12th October 2024
Share

TUMAKURU:SHAKTHIPEETA FOUNDATION

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿಯಲ್ಲಿನ ಅಂಶಗಳ ಜಾರಿಗೆ ತುಮಕೂರು ಜಿಲ್ಲೆಯನ್ನು ಪೈಲಟ್  ಯೋಜನೆಯಾಗಿ ಆಯ್ಕೆ ಮಾಡಿಕೊಂಡು ಅನುಷ್ಠಾನಕ್ಕಾಗಿ, ತುಮಕೂರು ವಿಶ್ವ ವಿದ್ಯಾನಿಲಯದ ಸಹಭಾಗಿತ್ವದಲ್ಲಿ ಶ್ರಮಿಸಲಾಗುತ್ತಿದೆ.

ದಿನಾಂಕ:02.10.2023 ರಂದು ತುಮಕೂರು ರೀಸರ್ಚ್ ಫೌಂಡೇಷನ್ @ 2047 ಅನ್ನು ಅತ್ಯಂತ ಸರಳವಾಗಿ ಪ್ರರಂಭಿಸಲಾಗಿದೆ. ಪ್ರಥಮ ವಾರ್ಷಿಕ ಸಮಾರಂಭದಲ್ಲಿ ಅತ್ಯಂತ ಮಹತ್ವದ ನಿರ್ಧಾ ಕೈಗೊಳ್ಳಲು ಯೋಚಿಸಲಾಗಿದೆ.

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿಯ ಪ್ರಕಾರ ತುಮಕೂರು ಜಿಲ್ಲೆಯ 3 ಜನ ಲೋಕಸಭಾ ಸದಸ್ಯರು, ಒಬ್ಬರು ರಾಜ್ಯಸಭಾ ಸದಸ್ಯರು, 11 ಜನ ವಿಧಾನಸಭಾ ಸದಸ್ಯರು, 4 ಜನ ವಿಧಾನಪರಿಷತ್ ಸದಸ್ಯರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಸೇರಿದಂತೆ ಒಟ್ಟು 22 ಅಧ್ಯಯನ ಪೀಠಗಳನ್ನು ರಚಿಸಬೇಕಿದೆ. ಜನಗಣತಿಯ ನಂತರ ಬದಲಾಗಬಹುದು.

ಈಗಾಗಲೇ ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ 16 ಅಧ್ಯಯನ ಪೀಠಗಳು ಇವೆಯಂತೆ, ಇನ್ನೂ ಕೆಲವು ಸ್ಥಾಪನೆ ಹಂತದಲ್ಲಿ ಚರ್ಚೆ ನಡೆಯುತ್ತಿವೆಯಂತೆ.ಆರಂಭದಲ್ಲಿ ಈ 15 ಅಧ್ಯಯನ ಪೀಠಗಳ ಮೂಲಕ 19 ಜನ ಚುನಾಯಿತ ಜನಪ್ರತಿನಿಧಿಗಳ ಅಥವಾ 3 ಜನ ಅಧಿಕಾರಿಗಳ ಒಬ್ಬೊಬ್ಬರ ನೇತೃತ್ವದಲ್ಲಿ, ಆಯಾ ಕ್ಷೇತ್ರದ ಅಧ್ಯಯನ ಪೀಠದ ಹೆಚ್ಚುವರಿ ಅಂಶವಾಗಿ ಕಾರ್ಯ ನಿರ್ವಹಿಸುವುದು ಸೂಕ್ತವಾಗಿದೆ.

ಆಯಾ ವ್ಯಾಪ್ತಿಯಲ್ಲಿ ಬರುವ ವಿಶ್ವ ವಿದ್ಯಾನಿಲಯದ ಕಾಲೇಜುಗಳ, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳ, ನಾಗರೀಕರ, ಎನ್.ಆರ್.ಐ, ವಿವಿಧ ವರ್ಗದ ಸಂಘ ಸಂಸ್ಥೆಗಳನ್ನು ಒಳಗೊಂಡ ಸಲಹಾ ಸಮಿತಿಯನ್ನು ಚುನಾಯಿತ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿ, ಅಧ್ಯಯನ ಪೀಠಗಳ ಮೂಲ ಉದ್ದೇಶ ಮತ್ತು ಹೆಚ್ಚುವರಿ ಉದ್ದೇಶಗಳ ಯಶಸ್ವಿ ಜಾರಿಗೆ ಯೋಜನೆ ರೂಪಿಸಬೇಕಿದೆ.

ಎಲ್ಲಾ ಅಧ್ಯಯನ ಪೀಠಗಳಿಗೂ ಪ್ರವಾಸಿ ಕೇಂದ್ರಗಳ, ನಗರಗಳ ಪ್ರಮುಖ ಸ್ಥಳಗಳಲ್ಲಿ,  ಪ್ರಮುಖ ಸ್ಥಳಗಳ, ಕೆರೆ-ಕಟ್ಟೆ ಸುತ್ತ, ಅರಣ್ಯ ಪಕ್ಕ, ಗುಡ್ಡದ ಪಕ್ಕ, ಬೃಹತ್ ಯೋಜನೆಗಳ ಅಕ್ಕ-ಪಕ್ಕ ಹೀಗೆ ಎಲ್ಲೆಲ್ಲಿ ಉತ್ತಮವಾದ ಸರ್ಕಾರಿ ಅಥವಾ ಅರೆ ಸರ್ಕಾರಿ ಜಮೀನು ಲಭ್ಯವಿದೆ, ಅಂತಹ ಸ್ಥಳಗಳನ್ನು ಗುರುತಿಸಲು ಯೋಚಿಸಲಾಗಿದೆ.

 ಒಂದೊಂದು ಅಧ್ಯಯನ ಪೀಠಕ್ಕೂ ಒಂದೊಂದು ಕ್ಯಾಂಪಸ್ ನಿರ್ಮಾಣ ಮಾಡಲು, ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಪಹಣಿ ಮಾಡಿಸಿ, ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡುವ ಕೆಲಸಕ್ಕೆ ಚಾಲನೆ ನೀಡಲಾಗುವುದು.

ಈ ವರ್ಷದ ನವರಾತ್ರಿ ಅಕ್ಟೋಬರ್ 3 ರಿಂದ 12 ರವರೆಗೂ ನಡೆಯಲಿದೆ. ಅಕ್ಟೋಬರ್ 2 ರಂದು ಪ್ರಥಮ ವಾರ್ಷಿಕೋತ್ಸವ ಸಭೆಯ ನಂತರ ನವರಾತ್ರಿಯ 9 ದಿನಗಳಲ್ಲಿ ಮೇಲ್ಕಂಡ 22 ಜನರೊಂದಿಗೂ, ಮುಕ್ತವಾಗಿ ಬೇಟಿಯಾಗಿ ಸಮಾಲೋಚನೆ ನಡೆಸಿ, ಎಲ್ಲರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಮಾನ್ಯ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಸುವ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ.

02.10.2025 ರ ತುಮಕೂರು ರೀಸರ್ಚ್ ಫೌಂಡೇಷನ್ @ 2047 ವಾರ್ಷಿಕೋತ್ಸವದ ವೇಳೆಗೆ ಪ್ರತಿಯೊಂದು ಕ್ಯಾಂಪಸ್, ಭೂಮಿ ಹಸ್ತಾಂತರ ಮಾಡಿಸಿ, ಭೂಮಿ ಪೂಜೆ ಮಾಡಿ  ಗಿಡಗಳನ್ನು ಹಾಕಿಸುವ ನಿರ್ಧಿಷ್ಟ ಗುರಿ ಹಮ್ಮಿಕೊಳ್ಳಲಾಗುವುದು.

 ಈ ಬಗ್ಗೆ ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲು ರವರೊಂದಿಗೆ ಸಮಾಲೋಚನೆ ನಡೆಸಲು, ಬೆಂಗಳೂರಿನಲ್ಲಿರುವ, ತುಮಕೂರು ಜಿಲ್ಲೆಯ ಆಸಕ್ತ ಅನಿವಾಸಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಇರುವ ಅಧ್ಯಯನ ಪೀಠಗಳು

1.            ಡಾ.ಬಾಬುಜಗಜೀವನ್ ರಾಂ ಅಧ್ಯಯನ ಪೀಠ.

2.            ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ.

3.            ಬಸವೇಶ್ವರ ಅಧ್ಯಯನ ಪೀಠ.

4.            ಸಂತ ಶಿಶುನಾಳ ಷರೀಪ್ ಅಧ್ಯಯನ ಪೀಠ.

5.            ಗೌತಮ ಬುದ್ಧ ಅಧ್ಯಯನ ಪೀಠ.

6.            ಪ್ರೋ.ಎಂ.ಡಿ. ನಂಜುಂಡ ಸ್ವಾಮಿ ಅಧ್ಯಯನ ಪೀಠ.

7.            ನಾಡಪ್ರಭು ಕೆಂಪೆಗೌಡ ಅಧ್ಯಯನ ಪೀಠ.

8.            ಸ್ವಾಮಿ ವಿವೇಕನಂದ ಅಧ್ಯಯನ ಪೀಠ.

9.            ಜುಂಜಪ್ಪ ಅಧ್ಯಯನ ಪೀಠ.

10.         ಕುಮಾರವ್ಯಾಸ ಅಧ್ಯಯನ ಪೀಠ.

11.         ಕುವೆಂಪು ಅಧ್ಯಯನ ಪೀಠ.

12.         ದೇವರಾಜ್ ಅರಸು ಅಧ್ಯಯನ ಪೀಠ.

13.         ಅಲ್ಲಮ ಪ್ರಭು ಅಧ್ಯಯನ ಪೀಠ.

14.         ನೊಳಂಬ ಸಂಸ್ಕøತಿ ಅಧ್ಯಯನ ಪೀಠ.

15.         ವಿನಾಯಕ ಧಾಮೋಧರ್  ಸಾವರ್ಕರ್ ಅಧ್ಯಯನ ಪೀಠ.

16.         ತುಮಕೂರು ರೀಸರ್ಚ್ ಫೌಂಡೇಷನ್ @ 2047

  ಇವುಗಳ ಸ್ಥಾಪನೆ ಹಿಂದೆ ಹಲವಾರು ಜನರ ಶ್ರಮ ಇರುತ್ತದೆ. ಯಾವುದೇ  ರಾಜಕೀಯ ಬೆರೆಸದೆ, ಜಾತೀಯತೆ ಮಾಡದೆ,  ಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಖ್ಯಾತಿಗಳಿಸುವ ಕೆಲಸ ಮಾಡಲು ಆಸಕ್ತಿ ಇರುವವರು ಸಂಪರ್ಕಿಸಲು ಮನವಿ ಮಾಡಲಾಗಿದೆ.

ಇಲ್ಲಿ ಆರ್ಥಿಕ ವ್ಯವಹಾರ ಸಂಪೂರ್ಣ ವಿಶ್ವ ವಿದ್ಯಾನಿಲಯದ್ದು ಮತ್ತು ಸರ್ಕಾರಗಳದ್ದು, ಸೇವೆ ಮೂಲಕ ಕೆಲಸ ಮಾಡುವುದು, ಅಧ್ಯಯನ ಪೀಠಕ್ಕೆ ಸಂಪನ್ಮೂಲ ದೊರಕಿಸುವುದು, ಸಲಹಾ ಸಮಿತಿ ಕರ್ತವ್ಯ.