14th April 2025
Share

TUMAKURU:SHAKTHIPEETA FOUNDATION

ಇದೂವರೆಗೂ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಿಲ್ಲ. ರಾಜ್ಯ ಸರ್ಕಾರ 2018 ರಿಂದಲೂ ಪ್ರಯತ್ನ ಪಟ್ಟರೂ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದಿಂದ ಜಮೀನು ಮಂಜೂರು ಸಾಧ್ಯಾವಾಗಿಲ್ಲ.

ತಮಿಳು ಮಾಡು ಸರ್ಕಾರಕ್ಕೆ, ಗೋವಾ ಸರ್ಕಾರಕ್ಕೆ, ತ್ರಿಪುರ ಸರ್ಕಾರಗಳಿಗೆ ಜಮೀನು ಮಂಜೂರು ಮಾಡಿದ್ದಾರೆ. ಆದರೇ ಕರ್ನಾಟಕ ರಾಜ್ಯಕ್ಕೆ ಜಮೀನು ಏಕೆ ಮಂಜೂರು ಮಾಡಿಲ್ಲ ಎಂಬುದೇ ಯಕ್ಷ ಪ್ರಶ್ನೆ.

ದೆಹಲಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ  ಡಾ.ಸಿ.ಎನ್.ಮಂಜುನಾಥ್ ರವರೊಂದಿಗೆ, ದೆಹಲಿಯ ಕರ್ನಾಟಕ ಭವನದಲ್ಲಿ ಸಮಾಲೋಚನೆ ನಡೆಸಲಾಯಿತು. ಅವರು ಇದೊಂದು ಬಹಳ ಒಳ್ಳೆಯ ಕೆಲಸ,  ಎಲ್ಲಾ ಸಂಸದರೂ ಒಟ್ಟಾಗಿ ಶ್ರಮಿಸುವ ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಜಮೀನು ಮಂಜೂರು ಮಾಡಿಸಲು ನಡೆಸಿರುವ ಪತ್ರ ವ್ಯವಹಾರಗಳ ನಕಲುಗಳು.

2 ರಿಂದ 3 ಎಕರೆ ಜಮೀನು ಕೋರಿ ನಡೆದಿರುವ ಪತ್ರಗಳು

1.            26.07.2018 ರಂದು ನಿವಾಸಿ ಆಯಕ್ತರು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರ.

2.            11.09.2018 ರಂದು ಉಪ ನಿವಾಸಿ ಆಯಕ್ತರು ಡಿಡಿಎ ನಿರ್ದೇಶಕರಿಗೆ ಬರೆದ ಪತ್ರ.

3.            30.10.2018 ರಂದು ನಿವಾಸಿ ಆಯಕ್ತರಾದ ಶ್ರೀ ನಿಲಯ ಮಿತಾಶ್ ರವರು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಟಿ.ಎಂ.ವಿಜಯಭಾಸ್ಕರ್ ರವರಿಗೆ ಬರೆದ ಪತ್ರ.

4.            12.10.2020 ರಂದು ಎಂ.ವಿದ್ಯಾಶ್ರೀಯವರು, ಉಪಕಾರ್ಯದರ್ಶಿ ಕರ್ನಾಟಕ ವಿಧಾನಸಭೆ ಇವರು, ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂಧಿ ಮತ್ತು ಆಡಳಿತ ಸುಧಾರಣೆ ಇಲಾಖೆ ರವರಿಗೆ ಬರೆದ ಪತ್ರ.

5.            29.10.2020 ರಂದು ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂಧಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇವರಿಂದ ನಿವಾಸಿ ಆಯಕ್ತರಿಗೆ ಬರೆದಿರುವ ಪತ್ರ.

ಕರ್ನಾಟಕ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಮೀನು ಕೋರಿ ಬರೆದ ಪತ್ರಗಳು.

1.            08.08.2023   ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮನವಿ ಮೇರೆಗೆ ಲೋಕೊಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳೆರವರಿಗೆ  ಬರೆದ ಪತ್ರ

2.            08.08.2023   ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣವರಿಗೆ ಬರೆದ ಪತ್ರ.

3.            09.08.2023   ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮನವಿ ಮೇರೆಗೆ ದೆಹಲಿ  ನಿವಾಸಿ ಆಯಕ್ತರಾದ ಶ್ರೀಮತಿ ಎಂ.ಇಮ್ ಕೊಂಗ್ಲ ಜಮೀರ್ ರವರಿಗೆ ಬರೆದ ಪತ್ರ.

4.            09.08.2023  ರಂದು ನಿವಾಸಿ ಆಯಕ್ತರಾದ ಶ್ರೀಮತಿ ಎಂ.ಇಮ್ ಕೊಂಗ್ಲ ಜಮೀರ್ ರವರು ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ  ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ  ಬರೆದ ಪತ್ರ.

5.            09.08.2023  ರಂದು ನಿವಾಸಿ ಆಯಕ್ತರಾದ ಶ್ರೀಮತಿ ಎಂ.ಇಮ್ ಕೊಂಗ್ಲ ಜಮೀರ್ ರವರು ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ  ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಮಣಿವಣ್ಣನ್ ರವರಿಗೆ ಬರೆದ ಪತ್ರ.

6.            19.08.2023 ರಂದು ಲೋಕೊಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳೆರವರು ನಿವಾಸಿ ಆಯುಕ್ತರಿಗೆ ಬರೆದ ಪತ್ರ

7.            02.09.2023 ರಂದು ನಿವಾಸಿ ಆಯುಕ್ತರು ದೆಹಲಿಯ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಿಗೆ ಬರೆದ ಪತ್ರ.

8.            22.10.2024  ರಂದು ದೆಹಲಿ ಪ್ರತಿನಿಧಿಯವರಾದ ಶ್ರೀ ಟಿ.ಬಿ.ಜಯಚಂದ್ರವರ ವಿಶೇಷ ಆಸಕ್ತಿಯಿಂದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ದೆಹಲಿ ಲೆಪ್ಟಿನೆಂಟ್ ಗೌರ್ವನರ್ ರವರಾದ ಶ್ರೀ ವಿನಯ್ ಕುಮಾರ್ ಸಕ್ಷೇನರವರಿಗೆ  ಬರೆದಿರುವ ಪತ್ರ.

9.            30.10.2024 ರಂದು ದೆಹಲಿ ಲೆಪ್ಟಿನೆಂಟ್ ಗೌರ್ವನರ್ ರವರಾದ ಶ್ರೀ ವಿನಯ್ ಕುಮಾರ್ ಸಕ್ಷೇನರವರು, ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ ಬರೆದಿರುವ ಪತ್ರ.

ವಂದನೆಗಳೊಂದಿಗೆ                                              ತಮ್ಮ ವಿಶ್ವಾಸಿ

                                                         (ಕುಂದರನಹಳ್ಳಿ ರಮೇಶ್)