TUMAKURU:SHAKTHI PEETA FOUNDATION
ಕರ್ನಾಟಕ ರಾಜ್ಯ ಕೃಷಿ ಪ್ರಧಾನದ ಜೊತೆಗೆ ಸಂಪನ್ಮೂಲಗಳ ತವರು ಎಂದರೂ ತಪ್ಪಾಗಲಾರದು. ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುವ ವಿಫುಲ ಅವಕಾಶಗಳಿವೆ. ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು, ‘ವಿಕಸಿತ ಭಾರತ @ 2047’ ಮಂತ್ರ ಪಠಿಸಿದರೆ, ಮುಖ್ಯಮಂತ್ರಿಯವರಾಧ ಶ್ರೀ ಸಿದ್ಧರಾಮಯ್ಯನವರು ‘ಕರ್ನಾಟಕದ ಅಭಿವೃದ್ಧಿ ಮಾಡೆಲ್’ ಕನಸು ಕಾಣುತ್ತಿದ್ದಾರೆ, ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ಬದ್ಧರಾಗಿದ್ದಾರೆ.
ಈ ಮೂರು ಜನರ ಕನಸುಗಳು ‘ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಗಳಲ್ಲಿ ಜಾರಿಯಾಬೇಕು’. ಅದು ರಾಜ್ಯದಲ್ಲಿ ಹೆಚ್ಚು ಜನರಿರುವ ‘ಕೃಷಿಕರು ನೇತೃತ್ವ’ ವಹಿಸಬೇಕು, ಎಂಬುದು ನನ್ನ, ತುಮಕೂರಿನ ಮಾಜಿಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಮತ್ತು ಹಲವಾರು ಜ್ಞಾನಿಗಳ ತಪಸ್ಸು ಎಂದರೆ ತಪ್ಪಾಗಲಾರದು.
ನನ್ನ 37 ವರ್ಷಗಳ ಸುಧೀರ್ಘ ವಿಶ್ವದ 108 ಶಕ್ತಿಪೀಠಗಳ, ನೀರಾವರಿ ಮತ್ತು ಅಭಿವೃದ್ಧಿ, ಚಿಂತನೆಗಳ ಪರಿಪಕ್ವತೆಯ ಒಂದು ಕನಸಿನಿಂದ ‘ಶಕ್ತಿಪೀಠ ಕ್ಯಾಂಪಸ್ ಜನ್ಮ’ ತಾಳಿದೆ ಎಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಸಾವಿರಾರು ಜನರ ‘ಜ್ಞಾನದಾನದ ಸಹಭಾಗಿತ್ವ’ ಇದೆ. ನಾನೊಬ್ಬ ನೆಪ ಮಾತ್ರ ಅಷ್ಟೆ,
ಈ ಕ್ಯಾಂಪಸ್ ಬಹುವಿಧಗಳ ಸಂಗಮ, ಅದರಲ್ಲಿ ಎರಡು ಮಾತಿಲ್ಲ, ಕೇಳುವವರಿಗೆ ಇದೇನಪ್ಪಾ ಇಷ್ಟೊಂದು ಮಾಡಲು ಸಾದ್ಯವಾ ಎನ್ನುವವರೂ, ಮೂಗು ಮುರೆಯುವವರೇ ಜಾಸ್ತಿ, ಅದೇನೇ ಇದ್ದರೂ ನನ್ನ ಗುರಿ ‘ಕುದರೆಯ ಮಕೋಡ’ದಂತಿದೆ.
ನನ್ನ ಪರಿಕಲ್ಪನೆ ಅಷ್ಟು ಸುಲಭದ ಮಾತಲ್ಲ, ಅದೂ ನನಗೂ ಗೊತ್ತಿದೆ. ಆದರೂ ನಾನೊಬ್ಬ ಜಗಮಂಡ ಕೈಹಾಕಿದ ಕೆಲಸ ಎಷ್ಟೇ ಕಠಿಣವಾದರೂ ಜೀವ ಇರೂವರರೆಗೂ ಶ್ರಮಿಸುವ ಛಲ ಇದೆ. ‘ಒಂದು ಎಮ್ಮೆ ಒದ್ದರೆ-ಕರೆಯುವ ಎಮ್ಮೆ ನೂರಾರು’ ಉದ್ದೇಶಕ್ಕೆ ‘ಗುರಿ – ಗುರು’ ಸ್ಪಷ್ಠವಾಗಿರಬೇಕು.
ಕಳೆದ 10 ವರ್ಷದ ನನ್ನ ಕನಸಿನ ಶಕ್ತಿಪೀಠ ಕ್ಯಾಂಪಸ್ ಸಂಶೋಧನೆಯ ಹಂತದಲ್ಲಿಯೇ ಇದೆ. ಇನ್ನೂ ಕನಿಷ್ಟ 3 ವರ್ಷಗಳ ಕಾಲ ಸಂಶೋದನೆ ನಡೆಯಬೇಕಿದೆ. ಏಕೆಂದರೆ ನನ್ನ ಪರಿಕಲ್ಪನೆಯ ಶಕ್ತಿಪೀಠ ಕ್ಯಾಂಪಸ್, ‘ಕೇಂದ್ರ ಸರ್ಕಾರದ ಗೆಜಿಟ್‍ನಲ್ಲಿ ಪ್ರಕಟ’ ಆಗಬೇಕಿದೆ.
ನನ್ನದು ವರದಿಯ ಮೇಲಿನ ಸಂಶೋಧನೆಯಲ್ಲ. ಕಟ್ ಅಂಡ್ ಪೇಸ್ಟ್ ಸಂಶೋಧನೆಯೂ ಅಲ್ಲ. ಇದು ‘ಸಂಶೋಧನೆಯ ಲೈವ್ ಪ್ರಾಜೆಕ್ಟ್’ ಇಲ್ಲಿ ಒಂದೊಂದು ಗಿಡವೂ ಒಂದೊಂದು ಕಥೆ ಹೇಳಬೇಕು. ಒಂದೊಂದು ಸಾಮಾಗ್ರಿಯೂ ಒಂದೊಂದು ಇತಿಹಾಸ ಹೇಳಬೇಕು. ಎಲ್ಲವೂ ವಿಶಿಷ್ಠ, ಸರಳ, ಅದ್ಭುತವಾಗಿರ ಬೇಕು. ‘ನೇಚರ್ ಈಸ್ ಗಾಡ್’ ನಮ್ಮ ಕ್ಯಾಂಪಸ್ ಘೋಷವಾಕ್ಯ.
ಕರ್ನಾಟಕ ರಾಜ್ಯದಲ್ಲಿ ಜನ್ಮ ತಾಳಿರುವ 108 ಕೃಷಿ ಆಶ್ರಮಗಳ ಮಾಡೆಲ್ ಸಹ ಇಲ್ಲಿ ಇರಲಿದೆ. ಪ್ರತಿಯೊಂದು ಕೃಷಿ ಆಶ್ರಮದ ಜ್ಞಾನಿಗಳು, ಶಿಲ್ಪಿಗಳು ಸಹ ಕೈಜೋಡಿಸುತ್ತಿದ್ದಾರೆ. ಉದ್ದೇಶಿತ 1008 ಕೃಷಿ ಆಶ್ರಮಗಳ ಕನಸು, ನಂತರದ ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಯ ಕೃಷಿ ಆಶ್ರಮಗಳ ಕನಸಿಗೆ, ‘ನಂಬರ್ ಒನ್ ಕರ್ನಾಟಕ @ 2047’ ಗೆ ಬುನಾಧಿ ಹಾಕುವ ಕ್ಯಾಂಪಸ್ ಇದಾಗಬೇಕು ಎಂಬ ಹುಚ್ಚಾಟ ನನ್ನದಾಗಿದೆ.
ಇಂದು ವಿಜಯ ನಗರ ಜಿಲ್ಲೆಯ ಬೆಲವತ್ತ ಹಣ್ಣು ತಜ್ಞರಾದ ಶ್ರೀ ವಿಶ್ವೇಶ್ವರ ಸಜ್ಜನ್ ರವರು ಮತ್ತು ಚಿತ್ರದುರ್ಗ ಜಿಲ್ಲೆಯ ಶ್ರೀ ರವಿತೇಜರವರು ಶಕ್ತಿಪೀಠ ಕ್ಯಾಂಪಸ್ ಗೆ ಭೇಟಿ ನೀಡಿ, ಅವರ ಜ್ಞಾನದಾನದ ಮಜಲುಗಳನ್ನು ಹಂಚಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಅಮ್ಮನಘಟ್ಟದ ಶ್ರೀ ಮಹೇಶ್‍ರವರು, ಕೃಷಿ ಆಶ್ರಮಗಳ ತಜ್ಞರ ಭೇಟಿಗೆ ಮುನ್ನುಡಿ ಬರೆದರೆ, ಕೃಷಿ ಆಶ್ರಮಗಳ ತಜ್ಞರಾದ ಶ್ರೀ ಬಿ.ಎಮ್.ನಾಗಭೂಷಣ್ ಭೀಮಸಮುದ್ರರವರು, ಮಣ್ಣಿನ ತಜ್ಞರಾದ ಶ್ರೀ ಮಾರುತಿರಾವ್ ರವರು ಭೇಟಿ ನೀಡಿದ್ದರು.
ದಿನಾಂಕ:01.08.2025 ರ ವೇಳೆಗೆ ರಾಜ್ಯದ 108 ಕೃಷಿ ಆಶ್ರಮಗಳ ನೇತಾರರು ಆಗಮಿಸಿ, ತಮ್ಮ ಜ್ಞಾನದಾನ ಮಾಡಲು ಬಹಿರಂಗ ಮನವಿ. ಕೃತಿ ಮಾತನಾಡಬೇಕು ಇನ್ನೂ ಮುಂದೆ ಬರುವವರೆಲ್ಲಾ ತಮ್ಮ ತಮ್ಮ ಕೃಷಿ ಆಶ್ರಮದ ಆಯ್ಕೆಯ ಪ್ರಭೇದದ ಗಿಡ, ಬೀಜ, ಬಳ್ಳಿ, ಮಣ್ಣು ಮತ್ತು ನೀರು ತಂದು ಕ್ಯಾಂಪಸ್‍ನಲ್ಲಿ ಹಾಕಲು ಮನವಿ ಮಾಡಲಾಗಿದೆ.
ಭಾರತ ನಕ್ಷೆಯ ಗಡಿ ಕೆಲಸ ಆರಂಭವಾಗಿದೆ.


