16th June 2025
Share

ಭೂಮಿಯ ಮೇಲೆ ಸುಮಾರು ಒಂದು ಎಕರೆಯಲ್ಲಿ ನಿರ್ಮಾಣ ಮಾಡುವ ಭಾರತ ನಕ್ಷೆಗೆ, ಹಸಿರು ಚಪ್ಪರ ಹಾಕಲು ದಯವಿಟ್ಟು ಐಡಿಯಾ ಕೊಡಿ’  ಇಚ್ಚಿಸುವ ಅರ್ಹರು ಕೊಟೇಷನ್ ಸಹಿತ ಬನ್ನಿ’ . ಬುರುಡೆ ಹೊಡೆಯುವವರು, ಮೋಸ ಮಾಡುವವರು ಇತ್ತ ತಲೆ ಹಾಕಬೇಡಿ, ಸರ್ವೀಸ್ ಕಡ್ಡಾಯ. ಇಲ್ಲಿ  ಚೌಕಾಸಿ ವ್ಯಾಪಾರ ನಡೆಯಲ್ಲ, ಅಂತಿಮವಾಗಿ ಇಷ್ಟು ಹಣಕ್ಕೆ ಇಂತಹ ಕೆಲಸ ಮಾಡುತ್ತೇವೆ ಎಂಬ ನಿಖರವಾದ ಜ್ಞಾನ/ ಮಾಹಿತಿ ಅಗತ್ಯ.

ಭಾರತ ನಕ್ಷೆಯಲ್ಲಿ

1.            ವಿಶ್ವದ 108 ಶಕ್ತಿಪೀಠಗಳು

2.            12 ಜ್ಯೋತಿರ್ಲಿಂಗಗಳು

3.            3 ಸಾಯಿಬಾಬಾ

4.            ಇತರೆ ಸುಮಾರು 50 ಕ್ಕೂ ಹೆಚ್ಚು ಪ್ರವಾಸಿ ಕ್ಷೇತ್ರಗಳು

5.            ಕೇಂದ್ರ ಸರ್ಕಾರದ ಉದ್ದೇಶಿತ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆ ಬರಲಿದೆ.

ಶಕ್ತಿಪೀಠಗಳು ಇರುವ ವಿಶ್ವದ 9 ದೇಶಗಳ, ಭಾರತ ದೇಶದ 36 ರಾಜ್ಯಗಳು ಜನರು ಇಲ್ಲಿಗೆ ಬಂದು ಸಂಶೋಧನೆ ಬಗ್ಗೆ ಚರ್ಚೆ ನಡೆಸುವರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೋಕು, ಬಗ್ಗನಡು ಕಾವಲ್‍ನಲ್ಲಿರುವ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಬಿಸಿಲಿನ ಚಾಟಿ ಬೀಸುತ್ತದೆ. ಸಂಶೋಧನೆ ವೇಳೆಯಲ್ಲಿ ಬಿಸಿಲಿನಿ ತಾಪಕ್ಕೆ ನೆರಳೂ ಆಗಬೇಕು. ಕೃಷಿಯಲ್ಲಿ ಆದಾಯವೂ ಬರಬೇಕು.

1.            ಎಲ್ಲಾ ಜಾತಿಯ ಬಳ್ಳಿಗಳನ್ನು ಹಸಿರು ಚಪ್ಪರದಲ್ಲಿ ಹಬ್ಬಿಸಬೇಕು.

2.            ಸುಮಾರು 8 ಅಡಿ ಎತ್ತರವಿರಬೇಕು.

3.            ಹಸಿರು ಬಳ್ಳಿಗಳ ಬೆಳೆಗಳ ಮೌಲ್ಯವರ್ಧನೆ ಮಾಡಬೇಕು.

4.            ಪ್ರತಿಯೊಂದು ಬಳ್ಳಿಯಲ್ಲೂ ಆದಾಯ ಬರಬೇಕು.

5.            ಸಂಪೂರ್ಣವಾಗಿ ಸಾವಯವ ಕೃಷಿ ಆಗಬೇಕು.

6.            ಸಾವಯವ ಹಸಿರು ಎಲೆ ಔಷಧ ಸಿಂಪರಣೆ ಆಗಬೇಕು. ಅದಕ್ಕೂ ಅಗತ್ಯವಿರುವ ಗಿಡಗಳನ್ನು ಬಾರ್ಡರ್‍ನಲ್ಲಿ ಹಾಕಬೇಕು.

7.            ಸಾವಯವ ಗೊಬ್ಬರವನ್ನು ಇಲ್ಲೇ ಉತ್ಪತ್ತಿ ಮಾಡಿಕೊಳ್ಳಲು ಉಪಕರಣಗಳನ್ನು ಅಳವಡಿಸಬೇಕು.

8.            ಬಳ್ಳಿಗಳ ಬೆಳೆಯ ಮೌಲ್ಯವರ್ಧನೆ ಮಾಡುವ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಬೇಕು.

9.            ಬಳ್ಳಿಗಳ ಬೆಳೆಯ ಒಣಗಿಸಲು ಸೋಲಾರ್ ಡ್ರೈಯರ್ ಹಾಕಬೇಕು.

10.         ವೇದ ಕೃಷಿ ಅಳವಡಿಸಿಕೊಳ್ಳಬೇಕು.

11.         ಪಿರಮಿಡ್ ಕೃಷಿ ಅಳವಡಿಸಿಕೊಳ್ಳಬೇಕು.

12.         ಸೋಲಾರ್ ಲೈಟ್À ಸಹಿತ ನಾಮಫಲಕ ಅಳವಡಿಸಿಕೊಳ್ಳಬೇಕು.

13.         ಸಿಸಿ ಟೀವಿ ಕಣ್ಗಾವಲು ಇರಬೇಕು.

14.         ಬಳ್ಳಿಗಳ ಬೆಳವಣಿÀಗೆಗಳ ಸೆಟಿಲೈಟ್ ಸ್ಕಾನಿಂಗ್ ಪಲಿತಾಂಶದ ಆಧಾರದಲ್ಲಿ, ಕ್ಯಾಲೆಂಡರ್‍ಗೆ ಅನುಗುಣವಾಗಿ ಪ್ರಕ್ರೀಯೆಗಳು ನಡೆಯುತ್ತಿರಬೇಕು.

15.         ಪ್ರತಿಯೊಂದೂ ಲೈವ್ ಡಾಟಾ ಬೇಸ್ ಅಗಲಿದೆ.

16.         ವರ್ಕ್ ಪ್ರಮ್ ಗ್ರೀನ್ ಹೌಸ್ ಮಾಡೆಲ್ ಆಗಬೇಕು.

17.         ಮೈಕ್ರೋ ಇರ್ರಿಗೇಷನ್ ಇರಬೇಕು.

18.         ಎಲ್ಲಾ ಪ್ರಭೇಧಗಳ /ಜಾತಿಯ ಬಳ್ಳಿಗಳ ನರ್ಸರಿ ಆಗಬೇಕು.

19.         ಹೀಗೆ ಯಾರ್ಯಾರು ಏನೇನು ಐಡಿಯಾ ಕೊಡುತ್ತಿರೋ, ಸೂಕ್ತವಾಗಿದ್ದರೆ/ಸಾಧ್ಯವಾದರೆ ಎಲ್ಲವನ್ನೂ ಅಳವಡಿಸಿಕೊಳ್ಳುವ ಆಲೋಚನೆ ಇದೆ.

20.         ಇದೊಂದು ವಿಶಿಷ್ಟ ಮಾದರಿಯಂತಿರ ಬೇಕು.