23rd August 2025
Share

TUMAKURU:SHAKTHIPEETA FOUNDATION

ಶಕ್ತಿಪೀಠ : ನಾನು ದಿನಾಂಕ: 01.08.1988 ರಿಂದಲೂ, ಶಕ್ತಿ ದೇವತೆ ಮಾತಾ ಚಾಮುಂಡೇಶ್ವರಿ ಆರಾಧಕ, ಕಳೆದ 37 ವರ್ಷಗಳಿಂದಲೂ ಪರಮ ಭಕ್ತನಾಗಿದ್ದೇನೆ, ಈ ಹಿನ್ನಲೆಯಲ್ಲಿ ವಿಶ್ವದ 108 ಶಕ್ತಿಪೀಠಗಳ ಲೈವ್ ಪ್ರಾಜೆಕ್ಟ್ ಆರಂಭಿಸಿದ್ದೇನೆ.

ಜಲಪೀಠ: ದಿನಾಂಕ:07.01.1977 ರಿಂದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಜೊತೆಗೂಡಿ, ಕರ್ನಾಟಕ ರಾಜ್ಯ ಸಮಗ್ರ ನೀರಾವರಿಗಾಗಿ ಶ್ರಮಿಸುತ್ತಿದ್ದಾಗ ಬಂದ ಅನುಭವದಲ್ಲಿ, ಜಲಗ್ರಂಥ,ರಚಿಸಿ, ಆ ಮೂಲಕ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯಡಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಾಕ್ಕಾಗಿ’ ಪ್ರತಿ ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಬೇಕು. ಈ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರದ ಉದ್ದೇಶಿತ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆ ನಿರ್ಮಾಣ ಮಾಡುತ್ತಿದ್ದೇನೆ.

ಅಭಿವೃದ್ಧಿ ಪೀಠ : ಕಳೆದ 35 ವರ್ಷಗಳಿಂದಲೂ ತುಮಕೂರು ಮಾಜಿ ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಗೂಡಿ, ತುಮಕೂರು ಜಿಲ್ಲೆ ಬಿದರೆಹಳ್ಳಕಾವಲ್ ನಲ್ಲಿ ಹೆಚ್.ಎ.ಎಲ್ ಘಟಕ ಸ್ಥಾಪನೆಗಾಗಿ ಶ್ರಮಿಸುವಾಗ, ಕೇಂದ್ರ ಸರ್ಕಾರದಿಂದ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿಗೆ ಅನುದಾನ ತರಲು ನಿರಂತರವಾಗಿ ಶ್ರಮಿಸಿದ ಅನುಭವದ ಹಿನ್ನಲೆಯಲ್ಲಿ ಹಾಗೂ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿರುವ ರಾಜ್ಯಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ, ರಾಜ್ಯ ಸರ್ಕಾರದ ಯೋಜನಾ ಇಲಾಖೆಯಲ್ಲಿ ಉಚಿತವಾಗಿ ಎಂ.ಓ.ಯು ಮಾಡಿಕೊಂಡು, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರುವ ಕಾರ್ಯತಂತ್ರ ರೂಪಿಸುತ್ತಿದ್ದೇನೆ.

ವೃಕ್ಷಪೀಠ: ಶಕ್ತಿದೇವತೆ, ಶಿವ-ಪಾರ್ವತಿ ಯಾವುದೇ ಕಟ್ಟಡದಲ್ಲಿ ವಾಸವಾಗಿರಲಿಲ್ಲ, ರಾವಣ ಬೃಹತ್ ಅರಮನೆಯನ್ನು ಶಿವನಿಗೆ ಕಟ್ಟಿಸಿದಾಗ, ಶನಿಯು  ಅರಮನೆಯನ್ನೇ ಭಸ್ಮ ಮಾಡಿದ್ದು ಪುರಾಣದಲ್ಲಿದೆ. ಅವರ ವಾಸ ನೀರು, ನದಿ, ಬೆಟ್ಟಗುಡ್ಡ, ಮರ ಗಿಡದ ಮಧ್ಯೆ, ಈ ಹಿನ್ನಲೆಯಲ್ಲಿ 1000 ಪ್ರಭೇಧಗಳ ಗಿಡಹಾಕಿ ಬೆಳೆಸಲು ಆರಂಭಿಸಿದ್ದೇನೆ.ದೇವರ ವನ, ದೇವರ ಕಾಡುಗಳ ಬಗ್ಗೆಯೂ ಅಧ್ಯಯನ ಆರಂಭಿಸಿದ್ದೇನೆ.

ಧರ್ಮ/ಜಾತಿ/ಉಪಜಾತಿ ಪೀಠ : ಶಕ್ತಿದೇವತೆಗಳನ್ನು ಎಲ್ಲಾ ಧರ್ಮದ, ಎಲ್ಲಾ ಜಾತೀಯವರು ಪೂಜಿಸುತ್ತಾರೆ ಎಂದು ಹೇಳುತ್ತಾರೆ, ನೀರು/ಗಂಗಾಮಾತೆ ಮತ್ತು ಶಕ್ತಿದೇವತೆಗಳಿಗೆ ಇರುವ ಸಂಭಂದ, ಯಾವ ಧರ್ಮದವರು ಯಾವ ಗಿಡ ಪೂಜಿಸುತ್ತಾರೆ, ಏಕೆ ಪೂಜಿಸುತ್ತಾರೆ, ಯಾವ ದೇವರ ಸಂಕೇತ ಎಂಬ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದ್ದೇನೆ. ನೇಚರ್ ಈಸ್ ಗಾಡ್ ನಮ್ಮ ಗುರಿ.

 ಅಲ್ಲದೇ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಎಲ್ಲಾ ಧರ್ಮದವರ ಅಗತ್ಯವೂ ಇದೆ ಅಲ್ಲವೇ ? ನಾನೂ ಒಬ್ಬ ರೈತನಾಗಿ, ರೈತರೇ ಆರಂಭಿಸುತ್ತಿರುವ ಕೃಷಿ ಆಶ್ರಮಗಳ ಮುಖಾಂತg, ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಯಲ್ಲಿರುವÀ, ಈ ಎಲ್ಲಾ ವಿಷಯಗಳ ಜ್ಞಾನಿಗಳನ್ನು ಒಂದೇಡೆ ತರುವುದೇ ‘ನಾಲೇಡ್ಜ್ ಬ್ಯಾಂಕ್ @ 2047 ಪ್ರಮುಖ ಉದ್ದೇಶವಾಗಿದೆ. 

ಇದಕ್ಕೆ ಸರ್ಕಾರz ಮುದ್ರೆಯೂ ಬೇಕಾಗಿದೆ.  ಆರ್ಥಿಕ ನೆರವಿನ ಅಗತ್ಯವೂ ಇದೆ, ಸಂಶೋಧನೆ, ಜ್ಞಾನ ಯಾರಪ್ಪನ ಮನೆ ಸ್ವತ್ತಲ್ಲ, ಆದ್ದರಿಂದ ನಾಲೇಡ್ಜಬಲ್ ಪರ್ಸನ್ ಗಳನ್ನು ಹುಡುಕುವ, ಪ್ರೋಹ್ಸಾಹಿಸುವ, ಬೆನ್ನು ತಟ್ಟುವ ಕೆಲಸವನ್ನು ಮಾಡಲೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆನೇಕ ಯೋಜನೆ ಜಾರಿಗೊಳಿಸಿವೆ, ಅವುಗಳನ್ನು ಜಾರಿಗೊಳಿಸಲು ಕೃಷಿ ಆಶ್ರಮಗಳ ಜ್ಞಾನಿಗಳ ಮೂಲಕ ಜನಾಂದೋಲನ ರೂಪಿಸುವ ಉದ್ದೇಶ ನಮ್ಮದಾಗಿದೆ.

ವಿಶ್ವ ವಿದ್ಯಾನಿಲಯಗಳಲ್ಲಿನ ಅಧ್ಯಯನ ಪೀಠಗಳು, ರಾಜ್ಯದ ಪ್ರತಿಯೊಂದು ಗ್ರಾಮಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪಾತ್ರದ ಬಗ್ಗೆಯೂ ಬೆಳಕು ಚೆಲ್ಲಲು ಕೃಷಿ ಆಶ್ರಮಗಳ ನೇತೃತ್ವದಲ್ಲಿ ರೂಪುರೇಷೆ ಸಿದ್ಧವಾಗುತ್ತಿದೆ.

ಕೃಷಿ ಆಶ್ರಮಗಳ ಪ್ರಮುಖ ಉದ್ದೇಶ ಪಂಚಭೂತಗಳ ಸಂರಕ್ಷಣೆ, ಇದು ವಿಜ್ಞಾನ ಅಲ್ಲವೇ ? ನಂಬರ್ ಒನ್ ಕರ್ನಾಟಕ @ 2047 ರೈತರಿಂದಲೇ ಆರಂಭವಾಗಿದೆ.ಶೇ 80 ರಷ್ಟು ಜನ ಸಂಖ್ಯೆ ಇರುವ ರೈತರ ದೃಢ ನಿರ್ಧಾರವನ್ನು ಸರ್ಕಾರಗಳು ಮೆಚ್ಚ ಬೇಕಲ್ಲವೇ ?

1.      ಕೃಷಿ ಆಶ್ರಮಗಳ ರಾಜ್ಯ ಮಟ್ಟದ ಕಚೇರಿ,

2.     ನಾಲೇಡ್ಜ್ಬ್ಯಾಂಕ್ @ 2047

3.     ಆರ್ ಅಂಡ್ ಡಿ ಮಾನಿಟರಿಂಗ್ ಸೆಲ್

  ಕಚೇರಿಗಳು ಕೃಷಿ ಆಶ್ರಮಗಳ ನೇತೃತ್ವದಲ್ಲಿ ಒಂದೇ ಕಡೆ, ತುಮಕೂರಿನ ‘ಶಕ್ತಿಭವನ’ ದಲ್ಲಿ ಸ್ಥಾಪಿಸಲು ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಡಾ.ಬಿ.ಎಂ.ನಾಗಭೂಷಣ್ ರವರು ಮತ್ತು ಅವರ ತಂಡ ಶೀಘ್ರದಲ್ಲಿ ವರದಿ ನೀಡಲಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಶ್ರೀ ಎನ್.ಎಸ್.ಬೋಸರಾಜ್ ರವರು, ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದು ಕೃಷಿ ಆಶ್ರಮಗಳಿಗೆ ಸ್ಪೂರ್ತಿ ತಂದಿದೆ. ಹಣ ಬಂದಾಗ ಪಡೆಯುವ ಒಪ್ಪದದೊಂದಿಗೆ, ಸಾಲದ ರೂಪದಲ್ಲಿ ಸೇವೆ ಸಲ್ಲಿಸಲು  ನೂರಾರು ಜನರು ಮುಂದೆ ಬಂದಿದ್ದಾರೆ, ತಾವೂ ಕೈಜೋಡಿಸ ಬಹುದಾಗಿದೆ.