23rd August 2025
Share

TUMAKURU:SHAKTHIPEETA FOUNDATION

ದಿನಾಂಕ: 01.08.2025 ರಂದು ಶಕ್ತಿಪೀಠ ಕ್ಯಾಂಪಸ್‍ನಲ್ಲಿ ನಡೆಯ ಬೇಕಿದ್ದ, ರಾಜ್ಯದ ಕೃಷಿ ಆಶ್ರಮಗಳ ಸಭೆಯನ್ನು ವಿವಿಧ ಕಾರಣಗಳಿಂದ ದಿನಾಂಕ:05.08.2025 ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಅದೇ ದಿನ ಬೆಂಗಳೂರಿನಲ್ಲಿ ಕೆಳಕಂಡ ಕಾರ್ಯಾಗಾರ ಇರುವುದರಿಂದ, ಈಗ ಮತ್ತೆ ಸಭೆಯನ್ನು ಮುಂದೂಡಲಾಗಿದೆ.

ಶಕ್ತಿಪೀಠ ಕ್ಯಾಂಪಸ್‍ನಲ್ಲಿ, 1000 ಪ್ರಭೇಧಗಳ ಗಿಡ ಹಾಕಲು ಎಲ್ಲಾ ಪೂರ್ವ ಸಿದ್ಧತೆ ನಡೆಯುತ್ತಿದೆ. ಈಗ ಗಿಡ ಸಂಗ್ರಹಮಾಡುವ ಮತ್ತು ಹಾಕುವ ಕೆಲಸಕ್ಕೆ ಚಾಲನೇ ನೀಡಬೇಕಿದೆ. ದಿನಾಂಕ:01.08.2025 ರಿಂದ ಆರಂಭಿಸಿ, ದಿನಾಂಕ: 01.08.2026 ವೇಳೆಗೆ 1000 ಪ್ರಭೇಧಗಳ ಗಿಡ ಹಾಕಿ ಪೂರ್ಣಗೊಳಿಸಲು ಪ್ರತಿಜ್ಞೆ’ ಮಾಡಲಾಗಿದೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸತಿಯ ಕೂದಲು ಬಿದ್ದಿದೆ ಎಂದು ಹೇಳುತ್ತಿದ್ದಾರೆ, ದೇವಿಗೆ ಪೂಜಿಸುವ ಮೂಲಕ ಕೂದಲಿನಿಂದ,  ಕಾಲಿನವರೆಗೂ ಗಿಡಮೂಲಿಕೆಗಳ ಸಂಗ್ರಹ ಮಾಡುವ ಆಲೋಚನೆಯೂ  ಇದೆ,

  ಮೊದಲ ಹಂತದಲ್ಲಿ ರಾಜ್ಯಾದ್ಯಾಂತ ಗಿಡಗಳನ್ನು ಸಂಗ್ರಹಮಾಡಲು ನನ್ನ ಜೊತೆಯಲ್ಲಿ ಬರಲು ಶ್ರೀ ಗೋವಿಂದಪ್ಪನವರು, ಶ್ರೀ ಎಸ್.ಪಿ.ರಾಜೇಶ್‍ರವರು ಮತ್ತು ಶ್ರೀ ಜಿ.ಎಸ್.ಚಂದ್ರಶೇಖರ್ (ರೂಪೇಶ್) ರವರ ತಂಡ ಬರಲು ಒಪ್ಪಿದ್ದಾರೆ. ಶ್ರೀ ಗುರುಸಿದ್ದಾರಾದ್ಯರು ಆರೋಗ್ಯದ ಹಿತದೃಷ್ಠಿಯಿಂದ ಬರಲು ಸಾದ್ಯಾವಾಗುತ್ತಿಲ್ಲ. ಇನ್ನೂ ಯಾರದಾರೂ ಬರುವವರಿದ್ದರೆ ಸ್ವಾಗತ.

ಗಿಡಗಳ ಧಾರ್ಮಿಕ ಮಾಹಿತಿ ಜೊತೆಗೆ, ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಆರಂಭದಿಂದ ಹಾಕಿರುವ ಗಿಡಗಳ ಡಿಜಿಟಲ್ ಗಣತಿ ಮತ್ತು ಮುಂದೆ ಹಾಕಬೇಕಿರುವ ಡಿಜಿಟಲ್ ಮಾಹಿತಿಗಾಗಿ, ಹೊರಗುತ್ತಿಗೆ ಆಧಾರದಲ್ಲಿ ಪರಿಣಿತ ಸಂಸ್ಥೆಗಳಿಗೆ/ವ್ಯಕ್ತಿಗಳಿಗೆ ನೀಡಲು ಡಾ. ಜಗನ್ನಾಥ್‍ರವರು ಮತ್ತು ವನಲೋಕ ಡಾ.ಸಂತೋóಷ್ ರವರು ಮತ್ತು ಡಾ.ರೂಪರವರ ಜೊತೆ ಚರ್ಚೆ ನಡೆಯುತ್ತಿದೆ. ಗಿಡಗಳ ಸಂಗ್ರಹಕ್ಕೆ ಕೃಷಿ ಆಶ್ರಮಗಳು ಹೇಗೆ ಸಹಕರಿಸಲಿವೆ ಎಂಬ ಬಗ್ಗೆ ಡಾ.ನಾಗಭೂಷಣ್ ರವರೊಂದಿಗೆ ಚರ್ಚೆ ನಡೆಯುತ್ತಿದೆ.

1000 ಪ್ರಭೇಧಗಳ ಗಿಡ ಹಾಕುವ ಜೊತೆಗೆ, ಇದರಿಂದ ಹೇಗೆ ದುಡಿಮೆ ಮಾಡಬೇಕು, ರೈತರ ಆದಾಯ ಹೇಗೆ ವೃದ್ಧಿಯಾಬೇಕು, ಒತ್ತಡದಿಂದ ನರಳುತ್ತಿರುವವರಿಗೆ ಹೇಗೆ ನೆಮ್ಮದಿ ದೊರಕಿಸಬೇಕು, ಸಮಾಜಕ್ಕೆ ಯಾವ ಸಂದೇಶ ನೀಡಬೇಕು, ಸದೃಢ ಆರೋಗ್ಯವಂತರಾಗಲೂ ಗಿಡಮೂಲಿಕೆಗಳ ಪಾತ್ರ ಎಷ್ಟಿದೆ, ಎಂಬುದು ಅಷ್ಟೇ ಮುಖ್ಯವಾಗಿದೆ. 

   ಸರ್ಕಾರದ ಹಂತದಲ್ಲಿ ದೊರೆಯ ಬಹುದಾದ ತಾಂತ್ರಿಕ ಸಲಹೆಗಳ ಬಗ್ಗೆಯೂ ವಿಶೇóಷ ಗಮನ ಹರಿಸಬೇಕಿದೆ. 1000 ಪ್ರಭೇಧಗಳ ಜೊತೆಗೆ ಭೂಮಿಯಲ್ಲಿ ಹುಟ್ಟುವ ಕಳೆ ಮತ್ತು ಬೆಳೆಗಳ ನಾಲೇಡ್ಜ್ ಬ್ಯಾಂಕ್ @ 2047’ ರಚಿಸುವುದು ಅಗತ್ಯವಾಗಿದೆ. ಈ ಬಗ್ಗೆ ಒಂದು ಸ್ಟಾರ್ಟ್ ಅಫ್’ ಸ್ಥಾಪಿಸಲು ಸಾದ್ಯವೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಅಳಿವಿನಂಚಿನಲ್ಲಿರುವ ಗಿಡಗಳನ್ನು ಗುರುತಿಸಿ,ಗಿಡ ನೀಡುವ ಪ್ರತಿಯೊಬ್ಬರನ್ನೂ, ನಾಲೇಡ್ಜ್ ಬ್ಯಾಂಕ್ @ 2047 ಸದಸ್ಯರನ್ನಾಗಿ ಮಾಡುವ ಆಲೋಚನೆಯೂ ಇದೆ.

ಆಸಕ್ತರು ಸಂಪರ್ಕಿಸಲು ಮನವಿ.