26th June 2025
Share

TUMAKURU:SHAKTHIPEETA FOUNDATION

  ತುಮಕೂರು ನಗರದ, ಅನನ್ಯ ಕಾಲೇಜು ವಿದ್ಯಾರ್ಥಿಗಳಿಂದ ಪ್ರಪಂಚದಲ್ಲಿಯೇ ವಿನೂತನ ಕಾರ್ಯಕ್ರಮವನ್ನು ದಿನಾಂಕ:05.06.2025 ರಂದು ಆಚರಿಸುವ ವಿಶ್ವ ಪರಿಸರ ದಿನಾಚರಣೆಯಂದು ಹಮ್ಮಿಕೊಳ್ಳಲಾಗಿದೆ.

ರೈತರ ನೆರವಿಗೆ ಹೀಗೆ ಸಾಮೂಹಿಕವಾಗಿ 1000 ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು, ವಿಶೇಷವಾಗಿದೆ. ವಿಶ್ವ ದಾಖಲೆಗಳಲ್ಲಿ ಈ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೇ ಎಂಬ ಬಗ್ಗೆ ಅಧ್ಯಯನ ಆರಂಭವಾಗಿದೆ.

ದಿನಾಂಕ:03.06.2025 ರಂದು ಅನನ್ಯ ಕಾಲೇಜಿನ ಟ್ರಸ್ಟಿ ಶ್ರೀ ಹರೀಶ್‍ರವರು ಮತ್ತು ಉಪನ್ಯಾಸಕಿ ಶ್ರೀಮತಿ ಪ್ರಿಯಾರವರೊಂದಿಗೆ ಸಮಾಲೋಚನೆ ನಡೆಸಲಾಯಿತು.