TUMAKURU:SHAKTHI PEETA FOUNDATION
ತುಮಕೂರು ರೀಸರ್ಚ್ ಫೌಂಡೇಷನ್ @ 2047 ರೈತರ ಉತ್ಪನ್ನಗಳಿಗೆ, ಮೌಲ್ಯವರ್ಧಿತ ಬೆಲೆ ಕೊಡುವಂತಹ ಸಂಶೋಧನೆ ಮಾಡಿರುವವರ ಮನೆ ಬಾಗಿಲಿಗೆ ಹೋಗಲಿದೆ. ಅವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಅನೂಕೂಲ ಮಾಡಿಸಲು ‘ವಿಶೇಷ ಒತ್ತು’ ನೀಡಲಿದೆ.
ದಿನಾಂಕ:24.09.2024 ರಂದು ಮಾಲೂರು ತಾಲ್ಲೋಕಿನಲ್ಲಿ ಇರುವ ರಾಮಚಂದ್ರಪುರ ಮಠದ ಗೋಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಅವರು ಸಂಶೋಧನೆ ನಡೆಸಿರುವ ಮಾಹಿತಿ ಸಂಗ್ರಹ ಮಾಡಲಾಯಿತು. ಈ ಸಂಶೋಧನೆ ಬಗ್ಗೆ ನಾನು ಹೇಳುವುದು ಸರಿಯಲ್ಲ. ಆದರೂ ಇದಕ್ಕೆ ಸರ್ಕಾರಗಳು ಮುದ್ರೆ ಹೊತ್ತಿದರೆ, ‘ಕೊಳಚೆ ನೀರು ಸಂಸ್ಕರಣೆಯಲ್ಲಿ ಒಂದು ಕ್ರಾಂತಿಯೇ’ ಆಗಲಿದೆ.
ರಾಮಚಂದ್ರಪುರ ಮಠದ ಶ್ರೀಗಳು ನಡೆಸುತ್ತಿರುವ ಗೋಶಾಲೆಯಲ್ಲಿ ಸುಮಾರು 5000 ಗೋವುಗಳು ಇವೆಯಂತೆ, ಇಲ್ಲಿ ಗೋವುಗಳ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆ ನಡೆಯುತ್ತಿರುವುದು ರೈತರಿಗೆ ಬಹಳ ಅನೂಕೂಲವಾಗಲಿದೆ.
ದೇಸಿ ಗೋವುಗಳ ಸಾಕಾಣಿಕೆಯಿಂದ ಹಾಲಿನ ಬೆಲೆಗಿಂತ ಸಗಣೆ, ಗಂಜುವಿನಲ್ಲಿಯೇ ಹೆಚ್ಚಿಗೆ ಲಾಭ ಬರಲಿದೆ. ‘ಒಂದು ದೇಸಿ ಗೋವು ಒಂದು ಮೆಡಿಕಲ್ ಸ್ಟೋರ್’ ಇದ್ದ ಹಾಗೆ. ಇದಕ್ಕೆ ಒಂದು ಫ್ಲಾಟ್ ಫಾರಂ ಅಗತ್ಯವಿದೆ. ಈ ಬಗ್ಗೆ ಜ್ಞಾನಿಗಳು ಚಿಂತನೆ ನಡೆಸುತ್ತಿದ್ದಾರೆ.