14th July 2025
Share

TUMAKURU:SHAKTHI PEETA FOUNDATION

  ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿ(ಪಿಜೆಸಿ) ಯ ಪಂಚವಟಿ ಗಿಡದ ಮುಂಭಾಗ, ನಾಮಫಲಕದೊಂದಿಗೆ ಸೋಲಾರ್ ಲೈಟ್ ಸಂಶೋಧನೆಯ ಪ್ರಾತ್ಯಾಕ್ಷಿಕೆಯನ್ನು, ಪಿಜೆಸಿ ನಿವಾಸಿಗಳ ಜ್ಞಾನಿಗಳ ಮಾರ್ಗದರ್ಶನ, ಸಲಹೆ ಪಡೆಯಲು ವಿಶೇಷ ಪೂಜೆಯೊಂದಿಗೆ ಸ್ಥಾಪಿಸಲಾಗುತ್ತಿರುವ ಹಿನ್ನೆಯಲ್ಲಿ, ಪಿಜೆಸಿ ನಿವಾಸಿ, 5 ಎಸ್ ಕೃಷಿ ಆಶ್ರಮದ ನೇತಾರ, ಮಾರುತಿ ಕಾಂಪೋನೆಟ್ ಆಟೋಮೊಬೈಲ್ಸ್ ಮಾಲೀಕ ಹಾಗೂ ಸಂಶೋಧಕ ಶ್ರೀ ಸಿದ್ದಗಂಗಪ್ಪನವರ ಕುಟುಂಬ, ಪಿಜೆಸಿ ನಿವಾಸಿಗಳಿಗೆ ದಿನಾಂಕ:24.06.2025 ರಂದು ಬೆಳಿಗ್ಗೆ 6.30 ಗಂಟೆಗೆ ಪೂಜೆಗೆ ಬರಲು ಹೃದಯ ಪೂರ್ವಕ ಮನವಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕು, ಬಗ್ಗನಡು ಕಾವಲ್‌ನಲ್ಲಿ ನಿರ್ಮಾಣವಾಗುತ್ತಿರುವ ಲೈವ್ ಪ್ರಾಜೆಕ್ಟ್ ಶಕ್ತಿಫೀಠ ಕ್ಯಾಂಪಸ್‌ನಲ್ಲಿ, ವಿಶ್ವದ 108 ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆಗಳಿಗೆ, ನಾಮಫಲಕದೊಂದಿಗೆ ಸೋಲಾರ್ ಲೈಟ್ ಹಾಕಲು, ಕಳೆದ 15 ದಿನಗಳಿಂದ ಅವರ ತಂಡ ಸಂಶೋಧನೆಗೆ ಶ್ರಮಿಸಿದೆ.

ಪಿಜೆಯಲ್ಲಿ ಮುಂಜಾನೆ ಗೆಳೆಯ ಬಳಗದ ಒಂದು ತಂಡವಿದೆ. ಈ ತಂಡ ಜ್ಞಾನಿಗಳ ಸಂಗಮ ಎಂದರೆ ತಪ್ಪಾಗಲಾರದು. ಅವರು ವಾಕ್ ಹೊರಟರು ಎಂದರೆ ಪಿಜೆಸಿಯೇ ನಡುಗಿಂತಾಗುತ್ತಾಗುತ್ತದೆ. ಪ್ರತಿ ದಿವಸ ಅವರೆಲ್ಲಾ ಕ್ಯಾಂಟೀನ್‌ನಲ್ಲಿ ಕುಳಿತು ಕಾಫಿ ಹೀರುವ ಸಮಯದಲ್ಲಿ ದೇಶದ/ಸಮಾಜದ ಹಾಗುಹೋಗಗಳ ಬಗ್ಗೆ ಚರ್ಚೆ ಮಾಡುವ ತಾಣದಂತಿದೆ. ಅವರ ಸಲಹೆ ಮೇರೆಗೆ ಸ್ಥಾಪನೆ ಮಾಡಲಾಗುತ್ತಿದೆ.

3571 ಪ್ಲಾಟ್ ಇರುವ ಈ ಅಪಾರ್ಟ್ಮೆಂಟ್‌ನಲ್ಲಿ,  ಭಾರತ ದೇಶದ 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ, ಕರ್ನಾಟಕ ರಾಜ್ಯದ 31 ಜಿಲ್ಲೆಗಳ, ವಿಶ್ವದ 7 ದೇಶಗಳ ಜನರು ವಾಸವಿದ್ದಾರಂತೆ,. ಇದೇ ಸಿದ್ದಗಂಗಪ್ಪನವರು ಅಪೂರ್ಣ ಡಾಟಾ ಬೇಸ್ ಮಾಡಿದ್ದರು.

ಶಕ್ತಿಪೀಠಗಳ ಸಂಶೋಧನೆ ಮಾಡುತ್ತಿರುವ ಶಕ್ತಿಪೀಠ ಫೌಂಡೇಷನ್  ಉದ್ದೇಶ, ವಿವಿಧ ದೇಶÀಗಳಲ್ಲಿ ಮತ್ತು ವಿವಿಧ ರಾಜ್ಯಗಳಲ್ಲಿ ಇರುವ ಶಕ್ತಿಪೀಠಗಳ ಪಕ್ಕಾ ಮಾಹಿತಿ ಸಂಗ್ರಹಿಸಲು, ರಾಜ್ಯವಾರು ಶಕ್ತಿಪೀಠಗಳ ಆರಾಧಕರ ಸಹಕಾರದ ಅಗತ್ಯವಿದೆ. ಆದ್ದರಿಂದ ಇಲ್ಲಿ ಹಾಕುವ ಮೂಲಕ ಮಾಹಿತಿ ಸಂಗ್ರಹಿಸಲು ಹಾಗೂ ಉತ್ತಮ ಗುಣಮಟ್ಟದಲ್ಲಿ ಪ್ರಾತ್ಯಾಕ್ಷಿಕೆ ಸಿದ್ಧಪಡಿಸಲು ಜ್ಞಾನಿಗಳ ಮಾರ್ಗದರ್ಶನವೂ ಅನೂಕೂಲವಾಗಲಿದೆ.

ಸಿದ್ಧಗಂಗಪ್ಪನವರ ಕುಟುಂಬಕ್ಕೂ, ನಮ್ಮೂರು ಕುಂದರನಹಳ್ಳಿ ಗಂಗಮಲ್ಲಮ್ಮ ದೇವಿಯ ಮೂಲ ದೇವರು ಮನೆದೇವರಂತೆ, ಯಾವುದೋ ಕಾಲದಲ್ಲಿ ಯಾರೋ ಪುಣ್ಯಾತ್ಮರೂ ನಮ್ಮೂರಿಗೆ ತಂದು ಇಟ್ಟಿದ್ದಾರಂತೆ, ಇದರ ಇತಿಹಾಸವೂ ಸಂಗ್ರಹವಾಗುತ್ತಿದೆ.

 ನಾನು ಪಿಜೆಸಿಗೆ ವಾಸಕ್ಕೆ ಬಂದಾಗ, 2022 ರ ಅಕ್ಟೋಬರ್ ನಲ್ಲಿ ಪಂಚವಟಿ ಗಿಡಗಳನ್ನು ಸಹ ಶಕ್ತಿಪೀಠ ಕ್ಯಾಂಪಸ್‌ನಿAದ ತಂದು, ಪಾರಂಪರಿಕ ವೈಧ್ಯ ಶ್ರೀ ಗುರುಸಿದ್ಧರಾಧ್ಯವರ ಮಾರ್ಗದರ್ಶನಲ್ಲಿ ಹಾಕಿದಾಗ ಪಿಜೆಸಿ ನಿವಾಸಿಗಳ ನೇತೃತ್ವದಲ್ಲಿ ಹಾಕುವ ಸಮಯದಲ್ಲೂ ಸಿದ್ಧಗಂಗಪ್ಪನವರ ಸಹಕಾರ ಇತ್ತು.  ಈ ಗಿಡಗಳು ಬಹಳ ಚೆನ್ನಾಗಿ ಬೆಳೆಯುತ್ತಿವೆ. ಇಲ್ಲಿ ನಡೆಯವ ಕಾರ್ಯಕ್ರಮಗಳು ಮುಂದೊAದು ದಿನ ಇತಿಹಾಸ ಪುಟ ಸೇರಲಿದೆ.

ಕರ್ನಾಟಕ ರಾಜ್ಯದ 31 ಜಿಲ್ಲೆಗಳ ಸುಮಾರು 30000 ಸಾವಿರ ಗ್ರಾಮಗಳು ಮತ್ತು ಬಡಾವಣೆಗಳಲ್ಲಿ ಪಂಚವಟಿ ಗಿಡಹಾಕಲು, 1008 ಕೃಷಿ ಆಶ್ರಮಗಳು ಚಿಂತನೆ ಆರಂಭಿಸಿವೆ, ಪಿಜೆಸಿಯ 3571 ಪ್ಲಾಟ್‌ಗಳ ಮಾಲೀಕರು/ನಿವಾಸಿಗಳು ತಲಾ 9 ಗ್ರಾಮ/ಬಡಾವಣೆಗಳಲ್ಲಿ, ಬಡ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ, ಅವರಿಗೆ ನೀಡ್ ಬೇಸ್ಡ್ ಸಹಾಯ ಮಾಡುವ ಮೂಲಕ, 5 ವರ್ಷ ನಿರ್ವಹಣೆಯೊಂದಿಗೆ ಪಂಚವಟಿ ಗಿಡ ಹಾಕಿ ವಿಶ್ವ ದಾಖಲೆ ಮಾಡುವ ಚಿಂತನೆ ಮೊಳಕೆಯೊಡಿಯುತ್ತಿದೆ.

ವಾರ್ಷಿಕ ಒಂದು ಸ್ಥಳದ ಗಿಡಕ್ಕೆ ರೂ 500 ರಿಂದ 1000 ಗಳ ಆರ್ಥಿಕ ನೆರವನ್ನು ನೇರವಾಗಿ ಬಡ ಅರ್ಹ ವಿದ್ಯಾರ್ಥಿಗಳಿಗೆ 5 ವರ್ಷ, ಗಿಡಗಳು ಬದುಕಿರುವ ಆಧಾರದಲ್ಲಿ, ಡಿಬಿಟಿ ಮಾಡುವ ಮೂಲಕ ಒಂದು ದಾಖಲೆ ನಿರ್ಮಿಸಬಹುದಾಗಿದೆ.

 ಶೇ 100 ರಷ್ಟು ಪರಿಸರ  ಜ್ಞಾನಿಗಳು, ದಾನಿಗಳು ಇಲ್ಲಿ ಇರುವುದರಿಂದ  ಯೋಜನೆಗೆ ಚಾಲನೆ ದೊರೆಯುವ ಆಶಾ ಭಾವನೆ ನಮ್ಮದಾಗಿದೆ. ಬಹಳಷ್ಟು ಜನ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ಅಸೋಷಿಯೇನ್ ನಲ್ಲಿ ಚರ್ಚೆ ಆಗುವುದು ಅಗತ್ಯವಿದೆ. ಈಗಾಗಲೇ ಪಿಜೆಸಿಯ ಒಂದು ತಂಡ, ತುಮಕೂರು ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಅನೇಕ ಕೊಡುಗೆಗಳನ್ನು ದಾನ ಮಾಡಿದೆ.

ಕೃಷಿ ಆಶ್ರಮಗಳು ತಿಂಗಳಲ್ಲಿ ಒಂದು ದಿನ ಅಥವಾ ವಾರಕ್ಕೆ ಒಂದು ದಿನ, ಪಿಜೆಸಿಯಲ್ಲಿ ಸಾವಯವ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು, ನೇರವಾಗಿ ರೈತರಿಂದ ಇಲ್ಲಿನ ನಿವಾಸಿಗಳಿಗೆ ಮಾರಾಟ ಮಾಡಲು ಪಿಜೆಸಿ ಅಸೋಶಿಯೇಷನ್ ಅನುಮತಿ ಕೇಳಲು ಚರ್ಚೆ ಮಾಡಿವೆ.

ಪಿಜೆಸಿ ನಿವಾಸಿಗಳೇ ಪೂಜೆಗೆ ದಯವಿಟ್ಟು ಬನ್ನಿ,