಕಾರದಿಂದ, ರಾಜ್ಯಕ್ಕೆ ಹೆಚ್ಚಿಗೆ ಅನುದಾನ ತರುವ ಜೊತೆಗೆ, ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ.
ಯೋಜನೆಯ ಬಗ್ಗೆ ಜ್ಞಾನವಿರುವವರು ಸಹಕರಿಸಲು ಬಹಿರಂಗ ಮನವಿ ಮಾಡಲಾಗಿದೆ.
–ಕುಂದರನಹಳ್ಳಿ ರಮೇಶ್