12th October 2024
Share

TUMAKURU:SHAKTHIPEETA FOUNDATION

ದಿನಾಂಕ:27.09.2024 ರಂದು ತುಮಕೂರು ತಾಲ್ಲೋಕು, ಬಳ್ಳಗೆರೆಯಲ್ಲಿನ ಧನಲಕ್ಷ್ಮಿ ಬ್ರಿಕ್ಸ್ ಗೆ ಭೇಟಿ ನೀಡಿದ್ದೆ. ಮಾಲೀಕರಾದ ಶ್ರೀ ನರೇಂದ್ರರವರೊಂದಿಗೆ ಅವರ ಸಂಶೋದನೆಗಳ ಬಗ್ಗೆ ಮಾತನಾಡಿದೆ. ಇಂಜಿನಿಯರ್ ಆಗಿ ಎಲ್ಲೋ ಕೈತುಂಬ ವೇತನ ಪಡೆಯುತ್ತಿದ್ದವರು, ಅವರ ಹುಟ್ಟೂರಿನಲ್ಲೇ ಉದ್ದಿಮೆ ಸ್ಥಾಪಿಸುವ ಅವರ ಛಲ ಮೆಚ್ಚುವಂತದ್ದು.

ಮಡ್ ಇಂಟರ್‍ಲಾಕ್ ಬ್ರಿಕ್ಸ್‍ಗೆ ರೇಟ್ ಕಡಿಮೆ ಮಾಡಿ ಎಂದಾಗ, ಅವರು ಪ್ರಾತ್ಯಾಕ್ಷಿಕೆಗಾಗಿ ನಿರ್ಮಾಣ ಮಾಡಿರುವ ವಿವಿಧ ಗೋಡೆಗಳನ್ನು ತೋರಿಸಿ, ನೋಡಿ ಸಾರ್ ಕಡಿಮೆಗೆ ಕೊಟ್ಟರೆ, ಈ ರೀತಿ ಗೋಡೆ ಇರುತ್ತದೆ, ಆಯ್ಕೆ ನಿಮ್ಮದು ಎಂದಾಗ ನಿಜಕ್ಕೂ ನನಗೆ ಬರಸಿಡಿಲು ಬಂದಂತಾಯಿರು.

ಮಡ್ ಇಂಟರ್‍ಲಾಕ್ ಬ್ರಿಕ್ಸ್ ತುಮಕೂರು ರೀಸರ್ಚ್ ಫೌಂಡೇಷನ್ @ 2047 ಸಹಯೋಗದಲ್ಲಿ, ಆಸಕ್ತ ಸಂಶೋಧಕರ ಸಭೆ ಆಯೋಜಿಸಲು ಆಲೋಚನೆ ಮಾಡಿದೆವು.

ನಂತರ ಅಲ್ಲಿಗೆ ಬಂದ ಪಾರೆಸ್ಟ್ ಶ್ರೀ ಗಂಗಣ್ಣನವರನ್ನು ಮತ್ತು ಅವರ ತಂದೆ ಶ್ರೀ ಹನುಮಣ್ಣವರನ್ನು ನೋಡಿ, ಇನ್ನೂ ಸಂತೋಷವಾಯಿತು, ಅವರಿಬ್ಬರೂ  ನನಗೆ ಕಳೆದ 20 ವರ್ಷಗಳಿಂದಲೂ ಸ್ನೇಹಿತರು, ನಿವೃತ್ತರಾದ ನಂತರ ತುಮಕೂರಿನ ಶ್ರೀ ರಾಮಕೃಷ್ಣ ಆಶ್ರಮದ ಭಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರಂತೆÀ.

ಬಳ್ಳಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀ ಸ್ವಾಮಿ ಮತ್ತು ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀ ವೆಂಕಟೇಶ್ ರವರು ಸಹ ಅಲ್ಲಿಗೆ ಬಂದರು. ಅವರನ್ನು ಇಂತಹ ಕೈಗಾರಿಕೆ ಮಾಡುವವರಿಂದ ಎಷ್ಟು ಲಂಚ ತೆಗೆದುಕೊಳ್ಳುತ್ತೀರಿ,

 ನಿಮ್ಮ ಪಿಡಿಓ ರವರ ದರ ಎಷ್ಟು ಎಂದು ನೇರವಾಗಿ ಕೇಳಿದಾಗ ಅವರು ನೀಡಿದ ಉತ್ತರ ಸಾರ್, ನಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಯಾರೇ ಕೈಗಾರಿಕೆ ಅಥವಾ ಉದ್ದಿಮೆ ನಡೆಸುವವರು ಬಂದರೆ, ನಾವೇ ಸ್ವಾಗತಿಸಿ, ಯಾವುದೇ ಲಂಚ ಇಲ್ಲದೆ ಕೆಲಸ ಮಾಡುತ್ತೇವೆ ಸಾರ್ ಎಂದಾಗ ನನಗೆ ಆದ ಖುಷಿ ಹೇಳತೀರದು.

ಹಾಗಾದರೆ ಗ್ರಾಮಪಂಚಾಯಿತಿ ಮಟ್ಟದ ಕೈಗಾರಿಕೆ ಅಥವಾ ಉದ್ದಿಮೆದಾರರ ಸಭೆಯನ್ನು ಇಲ್ಲಿಯೇ ನಡೆಸೋಣ, ಇಂತಹ ಅರ್ಹ ಸಂಶೋದನಾಗಾರರಿಗೆ, ತುಮಕೂರು ರೀಸರ್ಚ್ ಫೌಂಡೇಷನ್ @ 2047 ಮೂಲಕ ಸರ್ಕಾರಗಳಿಂದ ಸಂಶೋಧನಾ ನೆರವು ಕೊಡಿಸಲು ಪ್ರಯತ್ನ ಮಾಡೋಣ, ಎಂಬ ನಿರ್ಧಾರಕ್ಕೆ ಬಂದೆವು.