ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ, ಕೊಡಗು ಮತ್ತು ಯಾದಗಿರಿ ಜಿಲ್ಲೆ ಹೊರತು ಪಡಿಸಿ, 28 ಜಿಲ್ಲೆಗಳ 129 ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಆಶ್ರಮಗಳನ್ನು ಸ್ಥಾಪಿಸಲು ಕೃಷಿಕರು ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ. ಇನ್ನೂ 95 ಕ್ಷೇತ್ರಗಳಲ್ಲಿ ಕೃಷಿ ಆಶ್ರಮಗಳ ಸ್ಥಾಪನೆ ಮಾಡುವವರನ್ನು ಗುರುತಿಸುವ ಕೆಲಸ ಆಗಬೇಕಿದೆ.
ದಿನಾಂಕ:22.06.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆದ ಸಭೆಯಲ್ಲಿ, ಕೆಳಕಂಡ ನಿರ್ಣಯ ಮಾಡುವ ಜೊತೆಗೆ 344 ಕ್ಷೇತ್ರದ ವ್ಯಾಪ್ತಿಗೆ ಕೃಷಿ ಆಶ್ರಮಗಳನ್ನು ಸಂಘಟನೆ ಮಾಡಲು ಸಂಚಾಲಕರಿಗೆ ಹೊಣೆಗಾರಿಕೆ ನೀಡಲು ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್‍ರವರು ಮತ್ತು ಅವರ ತಂಡಕ್ಕೆ ಸಂಪೂರ್ಣ ಜವಾಬ್ಧಾರಿ ನೀಡಲಾಯಿತು.

ಆರಂಭದಿಂದ ಶ್ರಮಿಸಿರುವ, ಒಂದು ವೇಳೆ ಸಂಘಟನೆಯಿಂದ ವಿವಿಧ ಕಾರಣಗಳಿಗೆ ದೂರವಿರುವವರೊಂದಿಗೂ ಮಾತನಾಡಿ, ಎಲ್ಲರಿಗೂ ಹೊಣೆಗಾರಿಕೆ ನೀಡಲು ನಿರ್ಣಯ ಮಾಡಲಾಯಿತು. 344 ಕೃಷಿ ಆಶ್ರಮಗಳಿಗೆ ಹೊಣೆಗಾರಿಕೆ ನೀಡಲು ಅಗತ್ಯ ಬಿದ್ದಲ್ಲಿ ಪ್ರವಾಸ ಮಾಡಲು ನಿರ್ಣಯ ಮಾಡಲಾಯಿತು.
ಆದ್ದರಿಂದ ಜಿಲ್ಲಾವಾರು ಕೃಷಿ ಆಶ್ರಮಗಳ ಸಂಘಟನೆ ಹೊಣೆಗಾರಿಕೆ ಪಡೆದು ಕೊಂಡವರು, ಅವರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ ಪಕ್ಷ ವಿಧಾನಸಭಾ ಕ್ಷೇತ್ರವಾರು 2 ಕೃಷಿ ಆಶ್ರಮಗಳ ಆಸಕ್ತರನ್ನು ಗುರುತಿಸಲು ನಿರ್ಣಯ ಮಾಡಲಾಯಿತು.
ಕೊಡಗು ಮತ್ತು ಯಾದಗಿರಿ ಜಿಲ್ಲೆಗಳ ಅಕ್ಕ-ಪಕ್ಕದ ಜಿಲ್ಲೆಗಳ ಕೃಷಿ ಆಶ್ರಮಗಳ ಹೊಣೆಗಾರಿಕೆ ಪಡೆದುಕೊಂಡಿರುವವರು, ಈ ಎರಡು ಜಿಲ್ಲೆಗಳ ಆಸಕ್ತರನ್ನು ಗುರುತಿಸಲು ಹೋಣೆಗಾರಿಕೆ ನೀಡಲು ನಿರ್ಣಯ ಮಾಡಲಾಯಿತು.
‘ನಂಬರ್ ಒನ್ ಕರ್ನಾಟಕ @ 2047’ ಕನಸು ಕಾಣಬೇಕಾದರೆ, ಈ ಕೆಳಕಂಡ ರಾಜ್ಯದ ಪ್ರಮುಖ 344 ಚುನಾಯಿತ ಜನಪ್ರತಿನಿಧಿಗಳ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ಬಗ್ಗೆ ಬೆಳಕು ಚೆಲ್ಲುವುದು ಅಗತ್ಯವಾಗಿದೆ. ಕೃಷಿ ಆಶ್ರಮಗಳು ಈ ಬಗ್ಗೆ ವಿಶೇಷ ಗಮನ ಹರಿsಸಲು ನಿರ್ಣಯ ಮಾಡಲಾಯಿತು.
1. ರಾಜ್ಯದ 28 ಲೋಕಸಭಾ ಸದಸ್ಯರು.
2. 12 +2= 14 ರಾಜ್ಯಸಭಾ ಸದಸ್ಯರು.
3. 224+1=225 ವಿಧಾನಸಭಾ ಸದಸ್ಯರು.
4. 75 ವಿಧಾನಪರಿಷತ್ ಸದಸ್ಯರು.
5. 2 ದೆಹಲಿ ವಿಶೇಷ ಪ್ರತಿನಿಧಿಯವರು.
ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳಲ್ಲಿ 344 ಕೃಷಿ ಆಶ್ರಮಗಳು, ಮೇಲ್ಕಂಡ ಚುನಾಯಿತ ಮತ್ತು ನಾಮನಿರ್ದೇಶನ ಜನಪ್ರತಿನಿಧಿಗಳ ಅವರವರ ಕಾರ್ಯ ವ್ಯಾಪ್ತಿಯ, ಸ್ವಾತಂತ್ರ್ಯಕ್ಕೆ ಮೊದಲು, 1947 ರಿಂದ 2025 ರವರೆಗೂ ಆಗಿರುವ ಯೋಜನೆಗಳು, 2025 ರಿಂದ 2047 ರವರೆಗೂ ಆಗಬೇಕಿರುವ ಯೋಜನೆಗಳ ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್ @ 2047 (ಫಿಸಿಕಲ್ + ಡಿಜಿಟಲ್ + ಹ್ಯೂಮನ್ ಲೈಬ್ರರಿ) ತೆರೆಯಲು ಮುಂದೆ ಬಂದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಿ.ಎಸ್.ಆರ್ ಫಂಡ್, ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಅಥವಾ ದಾನಿಗಳಿಂದ ನಿಯಮ ಪ್ರಕಾರ ದೊರೆಯುವ ಅನುದಾನವನ್ನು ಮಂಜೂರು ಮಾಡಿಸಲು ಶ್ರಮಿಸಲು ನಿರ್ಣಯ ಮಾಡಲಾಯಿತು.
ಆಸಕ್ತ ಪ್ರತಿಯೊಂದು ಕೃಷಿ ಆಶ್ರಮವೂ ಹೊಣೆಗಾರಿಕೆ ಪಡೆಯ ಬಹುದು ಅಥವಾ ಅಂತಹ ವ್ಯಕ್ತಿಗಳನ್ನು ಗುರುತಿಸುವ ಹೊಣೆಗಾರಿಕೆ ನೀಡಲು ನಿರ್ಣಯ ಮಾಡಲಾಯಿತು.
1. ಒಬ್ಬ ಜನಪ್ರನಿಧಿ ವ್ಯಾಪ್ತಿಯ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಪಿ.ಹೆಚ್.ಡಿ ಮಾಡುವವರನ್ನು ಗುರುತಿಸುವುದು.
2. ಒಂದು ನಿರ್ಧಿಷ್ಟ ಬೆಳೆ ಮೌಲ್ಯವರ್ಧಿತ ಉತ್ಪನ್ನಗಳ ಸ್ಟಾಟ್ ಅಫ್ ಮಾಡುವವರನ್ನು ಗುರುತಿಸುವುದು.
3. ರಾಜ್ಯದ 7 ನದಿ ಪಾತ್ರಗಳಲ್ಲಿ ಹುಟ್ಟುವ 313 ನದಿಗಳಲ್ಲಿ ಒಂದು ನದಿ ಪ್ರಾತ್ಯಾಕ್ಷಿಕೆ ಅಧ್ಯಯನ ಮಾಡುವವರನ್ನು ಗುರುತಿಸುವುದು.
4. ಎನ್.ಆರ್.ಐ ಗಳ ಸಹಭಾಗಿತ್ವದಲ್ಲಿ, ವಿಶ್ವದ ಯಾವುದಾದರೊಂದು ದೇಶ ಅಥವಾ ಭಾರತ ದೇಶದ ಯಾವುದಾದರೊಂದು ರಾಜ್ಯದ ಸಾವಯವ ಉತ್ಪನ್ನಗಳ ವ್ಯಾಪಾರ, ಸಂಸ್ಕøತಿ, ಅಭಿವೃದ್ಧಿ ಅಧ್ಯಯನ ಮಾಡುವವರನ್ನು ಗುರುತಿಸುವುದು.
5. ಅವರ ವ್ಯಾಪ್ತಿಯ ಪ್ರತಿಯೊಂದು ವ್ಯಾಪ್ತಿಯ ಗ್ರಾಮ/ಬಡಾವಣೆ ವ್ಯಾಪ್ತಿಯಲ್ಲಿ ಅಗತ್ಯವಿರುವ ಡಾಟಾ ಸಂಗ್ರಹಿಸಲು ಡಾಟಾ ಮಿತ್ರರನ್ನು ಗುರುತಿಸುವುದು.
ಅಗತ್ಯವಿರುವ ತರಭೇತಿ, ಪ್ರತಿ ತಿಂಗಳು ಕೈಗೊಳ್ಳಬೇಕಾದ ಯೋಜನೆಗಳು/ಕಾರ್ಯಕ್ರಮದ ಬಗ್ಗೆ ನಿರಂತರವಾಗಿ ರಾಜ್ಯ ಮಟ್ಟದ ಸಮಿತಿ ವತಿಯಿಂದ ಸಲಹೆ, ಮಾರ್ಗದರ್ಶನ ನೀಡಲು ನಿರ್ಣಯ ಮಾಡಲಾಯಿತು.
ಇವು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇರಲಿವೆ, ಕೃಷಿ ಆಶ್ರಮದ ಜಮೀನಿನಲ್ಲಿ ಕನಿಷ್ಟ 50 ಅಡಿ ಅಗಲ, 50 ಅಡಿ ಉದ್ದದ ಸುಮಾರು 2500 ಚದುರ ಅಡಿ ನಿವೇಶನ/ಜಮೀನನ್ನು ಸರ್ಕಾರದ ನಿಯಾಮುನುಸಾರ ಅಗ್ರಿಮೆಂಟ್ ಮಾಡಿಕೊಡುವುದು ಅಥವಾ ಸರ್ಕಾರದ ಜಮೀನು ಇದ್ದರೂ ಗುರುತಿಸಿ ಮಾಹಿತಿ ನೀಡಲು ನಿರ್ಣಯ ಮಾಡಲಾಯಿತು.
‘ಕೃಷಿ ಆಶ್ರಮಗಳ, ಅಗ್ರಿ ಟೂರಿಸಂ ಯೋಜನೆಯಡಿಯಲ್ಲಿ, ಇದು ಒಂದು ಚಟುವಟಿಕೆ, ಆಯಾ ವ್ಯಾಪ್ತಿಯ ಪ್ರತಿಯೊಂದು ಗ್ರಾಮ/ಬಡಾವಣೆಯ ಕನಿಷ್ಟ ಒಬ್ಬ ವ್ಯಕ್ತಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಬೇಕು’.
ಬೆಳೆ, ನದಿ, ದೇಶ, ರಾಜ್ಯ ಜನಪ್ರತಿನಿಧಿಗಳ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಯೋಜನೆಗಳ ಸಂಶೋಧನೆ, ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್ @ 2047 ಕ್ಕೆ ರಚಿಸುವ ಸಲಹಾ ಸಮಿತಿಗೆ ಆಯಾ ಜನಪ್ರತಿನಿಧಿಗಳೇ ಅವರವರ ಅವಧಿ ಇರುವವರೆಗೂ ಅಧ್ಯಕ್ಷರಾಗಿರುತ್ತಾರೆ.
ಅವಧಿ ನಂತರ ಬಂದವರು ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಆಯಾ ಕೇತ್ರದ ಎಲ್ಲಾ ಮಾಜಿ ಸದಸ್ಯರು ಸಲಹಾ ಸಮಿತಿಯ ಸದಸ್ಯರಾಗಿರುತ್ತಾರೆ. ಇವರ ಜೊತೆಗೆ ಆಯಾ ವ್ಯಾಪ್ತಿಯಲ್ಲಿನ ಸಮಿತಿಗಳಿಗೆ, ಸರ್ವಪಕ್ಷಗಳ ರಾಜ್ಯ ಅಧ್ಯಕ್ಷರು ನೇಮಿಸುವ ಒಬ್ಬ ಪ್ರತಿನಿಧಿ ಸದಸ್ಯರಾಗಿರುತ್ತಾರೆ.
ಕಡ್ಡಾಯವಾಗಿ ಯಾವುದೇ ಒಂದು ವಿಶ್ವ ವಿದ್ಯಾನಿಲಯದಲ್ಲಿರುವ ಅಧ್ಯಯನ ಪೀಠಗಳು ಸದಸ್ಯರಾಗಿರುತ್ತಾರೆ. ಸಲಹಾ ಸಮಿತಿಯ ಅಧ್ಯಕ್ಷರು ನೇಮಿಸುವವರು ಅವರ ಅವಧಿ ಮುಗಿಯುವವರೆಗೂ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಕೃಷಿ ಆಶ್ರಮಗಳ ಪ್ರಮುಖರು ಸಂಚಾಲಕರಾಗಿರುತ್ತಾರೆ, ಸರ್ಕಾರಗಳ ಅದೇಶದ ಮೇರೆಗೆ ನಿಯಾಮುನುಸಾರ ಕೃಷಿ ಆಶ್ರಮಗಳು ನಿರ್ವಹಣೆ ಮಾಡಬೇಕಾಗುತ್ತದೆ. ಈ ನಿಯಮಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಅಗತ್ಯವಾಗಿದೆ.
ಕೃಷಿ ಆಶ್ರಮಗಳ ಜಮೀನಿನ ದಾಖಲೆಗಳು, ಜಮೀನಿಗೆ ಇರುವ ರಸ್ತೆ ಮತ್ತು ಜಿ.ಐ.ಎಸ್ ಲೇಯರ್ ಹಾಗೂ ಅಗ್ರಿಮೆಂಟ್ ನೀಡಬೇಕಾಗುತ್ತದೆ. ಒಂದೇ ಕೇತ್ರಕ್ಕೆ ಒಬ್ಬರಿಗಿಂತ ಹೆಚ್ಚಿನ ಕೃಷಿ ಆಶ್ರಮಗಳು ಮುಂದೆ ಬಂದರೆ, ಲಾಟರಿ ಎತ್ತುವ ಮೂಲಕ ಸೆಲೆಕ್ಷನ್ ಮಾಡಲು ನಿರ್ಣಯ ಮಾಡಲಾಯಿತು.
ಯಾವುದೇ ಕಾರಣಕ್ಕೂ ನಗದು ವ್ಯವಹಾರ ಇರಬಾರದು. ಎಲ್ಲವೂ ಡಿಜಿಟಲ್ ಮಯ, ಕೃಷಿ ಆಶ್ರಮಗಳು ಅನುದಾನ ಮಂಜೂರಾದ ಮೇಲೆ, ಮೊದಲೇ ಒಪ್ಪಂದ ಮಾಡಿಕೊಳ್ಳುವ ಸೇವಾ ಶುಲ್ಕವನ್ನು ಠೇವಣೆ ಮಾಡಿ, ಅದರ ಬಡ್ಡಿಯಲ್ಲಿ ರಾಜ್ಯ ಮಟ್ಟದ ಕಚೇರಿ ನಿರ್ವಹಣೆಗೆ ಬಳಸಲು ರೂಪುರೇಷೆ ನಿರ್ಧರಿಸಲು ನಿರ್ಣಯ ಮಾಡಲಾಯಿತು.
344 ಕೇತ್ರಗಳಲ್ಲಿ ಶೇ 75 ರಷ್ಟು ಹೊಣೆಗಾರಿಕೆ ಪಡೆದ ನಂತರ ಮತ್ತೊಂದು ಸಭೆ ಕರೆದು, ರೂಪುರೇಷೆ ಬಗ್ಗೆ ಸಮಾಲೋಚನೆ ನಡೆಸಲು ಹಾಗೂ ಅಗತ್ಯ ಕ್ರಕೈಗೊಳ್ಳಲು ಕುಂದರನಹಳ್ಳಿ ರಮೇಶ್‍ರವರಿಗೆ ಹೊಣೆಗಾರಿಕೆ ನೀಡಲು ನಿರ್ಣಯ ಮಾಡಲಾಯಿತು. ನಂತರ ಕನ್ನೇರಿ ಶ್ರೀಗಳ ನೇತೃತ್ವದಲ್ಲಿ ಸಭೆ ಆಯೋಜಿಸಲು ಬಿ.ಎಂ.ನಾಗಭೂಷಣ್ ರವರಿಗೆ ಹೊಣೆಗಾರಿಕೆ ನೀಡಲು ನಿರ್ಣಯ ಮಾಡಲಾಯಿತು.
ಶಕ್ತಿಪೀಠ ಫೌಂಡೇಷನ್ ಮತ್ತು ಕೃಷಿ ಆಶ್ರಮಗಳ ತಜ್ಞರ ತಂಡದೊಂದಿಗೆ, ಬ್ರೋಚರ್ ಸಹಿತ, ಮೇಲ್ಕಂಡ 334 ಚುನಾಯಿತ ಜನಪ್ರತಿನಿಧಿಗಳ ಬಳಿ ನಿಯೋಗ ಹೋಗಲು ಸಹ ನಿರ್ಣಯ ಮಾಡಲಾಯಿತು. ಈ ಬ್ರೋಚರ್ ನಲ್ಲಿ 344 ಕ್ಷೇತ್ರಗಳ ಹೊಣೆಗಾರಿಕೆ ಪಡೆದವರ ಸಂಪರ್ಕ ಮಾಹಿತಿ ಪ್ರದರ್ಶನ ಮಾಡಲು ನಿರ್ಣಯ ಮಾಡಲಾಯಿತು.
ಎಲ್ಲಾ ಡಿಜಿಟಲ್ ಡಾಟಾವನ್ನು ತುಮಕೂರು ಸ್ಟಾಟ್ ಅಫ್‍ನ ಸುಹೃತ್ ಉಜ್ಜನಿರವರು, ಬಿ.ಎಂ.ನಾಗಭೂಷಣ್, ಮಾರುತಿರಾವ್ ರವರಿಂದ ಪಡೆದು ಅಫ್ ಡೇಟ್ ಮಾಡಲು ಹೊಣೆಗಾರಿಕೆ ನೀಡಲು ನಿರ್ಣಯ ಮಾಡಲಾಯಿತು.
ಆಸಕ್ತರು ಸೂಕ್ತ ಸಲಹೆ ಮಾರ್ಗದರ್ಶನ ನೀಡಲು ಬಹಿರಂಗ ಆಹ್ವಾನ ನೀಡಲಾಗಿದೆ.