TUMAKURU:SHAKTHIPEETA FOUNDATION
ಮಹಾರಾಷ್ಟçದ ಕನ್ನೇರಿ ಶ್ರೀಗಳ ನೇತೃತ್ವದಲ್ಲಿ, ಕರ್ನಾಟಕ ರಾಜ್ಯದ್ಯಾಂತ 108 ಕೃಷಿ ಆಶ್ರಮಗಳು ರಚನೆಯಾಗಿವೆ. 1008 ಕೃಷಿ ಆಶ್ರಮಗಳಿಗೆ ದಾಪುಗಾಲು ಇಟ್ಟಿವೆ. ಕೃಷಿ ತಜ್ಞ ದಿ.ನಾರಾಯಣ ರೆಡ್ಡಿಯವರ ತೋಟದಲ್ಲಿ ದಿನಾಂಕ:18.05.2025 ರಂದು ಸಭೆ ನಡೆಯಿತು.
ಆ ಸಭೆಯಲ್ಲಿ ಎಲ್ಲಾ ಕೃಷಿ ಆಶ್ರಮಗಳ ಡಿಜಿಟಲ್ ದಾಖಲೆ ಮಾಡಲು ನಿರ್ಣಯಕೈಗೊಳ್ಳಲಾಯಿತು. ಅದರಂತೆ ಕೃಷಿ ಆಶ್ರಮಗಳ ತಜ್ಞರಾದ ಶ್ರೀ ಬಿ.ಎಂ.ನಾಗಭೂಷಣ್ ರವರು ಗೂಗಲ್ ಫಾರಂ ಮೂಲಕ ಎಲ್ಲಾ ಕೃಷಿ ಆಶ್ರಮಗಳ ಮಾಹಿತಿ ಸಂಗ್ರಹ ಮಾಡುತ್ತಿರುವುದಕ್ಕೆ ಅವರಿಗೊಂದು ಶರಣು.
ಅದೇ ದಿನ ಮಣ್ಣು ತಜ್ಞರಾದ ಶ್ರೀ ಮಾರುತಿರಾವ್‌ರವರು ಮತ್ತು ತುಮಕೂರು ಸ್ಟಾರ್ಟ್ ಅಫ್‌ನ ಶ್ರೀ ಸುಹೃತ್ ಉಜ್ಜನಿಯವರು ರಾಜ್ಯದ 31 ಜಿಲ್ಲೆಗಳವಾರು, 224 ವಿಧಾನಸಭಾ ಕ್ಷೇತ್ರಗಳವಾರು ಎಲ್ಲೆಲ್ಲಿ ಕೃಷಿ ಆಶ್ರಮಗಳು ಇವೆ, ಎಲ್ಲಿ ಇಲ್ಲ ಎಂಬ ಮಾಹಿತಿಯನ್ನು ಒಂದು ವಾರದಲ್ಲಿ ಪಟ್ಟಿ ಮಾಡುವುದಾಗಿ ಒಪ್ಪಿಕೊಂಡಿದ್ದರು. ಈವರೆಗೂ ಮಾಹಿತಿ ಲಭ್ಯವಾಗಿಲ್ಲ. ಶೀಘ್ರದಲ್ಲಿ ಪಾರದರ್ಶಕವಾಗಿ ಪ್ರಕಟಿಸಲು ಮನವಿ.
ದಿನಾಂಕ:05.06.2025 ರಂದು ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ, ಅನನ್ಯ ವಿದ್ಯಾ ಸಂಸ್ಥೆಯವರು 1000 ವಿದ್ಯಾರ್ಥಿಗಳಿಂದ ಒಂದೊ0ದು ಪ್ರಭೇಧಗಳ ಗಿಡ/ಬಳ್ಳಿ/ಮರಗಳ ಪ್ರಭಂದ ಬರೆಯುವ ಉದ್ಘಾಟನಾ ಸಮಾರಂಭ ಆರ್.ಸಿ.ಬಿ ಪ್ರಕರಣದಿಂದ, ಅನನ್ಯ ಕಾಲೇಜಿನಿಂದ – ತುಮಕೂರು ವಿಶ್ವ ವಿದ್ಯಾನಿಲಯ ಸಿಟಿ ಕ್ಯಾಂಪಸ್‌ವರೆಗೂ ನಡೆಯ ಬೇಕಿದ್ದ ಪಾದಯಾತ್ರೆಗೆ ಪೋಲೀಸ್ ಅನುಮತಿ ರದ್ಧಾಯಿತು. ಆದ್ದರಿಂದ ಸಮಾರಂಭವನ್ನು ಮುಂದೂಡಲಾಗಿದೆ.
ಮು0ದಿನ ಸಮಾರಂಭ ನಡೆಯುವ ದಿವಸ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕೃಷಿ ಆಶ್ರಮಗಳು ಅಥವಾ ಕೃಷಿ ಆಶ್ರಮಗಳನ್ನು ಆರಂಭಿಸಲು ಶ್ರಮಿಸುವ ವಿಧಾನಸಭಾ ಕ್ಷೇತ್ರವಾರು ಸಂಚಾಲಕರು ಹಾಜರಿರುವ ಮೂಲಕ ಒಂದು ವಿಶಿಷ್ಟತೆ ಮೆರೆಯೋಣ. ಅನನ್ಯ ವಿದ್ಯಾಸಂಸ್ಥೆಯವರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದಿಸೋಣ.
ಮಾನ್ಯ ಪ್ರಧಾನ ಮಂತ್ರಿಯವರಿಗೆ ಮತ್ತು ಮಾನ್ಯ ಮುಖ್ಯ ಮಂತ್ರಿಯವರಿಗೆ ಸಲ್ಲಿಸುವ ಪ್ರಸ್ತಾವನೆಗೆ, 224 ವಿಧಾನಸಭಾ ಕ್ಷೇತ್ರದವರ ಸಹಿ ಅಗತ್ಯವಿದೆ. ಆದ್ದರಿಂದ ಶೀಘ್ರವಾಗಿ 224 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು, ಆಯಾ ಜಿಲ್ಲಾವಾರು ಕೃಷಿ ಆಶ್ರಮಗಳ ಪ್ರಮುಖರು, ಜಿಲ್ಲಾವಾರು ವಾಟ್ಸ್ಅಫ್ ಗ್ರೂಪ್ ಮಾಡಿಕೊಂಡು, ಯಾವ ವಿಧಾನಸಭಾ ಕ್ಷೇತ್ರವಾರು ಕೃಷಿ ಆಶ್ರಮಗಳು ಇಲ್ಲವೋ ಅಥಂಹ ಕಡೆ, ಸಂಚಾಲಕರನ್ನಾದರೂ ನೇಮಿಸಲು ಮುಂದಾಗ ಬೇಕಿದೆ.
ಅದೇ ರೀತಿ 1000 ವಿದ್ಯಾರ್ಥಿಗಳ ಸಹಿಯು ಅಗತ್ಯವಿದೆ. ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ವೆಂಕಟೇಶ್ವರಲು ರವರ ಅಧ್ಯಕ್ಷತೆಯಲ್ಲಿ, ಸಹಭಾಗಿತ್ವ ಪಡೆಯುವ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ರೂಪು ರೇಷೆ ನಿರ್ಧರಿಸಲಾಗುವುದು.
1008 ಕೃಷಿ ಆಶ್ರಮದ ವಾಟ್ಸ್ಅಫ್ ಗ್ರೂಪ್‌ನಲ್ಲಿ 438 ಜನ ಸದಸ್ಯರಿದ್ದಾರೆ. ಪ್ರತಿಯೊಬ್ಬರೂ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕೃಷಿ ಆಶ್ರಮಗಳ ರಚನೆ ಬಗ್ಗೆ ಸಹಕರಿಸಲು ಮನವಿ. ತಲಾ ಇಬ್ಬರು ರೈತರನ್ನು ಗ್ರೂಪ್‌ಗೆ ಸೇರಿಸುವ ಮೂಲಕ 1000 ರೈತರ ಗುಂಪಿನಲ್ಲಿ ಚರ್ಚೆ ನಡೆಯಲಿ. ಆಸಕ್ತರು ಕೃಷಿ ಆಶ್ರಮಗಳನ್ನು ಆರಂಭಿಸಲು ಪ್ರೇರಣೆಯಾಗಲಿದೆ.