16th October 2024
Share

TUMAKURU:SHAKTHI PEETA FOUNDATION

ತುಮಕೂರು ಜಿಲ್ಲೆ ಚುನಾಯಿತ ಜನಪ್ರತಿನಿಧಿಗಳಿಂದ ಮುಖ್ಯಮಂತ್ರಿಯವರಿಗೆ, ಈ ಕೆಳಕಂಡಂತೆ ಪತ್ರ ಬರೆಯಲು ಮನವಿ ಮಾಡಲು,  ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲು ರವರಿಗೆ ಮನವಿ ಮಾಡಲಾಗಿದೆ.  

ಆಸಕ್ತರು ಸಲಹೆ ನೀಡಬಹುದು.

ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು.

ಮುಖ್ಯ ಮಂತ್ರಿಯವರು.

ಕರ್ನಾಟಕ ಸರ್ಕಾರ, ವಿಧಾನ ಸೌಧ

ಬೆಂಗಳೂರು

ಮಾನ್ಯರೇ

ವಿಷಯ: ತುಮಕೂರು ವಿಶ್ವ ವಿದ್ಯಾನಿಲಯದ ವಿವಿಧ ಪ್ರಸ್ತಾವನೆಗಳ ಮಂಜೂರಾತಿ ಬಗ್ಗೆ.

  ರಾಜ್ಯದ ಎಲ್ಲಾ ಗ್ರಾಮ/ಬಡಾವಣೆಯ ವಿದ್ಯಾರ್ಥಿಗಳ ಮತ್ತು ಎನ್.ಆರ್.ಐ ಗಳ ಮೂಲಕ, ‘2047 ರ ವೇಳೆಗೆ ದೇಶದಲ್ಲಿಯೇ ನಂಬರ್ ಒನ್ ಆಗಿ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಪಡಿಸಲು, ಅಧ್ಯಯನ ಮತ್ತು ಸಂಶೋಧನೆ ಮಾಡಲು, ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಅಭಿವೃದ್ಧಿ ರೆವೂಲ್ಯೂಷನ್  ಸಹಭಾಗಿತ್ವದಲ್ಲಿ,  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಎಂ.ಓ.ಯು’ ನಲ್ಲಿರುವ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಯೋಜನೆ ರೂಪಿಸಲಾಗಿದೆ. 

  ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ,  ತುಮಕೂರು ರೀಸರ್ಚ್ ಫೌಂಡೇಷನ್ @ 2047’ ಸ್ಥಾಪಿಸಿಕೊಂಡು, ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿಯ ಯೋಜನೆಗಳ ಪೈಲಟ್ ಯೋಜನೆಯಾಗಿ, ತುಮಕೂರು ಜಿಲ್ಲೆ ಆಯ್ಕೆ ಮಾಡಿಕೊಂಡು ‘ಪರಿಕಲ್ಪನಾ ವರದಿ’ ಸಿದ್ಧಪಡಿಸಲಾಗಿದೆ.

  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿಯಲ್ಲಿನ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ನೋಡೆಲ್ ಏಜೆನ್ಸಿಯಾಗಿ ನೇಮಕ ಮಾಡಿ, ಈ ಕೆಳಕಂಡ   ವಿವಿಧ ಪ್ರಸ್ತಾವನೆಗಳಿಗೆ, ಮಂಜೂರಾತಿ ನೀಡಲು  ಈ ಮೂಲಕ ಕೋರಿದೆ.

1.ಆಯಾ ವ್ಯಾಪ್ತಿಯ ಲೋಕಸಭಾ ಸದಸ್ಯರ, ರಾಜ್ಯಸಭಾ ಸದಸ್ಯರ, ವಿಧಾನಸಭಾ ಸದಸ್ಯರ, ವಿಧಾನಪರಿಷತ್ ಸದಸ್ಯರ ಸಲಹೆ ಮೇರೆಗೆ, ರಾಜ್ಯದ್ಯಾಂತ ಸ್ಥಾಪಿಸಲು ಉದ್ದೇಶಿರುವ 555 ಅಧ್ಯಯನ ಪೀಠಗಳಿಗೆ/ಮ್ಯೂಸಿಯಂಗಳಿಗೆ/ಆಡಳಿತ ಕಚೇರಿಗಳಿಗೆ ಕನಿಷ್ಠ 5 ಗುಂಟೆಯಿಂದ 100 ಎಕರೆವರೆಗೆ, ಸರ್ಕಾರಿ ಜಮೀನು ಕಾಯ್ದಿರಿಸಲು ಮತ್ತು ನರೇಗಾ, ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಆವರಣ ಗೋಡೆ ಹಾಕಿ ಸಂರಕ್ಷಣೆ ಮಾಡಲು’ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡುವುದು.

2.ಲೋಕಸಭಾ ಸದಸ್ಯರ, ರಾಜ್ಯಸಭಾ ಸದಸ್ಯರ, ವಿಧಾನಸಭಾ ಸದಸ್ಯರ, ವಿಧಾನಪರಿಷತ್ ಸದಸ್ಯರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಗಳ ವ್ಯಾಪ್ತಿಯ ಅಧ್ಯಯನ ಪೀಠಗಳಿಗೆ ಸ್ಥಳೀಯ ಪ್ರದೇಶಾಬಿವೃದ್ಧಿ ಅನುದಾನ’ ದಲ್ಲಿ ಶೇ 25 ರಷ್ಟು ಬಳಸಿಕೊಳ್ಳಲು ಯೋಜನಾ ಇಲಾಖೆ, ಮಾರ್ಗಸೂಚಿ ಸಿದ್ಧಪಡಿಸುವುದು ಹಾಗೂ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲು ಆದೇಶ ಮಾಡುವುದು.

3.ರಾಜ್ಯದ್ಯಾಂತ ಉದ್ದೇಶಿತ 555 ಅಧ್ಯಯನ ಪೀಠಗಳಿಗೆ ಮತ್ತು ತುಮಕೂರು ರೀಸರ್ಚ್ ಫೌಂಡೇಷನ್ @ 2047 ನ ಅಂತರರಾಷ್ಟ್ರೀಯ ಮಟ್ಟದ ಕ್ಯಾಂಪಸ್ ನಿರ್ಮಾಣಕ್ಕೆ,  ಸಲ್ಲಿಸಿರುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಶೇ 100 ರಷ್ಟು ಅನುದಾನ’ ವನ್ನು ವಿóಶೇಷ ಪ್ರಕರಣ ಎಂದು ಮಂಜೂರು ಮಾಡಲು ಮಾನ್ಯ ಪ್ರಧಾನ ಮಂತ್ರಿಯವರಿಗೆ ಮನವಿ ಮಾಡುವುದು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಸ್ಥಾಪಿಸಿರುವ ಕರ್ನಾಟಕ ರಾಜ್ಯ  ರೀಸರ್ಚ್ ಫೌಂಡೇಷನ್ ಮೂಲಕ, ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಗೆ ಪ್ರಸ್ತಾವನೆ ಸಲ್ಲಿಸಲು ಆದೇಶ ಮಾಡುವುದು.

4.ರಾಜ್ಯಾದ್ಯಾಂತ ಊರಿಗೊಂದು/ಬಡಾವಣೆಗೊಂದು ಪುಸ್ತಕ, ವಿಷನ್ ಡಾಕ್ಯುಮೆಂಟ್ @ 2047 ಸಿದ್ಧಪಡಿಸಲು, ಥೀಮ್ ಪಾರ್ಕ್ ನಿರ್ಮಾಣ ಮಾಡಲು, ಅವರ ಹುಟ್ಟೂರಿನ/ಬಡಾವಣೆಗೆ  ಆರ್ಥಿಕ ನೆರವು ನೀಡಲು, ಆಯಾ ಊರಿನ/ಬಡಾವಣೆಯ ಎನ್.ಆರ್.ಐ, ಎನ್.ಆರ್.ಕೆ ಮತ್ತು ಎನ್.ಆರ್ ವಿಲೇಜ್/ಬಡಾವಣೆ ಗಳಿಗೆ ಮಾರ್ಗಸೂಚಿ ಸಿದ್ಧಪಡಿಸಲು ಎನ್.ಆರ್.ಐ ಫೋರಂ ಕರ್ನಾಟಕ ಇವರಿಗೆ ಆದೇಶ ಮಾಡುವುದು ಹಾಗೂ 2047 ರವರೆಗೆ ‘ಎನ್.ಆರ್.ಮಾನಿಟರಿಂಗ್ ಸೆಲ್’ ಸ್ಥಾಪಿಸಿ, ತುಮಕೂರು ವಿಶ್ವ ವಿದ್ಯಾನಿಲಯ ಸ್ಥಾಪಿಸಿರುವ ತುಮಕೂರು ರೀಸರ್ಚ್ ಫೌಂಡೇಷನ್ @ 2047 ನಿರ್ವಹಣೆಗೆ ವಹಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

5.ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ರಾಜ್ಯ ಮತ್ತು ಜಿಲ್ಲಾ ಮಟ್ಟದ ‘ದಿಶಾ ಮಾನಿಟರಿಂಗ್ ಸೆಲ್’ ಸ್ಥಾಪಿಸಲು, ಮಾರ್ಗಸೂಚಿ ಸಿದ್ಧಪಡಿಸಲು ಯೋಜನಾ ಇಲಾಖೆಗೆ ಆದೇಶ ಮಾಡುವುದು ಮತ್ತು ತುಮಕೂರು ವಿಶ್ವ ವಿದ್ಯಾನಿಲಯ ಸ್ಥಾಪಿಸಿರುವ ತುಮಕೂರು ರೀಸರ್ಚ್ ಫೌಂಡೇಷನ್ @ 2047 ನಿರ್ವಹಣೆಗೆ ವಹಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

6.ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋ ಡೈವರ್ಸಿಟಿ ಮ್ಯಾನೇಜ್ ಕಮಿಟಿ ಮಾನಿಟರಿಂಗ್ ಸೆಲ್’ ಸ್ಥಾಪಿಸಲು, ಮಾರ್ಗಸೂಚಿ ಸಿದ್ಧಪಡಿಸಲು ಅರಣ್ಯ ಮತ್ತು ಪರಿಸರ ಇಲಾಖೆಗೆ ಆದೇಶ ಮಾಡುವುದು ಮತ್ತು ತುಮಕೂರು ವಿಶ್ವ ವಿದ್ಯಾನಿಲಯ ಸ್ಥಾಪಿಸಿರುವ ತುಮಕೂರು ರೀಸರ್ಚ್ ಫೌಂಡೇಷನ್ @ 2047 ನಿರ್ವಹಣೆಗೆ ವಹಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

7.ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳು ಇಂಟರ್ನ್ ಶಿಪ್, ಪ್ರಾಜೆಕ್ಟ್ ವರ್ಕ್, ಪಿ.ಹೆಚ್.ಡಿ ಗೆ ಮತ್ತು  ಇಂಜಿನಿಯರಿಂಗ್ ಕಾಲೇಜುಗಳ ಆಕ್ಟಿವಿಟಿ ಪಾಯಿಂಟ್ಸ್‍ಗೆ, ಆಯಾ ಗ್ರಾಮದ/ಬಡಾವಣೆಯ ಎಲ್ಲಾ ವಿದ್ಯಾರ್ಥಿಗಳ ನೇತೃತ್ವದಲ್ಲಿ, ನ್ಯಾಷನಲ್ ಟೂರಿಸಂ ಯೂತ್ ಕ್ಲಬ್’ ಮಾದರಿಯಲ್ಲಿ,  ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್’ ಸ್ಥಾಪಿಸಿಕೊಂಡು, ಆಯಾ ಗ್ರಾಮದ/ಬಡಾವಣೆಯ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ, ಅನುಷ್ಠಾನಕ್ಕೆ 2047 ರವರೆಗೂ ಶ್ರಮಿಸಲು, ಮಾರ್ಗಸೂಚಿ ಸಿದ್ಧಪಡಿಸಲು ಉನ್ನತ ಶಿಕ್ಷಣ ಇಲಾಖೆಗೆ ಆದೇಶ ಮಾಡುವುದು. 

8.ಜಲಸಂಪನ್ಮೂಲ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳ ಸಹಭಾಗಿತ್ವದಲ್ಲಿ, ತುಮಕೂರು ವಿಶ್ವ ವಿದ್ಯಾನಿಲಯ ನಡೆಸಲು ಉದ್ದೇಶಿರುವ,  ರಾಜ್ಯ ಮಟ್ಟದ ಜಲಗ್ರಂಥ ಸಮಾವೇಶಕ್ಕೆ’  ಅನುದಾನ ಬಿಡುಗಡೆ ಮಾಡಲು ಇಲಾಖೆಗೆ ಆದೇಶ ಮಾಡುವುದು.

9.ವಿದ್ಯಾರ್ಥಿಗಳ ಮೂಲಕ ತುಮಕೂರು ಜಿಲ್ಲೆಯ ಜಲಸಂಗ್ರಹಾಗಾರಗಳ ಗುರುತಿಸುವಿಕೆ ಮತ್ತು ದತ್ತು ಪಡೆಯುವ ಕಾರ್ಯಕ್ರಮ ರೂಪಿಸಿ, ಗಿನ್ನೀಸ್ ದಾಖಲೆ’ ಮಾಡುವ ಪ್ರಸ್ತಾವನೆ  ಸಿದ್ಧಪಡಿಸಲು ಜಲಸಂಪನ್ಮೂಲ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳಿಗೆ ಆದೇಶ ಮಾಡುವುದು.

10.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆÀ ಸಹಭಾಗಿತ್ವದಲ್ಲಿ, ತುಮಕೂರು ವಿಶ್ವ ವಿದ್ಯಾನಿಲಯ ನಡೆಸಲು ಉದ್ದೇಶಿರುವ,  ‘ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ನ ರಾಜ್ಯ ಮಟ್ಟದ   ಸಮಾವೇಶಕ್ಕೆ  ಅನುದಾನ ಬಿಡುಗಡೆ ಮಾಡಲು ಇಲಾಖೆಗೆ ಆದೇಶ ಮಾಡುವುದು.

11.ದೆಹಲಿಯಲ್ಲಿ ಲೋಕಸಭಾ ಕ್ಷೇತ್ರವಾರು ಪೆಂಡಿಂಗ್ ಇರುವ ಯೋಜನೆಗಳ ಹಾಗೂ ಅನುದಾನ ಪಡೆಯಲು ಹೊಸ ಪ್ರಸ್ತಾವನೆಗಳನ್ನು ಸಲ್ಲಿಸುವ ‘ಇಲಾಖೆಗಳ ಜಿಐಎಸ್ ಲೇಯರ್’ ಮಾಡಲು   ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಪ್ರಸ್ತಾವನೆ ಸಿದ್ಧಪಡಿಸಲು ದೆಹಲಿ ರೆಸಿಡೆಂಟ್ ಕಮೀಷನರ್ ರವರಿಗೆ ಆದೇಶ ಮಾಡುವುದು.

12.ದೆಹಲಿಯ ಕರ್ನಾಟಕ ಭವನ-1 ರಲ್ಲಿ ಲೋಕಸಭಾ ಕ್ಷೇತ್ರಗಳ ಅಭಿವೃದ್ದಿ ಅಧ್ಯಯನ ಮ್ಯೂಸಿಯಂ’ ಸ್ಥಾಪಿಸಲು ಮತ್ತು ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್’ ನಿರ್ಮಾಣ ಮಾಡಿಸಲು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಪ್ರಸ್ತಾವನೆ ಸಿದ್ಧಪಡಿಸಲು ದೆಹಲಿ ರೆಸಿಡೆಂಟ್ ಕಮೀಷನರ್ ರವರಿಗೆ ಆದೇಶ ಮಾಡುವುದು.

13.‘ನೀರು ಮತ್ತು ಗಂಗಾಮಾತೆ’ಗೆ ಇರುವ ಸಂಭಂದಗಳ ಅಧ್ಯಯನ ಮಾಡಲು, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಗೆ ವಿಶ್ವದ 108 ಶಕ್ತಿಪೀಠಗಳ ಘೋಷಣೆ ಮಾಡಲು, ಶಕ್ತಿಪೀಠ ಪ್ರವಾಸಿ ಪ್ಯಾಕೇಜ್  ಮಾಡಿ, ಧನ ಸಹಾಯ ಮಾಡಲು ಹಾಗೂ ಮುಜರಾಯಿ ಇಲಾಖೆ ಸಹಭಾಗಿತ್ವದಲ್ಲಿ ಶಕ್ತಿಪೀಠಗಳ ರಾಷ್ಟ್ರೀಯ ಸಮಾವೇಶ ನಡೆಸಲು ಪ್ರಸ್ತಾವನೆ ಸಲ್ಲಿಸಲು ಮುಜರಾಯಿ ಇಲಾಖೆಗೆ ಆದೇಶ ಮಾಡುವುದು.

14.‘ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆ’ ಯಾಗಿ ಆಯ್ಕೆ ಮಾಡಿ, ತುಮಕೂರು ವಿಶ್ವ ವಿದ್ಯಾನಿಯಲದಲ್ಲಿ ಇರುವ 15 ಅಧ್ಯಯನ ಪೀಠಗಳಿಗೂ, ಒಂದೊಂದು ಹೆಚ್ಚುವರಿ ಅಧ್ಯಯನ ಪೀಠದ ಹೊಣೆಗಾರಿಕೆ ನೀಡಿ, ಶ್ರಮಿಸಲು ಉದ್ದೇಶಿರುವ, ಉದ್ದೇಶಿತ 22 ಅಧ್ಯಯನ ಪೀಠಗಳಿಗೆ/ಮ್ಯೂಸಿಯಂಗಳಿಗೆ/ಆಡಳಿತ ಕಚೇರಿಗಳಿಗೆ ತಲಾ 5 ಕೋಟಿಯಂತೆ ರೂ 110 ಕೋಟಿ ಯೋಜನೆಗೆ ಮಂಜೂರಾತಿ ನೀಡಿ ಆದೇಶ ಮಾಡುವುದು.(ಗಣಿ ಅನುದಾನ ಬಳಸಿಕೊಳ್ಳ ಬಹುದು)

15.ರಾಜ್ಯದ ಎಲ್ಲಾ ಇಲಾಖೆಗಳ, ಎಲ್ಲಾ ವಿಶ್ವ ವಿದ್ಯಾನಿಲಯಗಳ, ಖಾಸಗಿ, ಆರ್ ಅಂಡ್ ಡಿ ಮಾನಿಟರಿಂಗ್ ಸೆಲ್ ಸ್ಥಾಪಿಸಿ, ಮಾನಿಟರಿಂಗ್ ಮಾಡಲು, ತುಮಕೂರು ರೀಸರ್ಚ್ ಫೌಂಡೇಷನ್ @ 2047 ನ, ‘ನಾಲೇಡ್ಜ್ ಬ್ಯಾಂಕ್ @ 2047’ ಮೂಲಕ ಸ್ಥಾಪಿಸುವ, ಹೈಟೆಕ್ ಲೈಬ್ರರರಿ ಮತ್ತು ವಾóರ್ಷಿಕ ನಿರ್ವಹಣೆ’ ಗೆ  ಕೋರಿರುವ ರೂ 2.35 ಕೋಟಿ ರೂ ಗಳನ್ನು ಮುಖ್ಯಮಂತ್ರಿಗಳ ನಿಧಿಯಲ್ಲಿ ಮಂಜೂರು ಮಾಡುವುದು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಗೆ ಮಾರ್ಗಸೂಚಿ ಸಿದ್ಧಪಡಿಸಲು  ಆದೇಶ ಮಾಡುವುದು.

ವಂದನೆಗಳೊಂದಿಗೆ                                                                                         ತಮ್ಮ ವಿಶ್ವಾಸಿ

                                                                                                                        (                              )

11 ವಿಧಾನಸಭಾ ಸದಸ್ಯರ ವಿಳಾಸಕ್ಕೆ ಕಳುಹಿಸಬೇಕಾದ ಪತ್ರದ ಮಾದರಿ

ಶ್ರೀ ———

——- ವಿಧಾನಸಭಾ ಕ್ಷೇತ್ರ

ಮಾನ್ಯರೇ

ವಿಷಯ: ತಮ್ಮ ವಿಧಾನಸಭಾ ಕ್ಷೇತ್ರದ ಅಧ್ಯಯನ ಪೀಠ ಆರಂಭಿಸುವ ಬಗ್ಗೆ.

 ತುಮಕೂರು ವಿಶ್ವ ವಿದ್ಯಾನಿಲಯ ದೇಶಕ್ಕೆ ಮಾದರಿಯಾಗುವ ಕೆಲಸ ಆರಂಭಿಸಿದೆ. 1947 ರಿಂದ ಇದೂವರೆಗೆ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರಾಗಿರುವ ಅವಧಿಯಲ್ಲಿ ಕೈಗೊಂಡ ಯೋಜನೆಗಳ ಮಾಹಿತಿ, ಮುಂದೆ 2047 ರವರೆಗೆ ಕೈಗೊಳ್ಳಬೇಕಾದ ಯೋಜನೆಗಳ ಅಧ್ಯಯನ/ಮ್ಯೂಸಿಯಂ/ ಶಾಸಕರ ಕಚೇರಿಯನ್ನು ಸ್ಥಾಪಿಸಿ, ವಿಶ್ವ ವಿದ್ಯಾನಿಯಲದ ಒಂದು ಅಧ್ಯಯನ ಪೀಠ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.

  ಆದ್ದರಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ನಾವು ಕಳುಹಿಸಿರುವ ಮಾದರಿಯಲ್ಲಿ ಪತ್ರ ಬರೆಯಲು ಮತ್ತು ತುಮಕೂರು ರೀಸರ್ಚ್ ಫೌಂಡೇಷನ್ @ 2047 ಗೆ ಒಬ್ಬರನ್ನು ತಮ್ಮ ವಿಶೇಷ ಪ್ರತಿನಿಧಿಯಾಗಿ ನೇಮಿಸಲು ಈ ಮೂಲಕ ಕೋರಿದೆ.

 ವಂದನೆಗಳೊಂದಿಗೆ                                                  ತಮ್ಮ ವಿಶ್ವಾಸಿ

                                                                                       (                 )

3 ಲೋಕಸಭಾ ಸದಸ್ಯರ ವಿಳಾಸಕ್ಕೆ ಕಳುಹಿಸಬೇಕಾದ ಪತ್ರದ ಮಾದರಿ

ಶ್ರೀ ———

——- ಲೋಕಸಭಾ ಕ್ಷೇತ್ರ

ಮಾನ್ಯರೇ

ವಿಷಯ: ತಮ್ಮ  ಲೋಕಸಭಾ ಕ್ಷೇತ್ರದ ಅಧ್ಯಯನ ಪೀಠ ಆರಂಭಿಸುವ ಬಗ್ಗೆ.

 ತುಮಕೂರು ವಿಶ್ವ ವಿದ್ಯಾನಿಲಯ ದೇಶಕ್ಕೆ ಮಾದರಿಯಾಗುವ ಕೆಲಸ ಆರಂಭಿಸಿದೆ. 1947 ರಿಂದ ಇದೂವರೆಗೆ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಸದರಾಗಿರುವ ಅವಧಿಯಲ್ಲಿ ಕೈಗೊಂಡ ಯೋಜನೆಗಳ ಮಾಹಿತಿ, ಮುಂದೆ 2047 ರವರೆಗೆ ಕೈಗೊಳ್ಳಬೇಕಾದ ಯೋಜನೆಗಳ ಅಧ್ಯಯನ/ಮ್ಯೂಸಿಯಂ/ ಸಂಸದರ ಕಚೇರಿಯನ್ನು ಸ್ಥಾಪಿಸಿ, ವಿಶ್ವ ವಿದ್ಯಾನಿಯಲದ ಒಂದು ಅಧ್ಯಯನ ಪೀಠ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.

  ಆದ್ದರಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ನಾವು ಕಳುಹಿಸಿರುವ ಮಾದರಿಯಲ್ಲಿ ಪತ್ರ ಬರೆಯಲು ಮತ್ತು ತುಮಕೂರು ರೀಸರ್ಚ್ ಫೌಂಡೇಷನ್ @ 2047 ಗೆ ಒಬ್ಬರನ್ನು ತಮ್ಮ ವಿಶೇಷ ಪ್ರತಿನಿಧಿಯಾಗಿ ನೇಮಿಸಲು ಈ ಮೂಲಕ ಕೋರಿದೆ.

 ವಂದನೆಗಳೊಂದಿಗೆ                                                  ತಮ್ಮ ವಿಶ್ವಾಸಿ

                                                                                          (                 )

1 ರಾಜ್ಯ ಸಭಾ ಸದಸ್ಯರ ವಿಳಾಸಕ್ಕೆ ಕಳುಹಿಸಬೇಕಾದ ಪತ್ರದ ಮಾದರಿ

ಶ್ರೀ ———

——- ಲೋಕಸಭಾ ಕ್ಷೇತ್ರ

ಮಾನ್ಯರೇ

ವಿಷಯ: ತಮ್ಮ  ರಾಜ್ಯ ಸಭಾ ಕ್ಷೇತ್ರದ ಅಧ್ಯಯನ ಪೀಠ ಆರಂಭಿಸುವ ಬಗ್ಗೆ.

 ತುಮಕೂರು ವಿಶ್ವ ವಿದ್ಯಾನಿಲಯ ದೇಶಕ್ಕೆ ಮಾದರಿಯಾಗುವ ಕೆಲಸ ಆರಂಭಿಸಿದೆ. 1947 ರಿಂದ ಇದೂವರೆಗೆ ತಮ್ಮ ರಾಜ್ಯ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಸದರಾಗಿರುವ ಅವಧಿಯಲ್ಲಿ ಕೈಗೊಂಡ ಯೋಜನೆಗಳ ಮಾಹಿತಿ, ಮುಂದೆ 2047 ರವರೆಗೆ ಕೈಗೊಳ್ಳಬೇಕಾದ ಯೋಜನೆಗಳ ಅಧ್ಯಯನ/ಮ್ಯೂಸಿಯಂ/ ರಾಜ್ಯ ಸಭಾ ಸದಸ್ಯರ ಕಚೇರಿಯನ್ನು ಸ್ಥಾಪಿಸಿ, ವಿಶ್ವ ವಿದ್ಯಾನಿಯಲದ ಒಂದು ಅಧ್ಯಯನ ಪೀಠ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.

  ಆದ್ದರಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ನಾವು ಕಳುಹಿಸಿರುವ ಮಾದರಿಯಲ್ಲಿ ಪತ್ರ ಬರೆಯಲು ಮತ್ತು ತುಮಕೂರು ರೀಸರ್ಚ್ ಫೌಂಡೇಷನ್ @ 2047 ಗೆ ಒಬ್ಬರನ್ನು ತಮ್ಮ ವಿಶೇಷ ಪ್ರತಿನಿಧಿಯಾಗಿ ನೇಮಿಸಲು ಈ ಮೂಲಕ ಕೋರಿದೆ.

 ವಂದನೆಗಳೊಂದಿಗೆ                                                  ತಮ್ಮ ವಿಶ್ವಾಸಿ

                                                                       (                                                 )

4 ವಿಧಾನಪರಿಷತ್ ಸದಸ್ಯರ ವಿಳಾಸಕ್ಕೆ ಕಳುಹಿಸಬೇಕಾದ ಪತ್ರದ ಮಾದರಿ

ಶ್ರೀ ———

——- ಲೋಕಸಭಾ ಕ್ಷೇತ್ರ

ಮಾನ್ಯರೇ

ವಿಷಯ: ತಮ್ಮ  ವಿಧಾನಪರಿಷತ್ ಕ್ಷೇತ್ರದ ಅಧ್ಯಯನ ಪೀಠ ಆರಂಭಿಸುವ ಬಗ್ಗೆ.

 ತುಮಕೂರು ವಿಶ್ವ ವಿದ್ಯಾನಿಲಯ ದೇಶಕ್ಕೆ ಮಾದರಿಯಾಗುವ ಕೆಲಸ ಆರಂಭಿಸಿದೆ. 1947 ರಿಂದ ಇದೂವರೆಗೆ ತಮ್ಮ ವಿಧಾನಪರಿಷತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಸದರಾಗಿರುವ ಅವಧಿಯಲ್ಲಿ ಕೈಗೊಂಡ ಯೋಜನೆಗಳ ಮಾಹಿತಿ, ಮುಂದೆ 2047 ರವರೆಗೆ ಕೈಗೊಳ್ಳಬೇಕಾದ ಯೋಜನೆಗಳ ಅಧ್ಯಯನ/ಮ್ಯೂಸಿಯಂ/ ವಿಧಾನಪರಿಷತ್ ಕಚೇರಿಯನ್ನು ಸ್ಥಾಪಿಸಿ, ವಿಶ್ವ ವಿದ್ಯಾನಿಯಲದ ಒಂದು ಅಧ್ಯಯನ ಪೀಠ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ.

  ಆದ್ದರಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ನಾವು ಕಳುಹಿಸಿರುವ ಮಾದರಿಯಲ್ಲಿ ಪತ್ರ ಬರೆಯಲು ಮತ್ತು ತುಮಕೂರು ರೀಸರ್ಚ್ ಫೌಂಡೇಷನ್ @ 2047 ಗೆ ಒಬ್ಬರನ್ನು ತಮ್ಮ ವಿಶೇಷ ಪ್ರತಿನಿಧಿಯಾಗಿ ನೇಮಿಸಲು ಈ ಮೂಲಕ ಕೋರಿದೆ.

 ವಂದನೆಗಳೊಂದಿಗೆ                                                  ತಮ್ಮ ವಿಶ್ವಾಸಿ

                                                                                          (                 )

ತುಮಕೂರು ವಿಶ್ವ ವಿದ್ಯಾನಿಲಯ ಸಿದ್ಧಪಡಿಸಿರುವ, ಅಡಕಗಳನ್ನು ಲಗತ್ತಿಸಿದೆ.

1.ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಎಂ.ಓ.ಯು.

2.ಉದ್ದೇಶಿತ 555 ಅಧ್ಯಯನ ಪೀಠಗಳಿಗೆ ಜಮೀನು ಕಾಯ್ದಿರಿಸುವ ಪ್ರಸ್ತಾವನೆ.

3.ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಮಾರ್ಗಸೂಚಿ ಪ್ರಸ್ತಾವನೆ.

4.ಹೈಟೆಕ್ ಲೈಬ್ರರರಿ ಮತ್ತು ವಿವಿಧ ಆರ್ ಅಂಡ್ ಡಿ ಮಾನಿಟರಿಂಗ್ ಸೆಲ್ ವಾóರ್ಷಿಕ ನಿರ್ವಹಣೆ  ಪ್ರಸ್ತಾವನೆ.

5.ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ರೂ —– ಕೋಟಿ ಪ್ರಸ್ತಾವನೆ.

6.ತುಮಕೂರು ಜಿಲ್ಲೆ ಪೈಲಟ್ ಯೋಜನೆ ರೂ 110 ಕೋಟಿ ಪ್ರಸ್ತಾವನೆ.

7.ಎನ್.ಆರ್.ಐ ಫೋರಂ ಕರ್ನಾಟಕ ಮಾನಿಟರಿಂಗ್ ಸೆಲ್ ಪ್ರಸ್ತಾವನೆ.

8.ದಿಶಾ ಮಾನಿಟರಿಂಗ್ ಸೆಲ್ ಪ್ರಸ್ತಾವನೆ.

9.ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಮಾನಿಟರಿಂಗ್ ಸೆಲ್ ಪ್ರಸ್ತಾವನೆ.

10.ಉನ್ನತ ಶಿಕ್ಷಣ ಇಲಾಖೆ ಪ್ರಸ್ತಾವನೆ.

11.ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಮಧ್ಯಂತರ ವರದಿ