TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ, ಶಿರಾ ತಾಲ್ಲೋಕಿನ ಹೊನ್ನ ಗೊಂಡನಹಳ್ಳಿಯಲ್ಲಿ ಶ್ರೀ ಲಕ್ಷ್ಮಿಕಾಂತಪ್ಪನವರು ಮತ್ತು ಅವರ ಪುತ್ರ ಚಿ. ಸಾಗರ್ ರವರು ಆರಂಭಿಸಿತ್ತಿರುವ ‘ಸಾಕು ಪ್ರಾಣಿಗಳ ಲೋಕ’ ಉದ್ಘಾಟನೆಯ ಸಮಯದಲ್ಲಿ. ‘ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಮಾವೇಶ’ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ದಿನಾಂಕ:22.06.2025 ರಂದು, ಬೆಳಿಗ್ಗೆ 10 ಗಂಟೆಯಿಂದ ತುಮಕೂರಿನ ಶಕ್ತಿಭವನದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು.
ಧನ್ವಂತರಿ ಸಸ್ಯ ಕಾಶಿಯಲ್ಲಿ ಎಷ್ಟು ಜಾತೀಯ ಗಿಡಗಳನ್ನು ಹಾಕಿದ್ದಾರೆ ಎಂಬ ಬಗ್ಗೆ ಡಿಜಿಟಲ್ ಸಮೀಕ್ಷೆ ನಡೆಸಬೇಕಿದೆ. ನನಗೆ ಸಿಕ್ಕಿದ ಎಲ್ಲಾ ಜಾತೀಯ ಗಿಡಗಳನ್ನು ತಂದು ಹಾಕುತ್ತಲೇ ಇದ್ದೇನೆ. ವರ್ಷ ಪೂರ್ತಿ ಹಣ್ಣುಗಳನ್ನು ಮರದಿಂದ ಕಿತ್ತು ತಿನ್ನ ಬೇಕು, ತಿನ್ನಲು ಅನೂಕೂಲವಾಗುವ ಎಲ್ಲಾ ಜಾತೀಯ ದೇಶಿ ಪ್ರಾಣಿಗಳು, ಹತ್ತಾರು ವಿಧದ ಸೊಪ್ಪುಗಳನ್ನು ಪ್ರತಿ ನಿತ್ಯ ನಾನು ತಿನ್ನಬೇಕು ಇಲ್ಲಿಗೆ ಬರುವವರಿಗೂ ತಿನ್ನಿಸಬೇಕು ಎನ್ನುತ್ತಾರೆ, ಮಾಲೀಕರಾದ ಶ್ರೀ ಲಕ್ಷ್ಮಿಕಾಂತಪ್ಪನವರು ಮತ್ತು ಅವರ ಪುತ್ರ ಚಿ. ಸಾಗರ್‍ರವರು.
ಶ್ರೀ ಲಕ್ಷ್ಮಿಕಾಂತಪ್ಪನವರು ‘ಪಾಪಸ್ಸು ಕಳ್ಳಿ’ ಸಂಶೋಧನೆ, ಮ್ಯೂಸಿಯಂ ಮತ್ತು ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಮುಂದಾಗಿದ್ದಾರೆ. ಈಗಾಗಲೇ ಸುಮಾರು 10 ವಿಧದ ಪಾಪಸ್ಸು ಕಳ್ಳಿ ಹುಡುಕಿ ತಂದು ಅವರ ಜಮೀನಿನಲ್ಲಿ ಹಾಕಲು ಸಿದ್ಧತೆ ನಡೆಸಿದ್ದಾರೆ.
ಎಷ್ಟು ಜಾತೀಯ ಸಾಕು ಪ್ರಾಣಿಗಳನ್ನು ಸಾಕಲು ಸಾಧ್ಯವೋ ಅಷ್ಟು ಸಾಕಲು ಸಿದ್ಧತೆ ನಡೆಯುತ್ತಿದೆ. ಒಂದು ಹಳ್ಳಿಯಲ್ಲಿ ವಿಶಿಷ್ಟವಾದ ಆಲೋಚನೆಗಳೊಂದಿಗೆ ಕೃಷಿ ಆಶ್ರಮ ನಿರ್ಮಾಣ ಮಾಡುತ್ತಿದ್ದಾರೆ. 2025 ನೇ ನವಂಬರ್ ತಿಂಗಳಿನಲ್ಲಿ ಲೋಕಾರ್ಪಣೆ ಮಾಡಲು ನಿರ್ಧಿಷ್ಠ ಗುರಿಹಾಕಿಕೊಂಡಿದ್ದಾರೆ.
ಈ ವೇಳೆಗೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕನಿಷ್ಠ ಒಂದೊಂದು ಕೃಷಿ ಆಶ್ರಮ ಸ್ಥಾಪನೆ ಮಾಡುವವರನ್ನು ಗುರುತಿಸಿ, ರಾಜ್ಯ ಮಟ್ಟದ ಕೃಷಿ ಆಶ್ರಮ ಸಮಾವೇಶ ನಡೆಸುವುದು ಸೂಕ್ತವಾಗಿದೆ. ಈ ಬಗ್ಗೆ 31 ಜಿಲ್ಲೆಗಳ ಕೃಷಿ ಆಶ್ರಮಗಳ ಸಂಘಟನೆ ಹೊಣೆಗಾರಿಕೆ ಪಡೆದಿರುವವರು ಸಭೆಗೆ ಹಾಜರಾಗಿ ಸ್ಪಷ್ಠ ಮಾಹಿತಿ ಹಂಚಿಕೊಳ್ಳಬೇಕು. ಒಂದು ವೇಳೆ ಸಭೆಗೆ ಬರಲು ಸಾದ್ಯಾವಾಗದೇ ಇದ್ದಲ್ಲಿ ಲಿಖಿತವಾಗಿ ಮಾಹಿತಿ ಕಳುಹಿಸಲು, ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರು ತಿಳಿಸಿದ್ದಾರೆ.
ನಾನಂತೂ ಭೇಟಿ ನೀಡಿ ಹತ್ತಾರು ಜಾತೀಯ ಹಣ್ಣುಗಳನ್ನು ಮರದಿಂದ ಕಿತ್ತು ತಿಂದಿದ್ದೇನೆ ಹಾಗೂ 14 ವಿದದ ಸೊಪ್ಪಿನ ಸಾರಿನಲ್ಲೂ ಊಟ ಮಾಡಿ ಬಂದಿದ್ದೇನೆ. ಆಸಕ್ತರು ಸಂಪರ್ಕಿಸಿ ಶ್ರೀ ಲಕ್ಷ್ಮಿಕಾಂತಪ್ಪನವರು -6363918497/9844598705