17th September 2025
Share

TUMAKURU:SHAKTHI PEETA FOUNDATION

ಸ್ವಾಂತಂತ್ರ್ಯ ಬಂದು 80 ವರ್ಷಗಳಾಗುತ್ತಿದ್ದರೂ ದೆಹಲಿಯಲ್ಲಿ, ಕರ್ನಾಟಕ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲು ಸಾದ್ಯಾವಾಗಿರಲಿಲ್ಲ.

ರಾಜ್ಯ ಸರ್ಕಾರದ ಮನವಿ ಮೇರೆಗೆ, ಕೇಂದ್ರ ಸರ್ಕಾರ ಅರ್ಧ ಎಕರೆ ಜಮೀನು ಮಂಜೂರು ಮಾಡಿದೆ, ಹಣ ಪಾವತಿಸಲು ಲೋಕೊಪಯೋಗಿ ಇಲಾಖೆ ಆಯವ್ಯಯದಲ್ಲಿ ಹಣ ಮೀಸಲಿಟ್ಟಿದ್ದರೂ, ಇದೂವರೆಗೂ ಪ್ರಸ್ತಾವನೆಯನ್ನು ದೆಹಲಿಯಲ್ಲಿ ಇರುವ ರೆಸಿಡೆಂಟ್ ಕಮೀಷನರ್ ನೀಡದೇ ಇರುವುದು ಆಶ್ಚರ್ಯ ತಂದಿದೆ. ದೆಹಲಿ ರೆಸಿಡೆಂಟ್ ಕಮೀಷನರ್ ಕಚೇರಿ ಚುರುಕಾಗಬೇಕು.

ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್ ರವರು ಸೇರಿದಂತೆ, ಲೋಕೊಪಯೋಗಿ ಇಲಾಖೆಯ ವಿವಿಧ ಹಂತದ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗಿದೆ.

ಈ ಮದ್ಯೆ ಹಿಂದುಳಿದ ವರ್ಗಗಳ ಇಲಾಖೆಯ ಅನುದಾನ ಬಳಕೆ ಬಗ್ಗೆಯೂ ಚರ್ಚೆ ಆರಂಭವಾಗಿದೆ ಯಂತೆ.ನಿಖರವಾದ ಮಾಹಿತಿ ಸಂಗ್ರಹ ಮಾಡಬೇಕಿದೆ. ಎಲ್ಲಾ ಜಾತಿಯ ಬಡವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧಾರ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆ.